ನ.17 ರಂದು ಕದಂಬ ಮಾರ್ಕೆಟಿಂಗ್‍ನ ನೂತನ ಕಟ್ಟಡ ಉದ್ಘಾಟನೆ; ಸಂಬಾರ ಸಂಭ್ರಮ ಕಾರ್ಯಕ್ರಮ


ಶಿರಸಿ: ಇಲ್ಲಿನ ಎಪಿಎಮ್‍ಸಿ ಪ್ರಾಂಗಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿ. ಕಟ್ಟಡದ ಉದ್ಘಾಟನಾ ಸಮಾರಂಭ ನ.17 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದ್ದು, ಅದೇ ದಿನ ಮಧ್ಯಾಹ್ನ 3 ರಿಂದ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಸಂಬಾರ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸೋಮವಾರ ನಿರ್ಮಾಣ ಹಂತದಲ್ಲಿರುವ ನೂತನ ಕಟ್ಟಡದಲ್ಲಿ ಸುದ್ದಿಗೋಷ್ಠಿ ನಡೆಸಿ, ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಶಂಭುಲಿಂಗ ಹೆಗಡೆ, ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಶ್ರೀ ಗಂಗಾಧರೇಂಧ್ರ ಸರಸ್ವತಿ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆಯವರು ಕಟ್ಟಡವನ್ನು ಉದ್ಘಾಟಿಸಲಿದ್ದು, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸಲಿದ್ದಾರೆ. ಬೃಹತ್ ಪ್ಯಾಕಿಂಗ್ ಮಳಿಗೆ ಪ್ರಾರಂಭ ಮಾಡಲಾಗಿದ್ದು, ಸಚಿವ ಆರ್.ವಿ.ದೇಶಪಾಂಡೆ ಉದ್ಘಾಟಿಸುವರು. ಪ್ರದರ್ಶನ ಮಳಿಗೆಯನ್ನು ರಿಸರ್ವ ಬ್ಯಾಂಕ್ ನಿರ್ದೇಶಕ ಸತೀಶ ಮರಾಠೆ ಹಾಗೂ ಸಾವಯವ ಮಾರಾಟ ಮಳಿಗೆಯನ್ನು ತೋಟಗಾರಿಕಾ ಸಚಿವ ಎಮ್.ಸಿ.ಮನಗುಳಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಶಿವರಾಮ ಹೆಬ್ಬಾರ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ್ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.

ಸಾಂಬಾರ ಸಂಭ್ರಮ: ಕದಂಬ ಮಾರ್ಕೆಟಿಂಗ್, ಕೃಷಿ ವಿಶ್ವವಿದ್ಯಾಲಯ ಧಾರವಾಡ, ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ ಶಿರಸಿ, ಸಿ.ಎಸ್.ಎಸ್.ಎಮ್.ಐ.ಡಿ.ಎಚ್ . ಇವರ ಸಂಯುಕ್ತ ಆಶ್ರಯದಲ್ಲಿ ಸಂಬಾರ ಸಂಭ್ರಮ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಉದ್ಘಾಟಿಸಲಿದ್ದು , ತೋಟಗಾರಿಕಾ ಸಚಿವ ಎಮ್.ಸಿ ಮನಗುಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಮ್.ಜಿ.ಚೆಟ್ಟಿ, ಬಾಗಲಕೋಟ ತೋಟಗಾರಿಕಾ ವಿಶ್ವವಿದ್ಯಾಲಯದ ಉಪಕುಲಪತಿ ಕೆ.ಎಮ್.ಇಂದಿರೇಶ್, ನಬಾರ್ಡ್ ಮಹಾಪ್ರಭಂದಕ ಸೂರ್ಯಕಾಂತ, ತೋಟಗಾರಿಕಾ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ಟಿ.ಎಮ್.ಎಸ್. ಅಧ್ಯಕ್ಷ ಜಿ.ಎಮ್.ಹುಳಗೋಳ, ಕದಂಬ ಮಾರ್ಕೆಟಿಂಗ್ ಅಧ್ಯಕ್ಷ ಶಂಭುಲಿಂಗ ಹೆಗಡೆ ಭಾಗವಹಿಸಲಿದ್ದಾರೆ. ಸಾಂಬಾರು ಸಂಭ್ರಮ ಪ್ರಯುಕ್ತ ಸಂಬಾರ ಬೆಳೆಗಳ ಮೌಲ್ಯ ವರ್ಧನೆ ಮತ್ತು ಮಾರುಕಟ್ಟೆ ವಿಷಯದ ಕುರಿತು ಗೋಷ್ಠಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಎಮ್.ವಿ.ಭಟ್ ತಟ್ಟಿಕೈ, ಡಾ.ಮಂಜು ಎಮ್.ಜೆ., ಡಾ. ಶಿವಶಂಕರಮೂರ್ತಿ, ಶ್ರೀಪಾದ ಹೆಗಡೆ ದೊಡ್ನಳ್ಳಿ, ಗಣಪತಿ ಮುರೇಗಾರ, ನರೇಂದ್ರ ಹೊಂಡಗಾಶಿ ಮುಂತಾದವರು ಇದ್ದರು.

