ಹಬ್ಬದ ಚೌಲದೆತ್ತಿನೊಂದಿಗೆ ಸೆಲ್ಪಿ ಸ್ಪರ್ಧೆ; ವಿಜೇತರಿಗೆ ಬಹುಮಾನ; ಏನಿದರ ಗಮ್ಮತ್ತು..!

ಶಿರಸಿ: ಹಿಂದೊಂದು ಕಾಲವಿತ್ತು, ಹಳ್ಳಿಗಳಲ್ಲಿ ಕೃಷಿಯೇ ಜೀವನಧಾರವಾಗಿತ್ತು. ಜಗತ್ತು ಬೆಳೆಯುತ್ತಾ ಬಂದಂತೆ ಹಳ್ಳಿಗಳಿಗೆ ಆಧುನೀಕರಣದ ಪರಿಚಯವಾದಂತೆ ಯುವಕರೆಲ್ಲ ಹಳ್ಳಿಯಿಂದ ಪಟ್ಟಣದ ಕಡೆ ಮುಖ ಮಾಡುತ್ತ ಹೊರಟರು.
ಹಾಗೆ ಹಳ್ಳಿಯ ಜೀವನದಲ್ಲಿ ಬದಲಾವಣೆಯ ಬಿರುಗಾಳಿ ಪ್ರಾರಂಭವಾಗಿ ಹಳ್ಳಿಯ ಜೀವನ ಶೈಲಿ ಮರೆಯಾಗುತ್ತ ನಗರದ ಪ್ರಭಾವ ಹೆಚ್ಚುತ್ತಾ ಬಂತು. ಗದ್ದೆಯನ್ನು ಮಾಡುವವರು ಕಡಿಮೆಯಾದಂತೆ ದನ-ಕರುಗಳು ಕಾಣ ಬರುವುದು ವಿರಳವಾಗುತ್ತಾ ಬಂದಿದೆ. ಆದರೆ ದೀಪಾವಳಿ ಹಬ್ಬವೆಂದರೆ ಗೋ ಪೂಜೆ ಎಂದು ಆಚರಣೆ ಇರುವುದರಿಂದ ಈ ಸಂದರ್ಭದಲ್ಲಿ ಎತ್ತುಗಳನ್ನು ಸಿಂಗರಿಸಿ ಅದನ್ನು ಪೂಜಿಸುವುದು ರೂಢಿ.
ಚೌಲದೆತ್ತಿನೊಂದಿಗೆ ಸೆಲ್ಫಿ ಸ್ಪರ್ಧೆ: ಇಂದಿನ ಯುವ ಜನತೆ ಯಾವಾಗಲೂ ಸಾಮಾಜಿಕ ಜಾಲ ತಾಣಗಳಿಗೇ ಅಂಟಿಕೊಂಡಿರುತ್ತೆ, ಸ್ಮಾರ್ಟ ಫೋನ್ ಯುಗವಾಗಿರುವುದರಿಂದ ಪ್ರತಿಯೊಂದು ಸಂಭ್ರಮಕ್ಕೂ ಸೆಲ್ಫಿ ಸಾಕ್ಷಿ ಬೇಕು. ಜನತೆಗೆ  ಎಲ್ಲವೂ ಫೋಟೋದಲ್ಲಿ ಬಿಟ್ಟರೆ ನಿಜವದ ಆಚರಣೆಯ ವಿಧಾನ ತಿಳಿದಿಲ್ಲ.
