ಪನ್ನೀರ್ ಕಟ್ಲೆಟ್ ಒಮ್ಮೆ ಸವಿದು ನೋಡಿ

ಅಡುಗೆ ಮನೆ: ನಿಮ್ಮ ಮನೆಯ ಫ್ರಿಡ್ಜ್ ನಲ್ಲಿ ಕಾಟೇಜ್ ಚೀಸ್ ಅಥವಾ ಪನ್ನೀರ್ ಇದ್ದರೆ, ಈ ರೆಸಿಪಿ ಮಾಡುವುದು ತುಂಬಾ ಸುಲಭ

ಬೇಕಾಗುವ ಸಾಮಗ್ರಿಗಳು: 1ಕಾಟೇಜ್ ಚೀಸ್ (ಪನೀರ್) – 2 ಕಪ್ ತುರಿದದ್ದು, ತಣ್ಣಗಿನ ಅನ್ನ 1/2 ಕಪ್, ರುಚಿಗೆ ತಕ್ಕಷ್ಟು ಉಪ್ಪು, ಹಸಿ ಮೆಣಸಿನಕಾಯಿ – 1, ಮೈದಾ – 1/4 ಕಪ್, ಕೊತ್ತಂಬರಿ ಸೊಪ್ಪು – 1/4 ಟೀ ಚಮಚ, ದಪ್ಪ ಮೆಣಸಿನಕಾಯಿ – 1/2 ಕಪ್ ವಿವಿಧ ಬಣ್ಣದ್ದು, ಬ್ರೆಡ್ ಕ್ರಂಬ್ಸ್ ಅದ್ದುವುದಕ್ಕೆ ಎಣ್ಣೆ – 2 ಟೇಬಲ್ ಚಮಚ
ಮಾಡುವ ವಿಧಾನ: ತುರಿದ ಚೀಸ್ ಅನ್ನು ತೆಗೆದುಕೊಂಡು ಅದಕ್ಕೆ ಅನ್ನವನ್ನು ಹಾಕಿ. ಈಗ ಅದಕ್ಕೆ, ಹಿಟ್ಟು ಉಪ್ಪು ಹಸಿ ಮೆಣಸಿನಕಾಯಿ ಹಾಕಿ ಮಿಕ್ಸ್ ಮಾಡಿ. ನಂತರ ಹೆಚ್ಚಿದ ಕೊತ್ತಂಬರಿ, ದಪ್ಪ ಮೆಣಸಿನಕಾಯಿ ಹಾಕಿ. ವಿವಿಧ ಬಣ್ಣಗಳ ಬೆಲ್ ಪೆಪ್ಪರ್ಸ್ (ದಪ್ಪ ಮೆಣಸಿನಕಾಯಿ) ಬಳಸಿದರೆ, ಕಟ್ಲೆಟ್ ಅಂದವಾಗಿ ಕಾಣುತ್ತದೆ. ಎಲ್ಲಾ ಸಾಮಗ್ರಿಗಳನ್ನು ಮಿಕ್ಸ್ ಮಾಡಿ ಸಣ್ಣ ಕಟ್ಲೆಟ್ ಮಾಡಿರಿ. ಈಗ ಒಂದು ತವ ಬಿಸಿ ಮಾಡಿ ಎಣ್ಣೆಯನ್ನು ಹಾಕಿರಿ. ಕಟ್ಲೆಟ್ ಗಳನ್ನು ಅದರ ಮೇಲಿಟ್ಟು ಹೊಂಬಣ್ಣ ಬರುವವರೆಗೂ ಬೇಯಿಸಿ. ಎಲ್ಲಾ ಬದಿಗಳಲ್ಲೂ ಬೆಂದ ನಂತರ, ಬಿಸಿಬಿಸಿಯಾದ ಕಟ್ಲೆಟ್ ಗಳನ್ನು ಟೊಮೇಟೋ ಸಾಸ್ ಜೊತೆ ಅಥವಾ ಪುದೀನ ಚಟ್ನಿಯ ಜೊತೆ ಸವಿಯಲು ಕೊಡಿ.

Categories: ಅಡುಗೆ ಮನೆ

Leave A Reply

Your email address will not be published.