ಸುವಿಚಾರ

ಪುಸ್ತಕೇಷು ಚ ನಾಧೀತಂ ನಾಧೀತಂ ಗುರುಸನ್ನಿಧೌ ನ

ಶೋಭತೇ ಸಭಾಮಧ್ಯೇ ಹಂಸಮಧ್ಯೇ ಬಕೋ ಯಥಾ !

ಸ್ವತಃ ಪುಸ್ತಕ ಹಿಡಿದು, ಕುಳಿತು, ಓದಿ ತಿಳಿದುಕೊಳ್ಳುವುದು ಒಂದು ರೀತಿಯಾದರೆ, ಗುರುಗಳ ಸೇವೆ ಮಾಡುತ್ತ ಅವರ ಸನ್ನಿಧಿಯಲ್ಲಿ ವಿದ್ಯೆಯನ್ನು ಪಡೆದುಕೊಳ್ಳುವುದು ಇನ್ನೊಂದು ಬಗೆ. ಇವೆರಡನ್ನೂ ಮಾಡದೆ ಬರಡೆಮ್ಮೆಯಂತೆ ಇರುವವ ಯಾರೇ ಇದ್ದರೂ ಅವನು ವಿದ್ವಜ್ಜನರ ಸಭೆಯಲ್ಲಿ ಯಾವ ಲೆಕ್ಕದಲ್ಲೂ ಶೋಭಿಸಲಾರನು. ಆ ಜನಗಳ ಮದ್ಯೆ ಅವ ಕುಳಿತಿದ್ದರೂ ಅದೊಂಥರಾ ಹಂಸಗಳ ಮಧ್ಯೆ ಬಕಪಕ್ಷಿ ಬಂದು ಕುಳಿತ ಹಾಗೆ ಕಾಣುತ್ತದೆ !

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.