ಕೇಂದ್ರ ಸಚಿವ ಅನಂತಕುಮಾರ ಪ್ರಯತ್ನ; ಉ. ಕ ಲೋಕಸಭಾ ಕ್ಷೇತ್ರದ ಎಲ್ಲ ಮುಖ್ಯ ರಸ್ತೆಗಳು ಮೇಲ್ದರ್ಜೆಗೆ

ಶಿರಸಿ: ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತಾ ಖಾತೆಯ ರಾಜ್ಯ ಸಚಿವರಾಗಿರುವ ಅನಂತಕುಮಾರ ಹೆಗಡೆರವರ ನಿರಂತರ ಪ್ರಯತ್ನದಿಂದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಎಲ್ಲಾ ರಾಜ್ಯ ಹೆದ್ದಾರಿಗಳು ಮೇಲ್ದರ್ಜೆಗೆ ಏರಲಿವೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಡಿಯಲ್ಲಿ ಕರ್ನಾಟಕ ಮತ್ತು ಗೋವಾ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಕುಂದಾಪುರ-ಮಾಜಾಳಿ ರಾಷ್ಟ್ರೀಯ ಹೆದ್ದಾರಿ 66 ಈಗಾಗಲೇ ಚತುಷ್ಪಥದತ್ತ ಹೆಜ್ಜೆ ಹಾಕಿದೆ. ಭಟ್ಕಳ ತಾಲೂಕಿನ ಬೆಳಕೆಯಿಂದ ಕಾರವಾರ ತಾಲೂಕಿನ ಮಾಜಾಳಿವರೆಗೆ 147.21ಕಿ.ಮೀ ರಸ್ತೆಯನ್ನು ರೂ. 1300.00 ಕೋಟಿ ರೂಪಾಯಿ ವೆಚ್ಚದಲ್ಲಿ ಚತುಷ್ಟಥ ರಸ್ತೆಯನ್ನಾಗಿ ನಿರ್ಮಿಸಲಾಗುತ್ತಿದ್ದು, ಈ ಮಾರ್ಗದಲ್ಲಿ 41 ದೊಡ್ಡ ಹಾಗೂ 12 ಚಿಕ್ಕ ಸೇತುವೆಗಳನ್ನು ಅಗಲೀಕರಣಗೊಳಿಸಲಾಗುತ್ತಿದೆ. ಅಲ್ಲದೇ ಕಾರವಾರದಲ್ಲಿ ಎರಡು ಪ್ರತ್ಯೇಕ ಅಂಡರ್‌ಗ್ರೌಂಡ್ ತ್ರಿಪಥ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ. ಹೊಸದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸಾಗರಮಾಲಾ ಯೋಜನೆಯಡಿ ಬೇಲಿಕೇರಿ ಬಂದರು-ಕುಮಟಾ-ಶಿರಸಿ-ಹಾವೇರಿ ರಸ್ತೆ ಅಭಿವೃದ್ದಿಗೆ ಚಾಲನೆ ದೊರೆತಿದ್ದು, ಅಂದಾಜು 136ಕಿ.ಮಿ. ರಸ್ತೆ ರಾಷ್ಟ್ರೀಯ ಹೆದ್ದಾರಿಗಿಂತಲೂ ಉತ್ತಮ ಗುಣಮಟ್ಟವನ್ನು ಪಡೆದುಕೊಳ್ಳಲಿದೆ.

ಹೊಸದಾಗಿ ರಾಷ್ಟ್ರೀಯ ಹೆದ್ದಾರಿಗೆ ಸೇರಿಸಲ್ಪಟ್ಟ ರಸ್ತೆಗಳು: ಕಾರವಾರ-ಕೈಗಾ-ಮುಂಡಗೋಡ-ಬಂಕಾಪುರದಿಂದ ಮುಂದೆ ಸವಣೂರ-ಗಂಜೇಂದ್ರಗಡಕ್ಕೆ ಸೇರುವ ಹೆದ್ದಾರಿ 318 ಕಿ.ಮಿ. ರಸ್ತೆ, ಯಲ್ಲಾಪುರ -ಶಿರಸಿ-ಸಿದ್ದಾಪುರ-ತಾಳಗುಪ್ಪ-ಭಟ್ಕಳ ಹೆದ್ದಾರಿ 195ಕಿ.ಮಿ., ಯಲ್ಲಾಪುರ-ಹಳಿಯಾಳ-ಖಾನಾಪುರ ಹೆದ್ದಾರಿ 93ಕಿ.ಮಿ. ಈ ಮೂರು ರಸ್ತೆಗಳು ರಾಷ್ಟ್ರೀಯ ಹೆದ್ದಾರಿಗಳಾಗಿ ಸಾಗಾಟ ಹಾಗೂ ಸಂರ್ಪಕ್ಕೆ ಹೊಸ ಆಯಾಮ ನೀಡಲಿದೆ.

ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಮಟ್ಟದಲ್ಲಿ ಮೇಲ್ದರ್ಜೆಗೇರಿಸಲ್ಪಟ್ಟ ಕಾಮಗಾರಿ: ಸದಾಶಿವಗಡ-ಗಣೇಶಗುಡಿ-ಜೊಯಿಡಾ-ಕದ್ರಾ-ದಾಂಡೇಲಿ-ರಾಮನಗರ ಹೆದ್ದಾರಿ 122ಕಿ.ಮಿ. ರಸ್ತೆ ಮೇಲ್ದರ್ಜೆಗೇರಿ ರಾಷ್ಟ್ರೀಯ ಹೆದ್ದಾರಿಯ ಗುಣಮಟ್ಟದಲ್ಲಿ ನಿರ್ಮಾಣವಾಗಲಿದೆ. ಇನ್ನುಳಿದಂತೆ ಜಿಲ್ಲೆಯ ಯಲ್ಲಾಪುರ, ಶಿರಸಿ, ಸಿದ್ದಾಪುರ, ಹಳಿಯಾಳ, ಕಾರವಾರ ನಗರಗಳಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ಕ್ರಮಕೈಗೊಳ್ಳಲಾಗಿದ್ದು ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಜನದಟ್ಟಣೆ ರಹಿತ ಸಂಚಾರಕ್ಕೆ ಅನುವುಮಾಡಿಕೊಡಲಾಗುವುದೆಂದು ಸಚಿವರು ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

1 Comment

  1. Mulki Narasimha Bhat

    Sri Ananth kumarji,,
    This is my keen & humble request, you have to pressureis the Talaguppa>Honnavara/Hubbali>Ankola Railway line.Once it is completed​ uttar kannada will growing arrow speed…It connects all people of the states.
    It should be…. abmbisious project all uk people

    Reply

Leave A Reply

Your email address will not be published.