ಕಲ್ಯಾಣ ಸಂಘದಿಂದ ಪ್ರಯೋಜನ ಪಡೆದುಕೊಳ್ಳಿ; ಸುರೇಶ್ಚಂದ್ರ ಹೆಗಡೆ


ಶಿರಸಿ: ತಾಲೂಕಿನ ಗುಡ್ನಾಪುರ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರಾದ ಮಂಜಪ್ಪಾ ನಾಯ್ಕ ಇವರಿಗೆ ಹರಣಿ ಶಸ್ತ್ರ ಚಿಕಿತ್ಸೆಗೆ ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದಿಂದ ಸಹಾಯ ಧನದ ಚೆಕ್‍ನ್ನು ನಿರ್ದೇಶಕ ಸುರೇಶ್ಚಂದ್ರ ಹೆಗಡೆ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಒಕ್ಕೂಟದಲ್ಲಿರುವ ಕಲ್ಯಾಣ ಸಂಘದಿಂದ ಹಲವು ಅನುಕೂಲಗಳಿದ್ದು, ಜಿಲ್ಲೆಯಲ್ಲಿರುವ ಎಲ್ಲ ಹಾಲು ಉತ್ಪಾದಕರ ಸಂಘಗಳ ಸದಸ್ಯರು ಕಲ್ಯಾಣ ಸಂಘದ ಸದಸ್ಯತ್ವವನ್ನು ಸ್ವೀಕರಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರು, ಸಂಘದ ಸಿಬ್ಬಂದಿಗಳು, ಹಾಲು ಉತ್ಪಾದಕರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.