ಸುವಿಚಾರ

ದುರ್ಜನೈರುಚ್ಯಮಾನಾನಿ ಸಸ್ಮಿತಾನಿ ಪ್ರಿಯಾಣ್ಯಪಿ

ಅಕಾಲಕುಸುಮಾನೀವ ಭಯಂ ಸಂಜನಯಂತಿ ಹಿ ||

ತುಂಬ ನಯವಾಗಿ, ನಗು ನಗುತ್ತ, ಹಿತವಾದ ರೀತಿಯಲ್ಲಿ ಮಾತಾಡುತ್ತಾರಲ್ಲ ದುರ್ಜನರು, ಅದು ಸಮಯವಲ್ಲದ ಸಮಯದಲ್ಲಿ ಅರಳುವ ಹೂವಿನಂತೆ ಭಯವನ್ನಲ್ಲದೆ ಆನಂದವನ್ನೇನೂ ಕೊಡುವುದಿಲ್ಲ.

ಪ್ರಳಯಕಾಲದಲ್ಲಿ ಹೊತ್ತಲ್ಲದ ಹೊತ್ತಲ್ಲಿ, (ನಡು ಮಧ್ಯಾಹ್ನವೋ ಕಾರಿರುಳಿನಲ್ಲೋ) ಹೂವು ಅರಳೋದು, ಅಕಾಲದಲ್ಲಿ ಮಳೆಯಾಗುವುದು ಎಂಬೆಲ್ಲ ಲಕ್ಷಣಗಳು ಕಾಣುತ್ತವಂತೆ. ದುರ್ಜನರ ಮಾತು ಸಹ ಅಂಥ ಪ್ರಳಯಕಾಲದ ದುಶ್ಶಕುನದಂತೆಯೇ.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.