2005 ರಲ್ಲಿ 5 ಲಕ್ಷ ಬಂಡವಾಳದಲ್ಲಿ ಪ್ರಾರಂಭವಾದ ಸಂಸ್ಥೆ ಇಂದು 18 ಕೋಟಿ ವಹಿವಾಟು ಮಾಡುತ್ತಿದೆ. ಕೃಷಿ ಕ್ಷೇತ್ರದಲ್ಲಿ ಬೆಳೆಯುವ ಎಲ್ಲಾ ಬೆಳೆ ಸ್ವೀಕರಿಸಿ ಮಾರುಕಟ್ಟೆ ಕಲ್ಪಸಿ, ರೈತ ಮಿತ್ರರಾಗಿದ್ದೇವೆ. ನೂತನ ಕಟ್ಟಡ 2 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು , ನೂತನ ಕಚೇರಿ,
ರೈತರ ತರಬೇತಿ ಕೇಂದ್ರ, ವ್ಯವಸ್ಥಿತವಾದ ಪ್ಯಾಕಿಂಗ್ ಯುನಿಟ್, ಆರ್ಗನಿಕ್ ಔಟ್ ಲೆಟ್, ಸಭಾಭವನ ಇರಲಿದೆ. 5 ಸಾವಿರ ಸ್ಕ್ವಾರ್ ಫೂಟ್ ನ 3 ಅಂತಸ್ತು ನಿರ್ಮಾಣ ಆಗಲಿದೆ.

ಶಂಭುಲಿಂಗ ಹೆಗಡೆ, ಅಧ್ಯಕ್ಷ, ಕದಂಬ ಮಾರ್ಕೆಟಿಂಗ್.

ಆರೋಗ್ಯ ವಿಮೆ ಕುರಿತು ಗೋಷ್ಠಿ: ಉದ್ಘಾಟನಾ ಕಾರ್ಯಕ್ರಮ ಮೊದಲು 10 ಗಂಟೆಯಿಂದ ರೈತ ಸಹಕಾರಿಗಳ ಮಿಲಕ ಕಾರ್ಯಕ್ರಮ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು , ರಿಸರ್ವ ಬ್ಯಾಂಕ್ ನಿರ್ದೇಶಕ ಸತೀಶ ಮರಾಠೆ, ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ನಿ. ಅಧ್ಯಕ್ಷ ಬಿ.ಎಚ್.ಕೃಚ್ಣ ರೆಡ್ಡಿ, ಸಹಕಾರ ಭಾರತಿ ಅಧ್ಯಕ್ಷ ಎಮ್.ಜೆ.ಪಾಟೀಲ್, ಸಿಎ ರವೀಂದ್ರನಾಥ, ಕದಂಬ ಮಾರ್ಕೆಟಿಂಗ್ ಅಧ್ಯಕ್ಷ ಶಂಭುಲಿಂಗ ಹೆಗಡೆ ಭಾಗವಹಿಸಲಿದ್ದಾರೆ. ‌ಕೃಷಿಕರ ಫಸಲು ಹಾಗೂ ಆರೋಗ್ಯ ವಿಮೆ ಕುರಿತು ಗೋಷ್ಠಿ ನಡೆಯಲಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.