‘ದಯೆಯೇ ಪ್ರಧಾನ’ ವಿಷಯದ ಮೇಲೆ ಚಿತ್ರ ಬಿಡಿಸಿ ಗಮನ ಸೆಳೆದ ಮಕ್ಕಳು


ಶಿರಸಿ: ಇಲ್ಲಿನ ಲಯನ್ಸ್ ಕ್ಲಬ್ ಆಶ್ರಯದಲ್ಲಿ 11, 12, 13 ವರ್ಷಗಳ ವಿದ್ಯಾರ್ಥಿಗಳಿಗಾಗಿ ಲಯನ್ಸ್ ಅಂತರಾಷ್ಟ್ರೀಯ ಶಾಂತಿ ಸಂದೇಶ ಭಿತ್ತಿ ಪತ್ರ ಸ್ಪರ್ಧೆಯನ್ನು ಲಯನ್ಸ್ ಶಾಲಾ ಭವನದಲ್ಲಿ ನ.3 ಶನಿವಾರ ಏರ್ಪಡಿಸಲಾಗಿತ್ತು.

ತಾಲೂಕಿನ ಬೇರೆ ಬೇರೆ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ದಯೆಯೇ ಪ್ರಧಾನ A Kindness Matters ಎಂಬ ವಿಷಯವನ್ನು ಆದರಿಸಿ ಸುಂದರ ಚಿತ್ರವನ್ನು ಬಿಡಿಸಿ ತಮ್ಮ ಪ್ರತಿಭೆ ಮೆರೆದರು. ಪ್ರಾರಂಭದಲ್ಲಿ ಶಿರಸಿ ಲಯನ್ಸ್ ಕ್ಲಬ್‍ನ ಅಧ್ಯಕ್ಷೆ ಲಯನ್. ಪ್ರತಿಭಾ ಹೆಗಡೆ ಜ್ಯೋತಿ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿ ಸ್ಫರ್ಧಾಳುಗಳಿಗೆ ಶುಭಕೋರಿದರು. ಲಯನ್. ಎಂ.ಎಂ. ಭಟ್, ಕಾರೇಕೊಪ್ಪ ಈ ಸಂದರ್ಭದಲ್ಲಿ ಸ್ಪರ್ಧೆಯ ಪ್ರಾಮುಖ್ಯತೆ ಹಾಗೂ ನಿಯಮಗಳನ್ನು ಸ್ಫರ್ಧಾಳುಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಲಯನೆಸ್ ಅಧ್ಯಕ್ಷೆ ಸುಚೇತಾ ಪಟವರ್ಧನ್, ಲಯನ್ಸ್ ಕ್ಲಬ್‍ನ ಕಾರ್ಯದರ್ಶಿ ಲಯನ್. ಅಂಜನಾ ಹೆಗಡೆ, ಲಿಯೋ ಕ್ಲಬ್‍ನ ಅಧ್ಯಕ್ಷೆ ಸುಮೇಧಾ ಹೀರೆಮಠ, ಲಯನ್. ಶ್ಯಾಮ ಸುಂದರ್ ಭಟ್ ಉಪಸ್ಥಿತರಿದ್ದರು. ಪ್ರಸಿದ್ಧ ಕಲಾಕಾರರಾದ ಜಿ. ಎಮ್. ಹೆಗಡೆ, ತಾರಗೋಡ್ ನಿರ್ಣಾಯಕರಾಗಿ ಆಗಮಿಸಿ ಕಾರ್ಯಕ್ರಮ ನಡೆಸಿಕೊಟ್ಟರು.

ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಉಡುಗೊರೆ ನೀಡಲಾಯಿತು. 4 ವಿದ್ಯಾರ್ಥಿಗಳನ್ನು ವಿಜೇತರೆಂದು ಘೋಷಿಸಿ, ಇವುಗಳಲ್ಲಿ ಪ್ರಥಮ ಪ್ರಶಸ್ತಿ ಪಡೆದ ಭಿತ್ತಿ ಪತ್ರವನ್ನು ಲಯನ್ಸ್ ಜಿಲ್ಲಾ ಕಛೇರಿಗೆ ಅಂತರಾಷ್ಟ್ರೀಯ ಸ್ಪರ್ಧೆಗೆಂದು ಕಳಿಸಲಾಗುತ್ತದೆ. ವಿಜೇತ ವಿದ್ಯಾರ್ಥಿಗಳು ಲೇಖನಾ ಆರ್. ಕಾಂಚುಗಾರ್ ಶ್ರೀನಿಕೇತನ ಶಾಲೆ ಇಸಳೂರು, ಕೇಶವ ಎನ್ ಗುಂಡು ಡಾನ್ ಬೊಸ್ಕೊ ಹೈಸ್ಕೂಲ್ ಶಿರಸಿ, ವರ್ಷಾ ಭಟ್ ಶ್ರೀ ಗಜಾನನ ಪ್ರಾಥಮಿಕ ಶಾಲೆ, ವಾನಳ್ಳಿ. ಪ್ರೋತ್ಸಾಹಿಕ ಬಹುಮಾನ ಅಕ್ಷತಾ ವಸಂತ ಜನ್ನು ಡಾನ್ ಬೊಸ್ಕೊ ಶಾಲೆ ಪಡೆದುಕೊಂಡರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.