ಹೀಗಾಗಿ ಅದೇ ಮಾರ್ಗದ ಮೂಲಕ ಹಳ್ಳಿಗಳ ಸೊಬಗನ್ನು ಯುವಜನತೆಗೆ – ವಿಶೇಷವಾಗಿ ಸಾಮಾಜಿಕ ಜಾಲತಾಣದಲ್ಲಿರುವ ಯುವಜನತೆಗೆ – ಪರಿಚಸುವ ಉದ್ದೇಶದಿಂದ ‘ಕನೆಕ್ಟ್ ಫಾರ್ಮರ್ ಡಾಟ್ ಕಾಮ್’ ವತಿಯಿಂದ ಆನ್‌ಲೈನ್ ಸೆಲ್ಫಿಸ್ಪರ್ಧೆಯನ್ನು ಆಯೋಜಿಸಲಾಗಿದೆ. ದಿ. ಕೃಷ್ಣ ವೆಂಕಟ್ರಮಣ ಹೆಗಡೆ ಉಳ್ಳಾನೆ ಅವರ ಸ್ಮರಣಾರ್ಥ ಈ ಬಾರಿಯ ದೀಪಾವಳಿಯಲ್ಲಿ ‘ಚೌಲದೆತ್ತಿನೊಂದಿಗೆ ಸೆಲ್ಫಿ’ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
’ಕನೆಕ್ಟ್ ಫಾರ್ಮರ್ ಡಾಟ್ ಕಾಮ್’ನ ಫೇಸ್‌ಬುಕ್ ಪೇಜ್‌ನಲ್ಲಿ https://facebook.com/connectFarmer ಈ ಆನ್‌ಲೈನ್ ಸ್ಪರ್ಧೆ ನಡೆಸುತ್ತಿದೆ. ಸ್ಪರ್ಧಿಗಳು ದೀಪಾವಳಿ ಹಬ್ಬದ ನಂತರ. ನ. 12 ರೊಳಗಾಗಿ ತಮ್ಮ ಮನೆಯ ಸಿಂಗರಿಸಿದ ಎತ್ತಿನೊಂದಿಗೆ ಒಂದು ಸೆಲ್ಫಿಯನ್ನು ತೆಗೆದು ಅದನ್ನು ಇಮೇಲ್ ( [email protected]) ವಿಳಾಸಕ್ಕೆ  ನ. 12 ರೊಳಗಾಗಿ ಕಳುಹಿಸಬೇಕು. ಆ ಎಲ್ಲ ಫೋಟೋಗಳನ್ನು  ನ. 12ರಿಂದ 20 ರ ತನಕ ಕನೆಕ್ಟ್ ಫಾರ್ಮರ್ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗುತ್ತದೆ. ಒಂದು ವಾರದ ಅವಧಿಯಲ್ಲಿ ಯಾವ ಪೋಟೋಕ್ಕೆ ಜನ ಲೈಕ್ ಮೂಲಕ ಹೆಚ್ಚಿನ ಮತ ನೀಡಿದ್ದರೋ ಅಂತಹ ಫೋಟೋವನ್ನು ಕಳಿಸಿದವರಿಗೆ ಕನೆಕ್ಟ್ ಫಾರ್ಮರ್ ವತಿಯಿಂದ ಬಹುಮಾನವಾಗಿ ಒಂದು ಸರ್ಟಿಫಿಕೇಟ್, ಸ್ಮರಣಿಕೆ ಹಾಗೂ ಕನೆಕ್ಟ್ ಫಾರ್ಮರ್ ಟಿ-ಶರ್ಟ್ ನೀಡಲಾಗುತ್ತದೆ. ಎರಡು ಮತ್ತು ಮೂರನೆಯ ಸ್ಥಾನ ಗಳಿಸಿದ ಸ್ಪರ್ಧಿಗಳಿಗೆ ಸರ್ಟಿಫಿಕೇಟ್ ಕಳಿಸಿಕೊಡಲಾಗುತ್ತದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.
 ಸ್ಪರ್ಧೆಯ ನಿಯಮಗಳು:
  •  ದೀಪಾವಳಿಯಲ್ಲಿ ಸಿಂಗರಿಸಿದ ತಮ್ಮ ಮನೆಯ ಎತ್ತಿನೊಂದಿಗೆ ಒಂದು ಚಂದದ ಸೆಲ್ಫಿಯಾಗಿರಬೇಕು.(ಜಾಗ್ರತೆ ಎತ್ತು ಗುಮ್ಮಿ ಬಿಟ್ಟಾತು )
  •  12 ನ. 2018ರೊಳಗಾಗಿ ಕನೆಕ್ಟ್ ಫಾರ್ಮರ್ ಫೇಸ್‍ಬುಕ್ ಪೇಜ್‍ಗೆ ಮೆಸೇಜ್ ಅಥವಾ ಇಮೇಲ್ ಮೂಲಕ ಫೋಟೋ ಕಳುಹಿಸಬೇಕು.
  •  ಫೋಟೋದೊಂದಿಗೆ ಪ್ರತ್ಯೇಕವಾಗಿ ಪೂರ್ಣ ವಿಳಾಸ ಮತ್ತು ಮೊಬೈಲ್ ನಂಬರ್ ಇರಬೇಕು.
  •  ಸ್ಪರ್ಧೆಯಲ್ಲಿ ಸೆಲ್ಫಿಯನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂದು ತಿಳಿಸಲಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.