ಸುವಿಚಾರ

ಪಿಬಂತಿ ಪವನಂ ನ ಚ ದುರ್ಬಲಾಸ್ತೇ| ಶುಷ್ಕೈಸ್ತೃಣೈರ್ವನಗಜಾ ಬಲಿನೋ ಭವಂತಿ

ಕಂದೈಃ ಫಲೈರ್ಮುನಿವರಾಃ ಕ್ಷಪಯಂತಿ| ಕಾಲಂ ಸಂತೋಷ ಏವ ಪುರುಷಸ್ಯ ಪರಂ ನಿಧಾನಮ್ ||

ಸರ್ಪಗಳನ್ನು “ಗಾಳಿಯನ್ನುಂಡು ಬದುಕುವ ಜೀವಿಗಳು” ಎಂದು ಕಾವ್ಯಗಳಲ್ಲಿ ಹೇಳಲಾಗಿದೆ. ಅದೊಂದು ಕವಿಸಮಯವಿದ್ದಿರಬಹುದಾಗಲೀ, ತುಂಬ ಪ್ರಸಿದ್ಧವಾದ್ದೆಂಬುದಂತೂ ನಿಜ. ಗಾಳಿಯನ್ನೇ ತಿಂದು ಬದುಕುತ್ತಿದ್ದರೂ ಅವುಗಳೇನೂ ಸೊರಗಿಹೋದಂತಿಲ್ಲ. ಬೆಟ್ಟದಾನೆಗಳು ಒಣ ಹುಲ್ಲು ತಿಂದೂ ಸಹ ಅದೆಷ್ಟು ಬಲಿಷ್ಠವಾಗಿರುತ್ತವೆ! ಇನ್ನು ಮುನಿಜನಗಳಾದರೋ ನಮ್ಮ ನಿಮ್ಮಂತೆ ಉದರಂಭರಣಕ್ಕಾಗಿಯೇ ಬದುಕುದೆ, ಬದುಕುವುದಕ್ಕಾಗಿ ಕಂದ ಮೂಲಗಳನ್ನು ತಿಂದು ಕಾಲ ಕಳೆಯುತ್ತಾರೆ. ಇವರೆಲ್ಲರ ಆಹಾರ ಪದ್ಧತಿ ಮತ್ತು ಜೀವನಗಳಲ್ಲಿ ಅಂಥಾ ಮೋಜೇನೂ ಇಲ್ಲ. ಹಾಗಿದ್ದೂ ಇವರೆಲ್ಲ ಸಬಲರಾಗಿ ದುಃಖವಿಲ್ಲದೆ ಬದುಕುತ್ತಿರುವುದರ ಮರ್ವವೆಂದರೆ ಒಂದೇ- ಅದು ಸಂತೋಷವೆಂಬುದು. ಮನುಷ್ಯ ಆನಂದಿಯಾಗಿದ್ದಷ್ಟೂ ಆರೋಗ್ಯವಾಗಿ ಕಳೆ ಕಳೆಯಾಗಿ ಇರುತ್ತಾನೆ. ಆನಂದವೇ ಬದುಕು, ಉಳಿದೆಲ್ಲ ಕೊರತೆಗಳನ್ನು ಕಳೆದುಬಿಡುವ ಮಹಾಸಂಪತ್ತು ಅದೆಂದರೆ.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

1 Comment

Leave A Reply

Your email address will not be published.