ಪೊಲೀಸ್ ಮೇಲಿನ ಸುಳ್ಳು ಆರೋಪ ಖಂಡಿಸಿ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ

 

ಯಲ್ಲಾಪುರ: ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಸಿಬ್ಬಂದಿಯ ಮೇಲೆ ವಿನಾಕಾರಣ ಸುಳ್ಳು ದೂರು ದಾಖಲಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ವತಿಯಿಂದ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಹಾಗೂ ಸಿಪಿಐ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಪೊಲೀಸ್ ಸಿಬ್ಬಂದಿಯೇ ಸಾವಿಗೆ ಕಾರಣವೆಂದು ವದಂತಿ ಹಬ್ಬಿಸಿ ಶಾಂತತಾ ಭಂಗ ಉಂಟು ಮಾಡಲು ಪ್ರಯತ್ನಿಸಿರುವುದು ಖಂಡನಾರ್ಹ. ವಾಜಿದ್ ಅಲಿ ಸಾವಿಗೂ ಪೊಲೀಸ್ ಸಿಬ್ಬಂದಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಹೀಗಿದ್ದಾಗ್ಯೂ ಸುಳ್ಳು ಆರೋಪ ಹೊರಿಸಿ ಶಾಂತತೆ ಕದಡಲು ಪ್ರಯತ್ನಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಾರುತಿ ಬೋವಿವಡ್ಡರ್, ತಾಲೂಕಾಧ್ಯಕ್ಷ ಅಶೋಕ ಕೊರವರ, ಪ.ಪಂ ಸದಸ್ಯ ಸೋಮು ನಾಯ್ಕ, ಪ್ರಮುಖರಾದ ಪ್ರತಾಪ, ಕೃಷ್ಣ ಬೋವಿವಡ್ಡರ್, ಶಿವಯೋಗಿ ಬೋವಿವಡ್ಡರ್, ಅನಿಲ್ ಜೋಗಳೇಕರ್, ಕೃಷ್ಣ ಹರಿಜನ, ತೋಳಾರಾಮ ಅತ್ತರವಾಲಾ, ಶಿವರಾಜ ಬೋವಿವಡ್ಡರ್, ಸಂಜು ಜಾಧವ, ಮಾರುತಿ ಜೋಗಿ ಮುಂತಾದವರಿದ್ದರು.
ಇದೇ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಸೇವಾ ಸಂಘದವರು ಮನವಿ ನೀಡಿದರು. ಸಂಘದ ತಾಲೂಕಾ ಅಧ್ಯಕ್ಷ ಜಗನ್ನಾಥ ರೇವಣಕರ್, ಕಾರ್ಯದರ್ಶಿ ಸಂತೋಷ ಪಾಟಣಕರ್, ಪ್ರಮುಖರಾದ ಗಣೇಶ ಪಾಟಣಕರ್, ಶ್ರೀಕಾಂತ ಪಾಟೀಲ, ಅನಿಲ್ ಮರಾಠೆ, ಬಂಗಾರಿ ಬೋರ್ಕರ್, ಸತೀಶ ಪಾಟಣಕರ್ ಮುಂತಾದವರಿದ್ದರು.

 

Categories: ಜಿಲ್ಲಾ ಸುದ್ದಿ

1 Comment

Leave A Reply

Your email address will not be published.