ಉಪ ಚುನಾವಣೆ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಗೆ ಪರಿಣಾಮ ಬೀರದು; ಸಚಿವ ಅನಂತಕುಮಾರ


ಶಿರಸಿ: ಉಪ ಚುನಾವಣೆಯ ಫಲಿತಾಂಶದಿಂದ ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಹಾಗೂ ಸಂಸದ ಅನಂತಕುಮಾರ ಹೆಗಡೆ ಹೇಳಿದರು.‌

ಇಲ್ಲಿನ ವಿವೇಕಾನಂದ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಚುನಾವಣೆಯೇ ಬೇರೆ ಮೇ ದಲ್ಲಿ ನಡೆಯುವ ಚುನಾವಣೆಯೇ ಬೇರೆ ಎಂದರು.‌ ಅಭಿವೃದ್ಧಿ ಅರ್ಥ ಆಗದ, ಜನರ ಹಾಗೂ ಜಿಲ್ಲೆಯ ಬಗ್ಗೆ ಕಳಕಳಿ ಇಲ್ಲದ ಪರಿಸರವಾದಿಗಳು ಕುಮಟಾ ತಡಸ್ ರಸ್ತೆ ಅಭಿವೃದ್ಧಿಯನ್ನು ವಿರೋಧ ಮಾಡುತ್ತಿದ್ದಾರೆ ಎಂದು ರಸ್ತೆ ಅಭಿವೃದ್ಧಿಯನ್ನು ವಿರೋಧಿಸುತ್ತಿರುವುದು ನಮ್ಮ ಜಿಲ್ಲೆಯ ದೌರ್ಭಾಗ್ಯ. ಅಭಿವೃದ್ಧಿ ಅರ್ಥವಾಗದವರ ಪ್ಯಾಶನ್ ಇದಾಗಿದೆ. ಹಲವಾರು ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ ಎಂದು ಅಸಮಧಾನ ವ್ಯಕ್ತ ಪಡಿಸಿದರು.

ಅಭಿವೃದ್ಧಿ ವಿಷಯದಲ್ಲಿ ನಾವು ಅಚಲರಾಗಿದ್ದು, ಕೇಂದ್ರ ಸರ್ಕಾರದ ಅನುದಾನದಡಿಯಲ್ಲಿ ಜಿಲ್ಲೆಯ ಎಲ್ಲಾ ರಸ್ತೆಗಳು ಮೇಲ್ದರ್ಜೆಗೆ ಏರಿದೆ. ಸಾಗರಮಾಲಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳು ಜಿಲ್ಲೆಗೆ ಬಂದಿದ್ದು, ಯೋಜನೆ ಪೂರ್ಣ ಆಗುವವರೆಗೆ ರಸ್ತೆಯಲ್ಲಿ ಓಡಾಡುವ ನಿರ್ವಹಣೆಯನ್ನು ಮಾಡುವ ಹಾಗೆ ಇಲಾಖೆಗಳಿಗೆ ಸೂಚನೆ ನೀಡಿದ್ದೇನೆ ಎಂದರು. ಟಿಪ್ಪು ಜಯಂತಿಯ ಕುರಿತಾಗಿ ನಾನು ಈಗಾಗಲೇ ಲಿಖಿತ ಹೇಳಿಕೆ ನೀಡಿದ್ದು, ರಾಜ್ಯ ಸರ್ಕಾರ ಟಿಪ್ಪು ಜಯಂತಿ ಮಾಡಿದಲ್ಲಿ ಅದಕ್ಕೆ ಕಾಲವೇ ಉತ್ತರ ನೀಡಲಿದೆ ಎಂದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.