ಮಾಜಾಳಿ ಬಳಿ 1 ಲಕ್ಷ ರೂ ಮೌಲ್ಯದ ಗೋವಾ ಅಕ್ರಮ ಮದ್ಯ ವಶ

ಕಾರವಾರ: ಅರಣ್ಯ ಪ್ರದೇಶದಲ್ಲಿ ಸಾಗಾಟ ಮಾಡಲು ಸಂಗ್ರಹಿಸಿಟ್ಟ ಗೋವಾದ ಅಕ್ರಮ ಮದ್ಯಗಳನ್ನು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ತಾಲೂಕಿನ ಮಾಜಾಳಿಯ ತೀಳ್ ಮಾತಿ ಅರಣ್ಯ ಪ್ರದೇಶ ಹಾಗೂ ಮಾಜಾಳಿಯ ಮೀನು ಮಾರುಕಟ್ಟೆ ಪ್ರದೇಶದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಸುಮಾರು 1 ಲಕ್ಷ ರುಪಾಯಿ ಮೌಲ್ಯದ ವಿವಿಧ ಬ್ರ್ಯಾಂಡಿನ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 190 ಲೀ. ಗೋವಾ ಲಿಕ್ಕರ್, 170 ಲೀ. ಗೋವಾ ಫೆನ್ನಿ, 40 ಲೀ. ಗೋವಾದ ಬಿಯರ್ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂದರ್ಭದಲ್ಲಿ ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.