ಸುವಿಚಾರ

ಯತ್ರ ನಾಸ್ತಿ ದಧಿಮಂಥನಘೋಷೋ ಯತ್ರ ನೋ ಲಘುಲಘೂನಿ ಶಿಶೂನಿ

ಯತ್ರ ನಾಸ್ತಿ ಗುರುಗೌರವಪೂಜಾ ತಾನಿ ಕಿಂ ಬತ ಗೃಹಾಣಿ ವನಾನಿ ||

ಯಾವ ಮನೆಯಲ್ಲಿ ಮೊಸರು ಕಡೆಯುವಾಗಿನ (ಕಡೆಗೋಲು ಮಡಿಕೆಯಲ್ಲಿನ ಮೊಸರಲ್ಲಿ ಆಡುವ ಸದ್ದು ) ಸದ್ದು ಕೇಳಿಸದೋ, ಯಾವ ಮನೆಯಲ್ಲಿ ಪುಟ್ ಪುಟ್ಟ ಮಕ್ಕಳಿಲ್ಲವೋ, ಯಾವ ಮನೆಯಲ್ಲಿ ಗುರುವಿನಾಗಮನವಾಗಿ ಪೂಜೆಯ ಸಲ್ಲಿಕೆಯಾಗದೋ- ಅಯ್ಯೋ ಅವುಗಳು ಮನೆಗಳೋ ಇಲ್ಲಾ ಕಾಡುಗಳೋ ನೀವೇ ಹೇಳಬೇಕು. (ಶಿಶೂನಿ ಎಂಬ ನಪುಂಸಕಲಿಂಗಪದಪ್ರಯೋಗ ಚಿಂತ್ಯ) ಕಡೆಗೋಲಿನ ಸದ್ದು ಮತ್ತು ಮಕ್ಕಳ ಕೇಕೆ- ಇವು ಮನೆಯಲ್ಲಿ ಅದೇನೋ ಸಂಭ್ರಮವನ್ನು ತುಂಬುವುದಂತೂ ಖರೆ. ವಿಷಾದವೆಂದರೆ ಈ ಬಗೆಯ ಮನೆಗಳು ತೀರಾ ತೀರಾ ಅಪರೂಪಾಗಿಬಿಟ್ಟಿವೆ ಎಂಬುದು. ತುಂಬುಮನೆಯಲ್ಲಾದರೆ ಚಿರಕಾಲ ಪುಟ್ಟ ಮಕ್ಕಳಿರುತ್ತಾರೆ, ಚಿಕ್ಕಕುಟುಂಬದಲ್ಲಿ ಅದು ಅಸಾಧ್ಯವಷ್ಟೆ.

–  ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.