ರುಚಿಕರ ಬೇಲ್ ಪುರಿ


ಅಡುಗೆ ಮನೆ: ಹೊರಗಡೆ ಅಂಗಡಿಗಳಲ್ಲಿ ಸಿಗುವ ರುಚಿಕರ ಬೇಲ್ ಪುರಿಯನ್ನು ಮನೆಯಲ್ಲೇ ಒಮ್ಮೆ ತಯಾರಿಸಿ ನೋಡಿ.
ಬೇಕಾಗುವ ಸಾಮಗ್ರಿಗಳು: ಮಂಡಕ್ಕಿ 100ಗ್ರಾಂ, ಚಿಕ್ಕದಾಗಿ ಹೆಚ್ಚಿದ ಈರುಳ್ಳಿ ಒಂದು, ಚಿಕ್ಕದಾಗಿ ಹೆಚ್ಚಿದ ಟೊಮೇಟೊ ಒಂದು, ಬೇಯಿಸಿ, ಚಿಕ್ಕದಾಗಿ ಕತ್ತರಿಸಿದ ಆಲುಗಡ್ಡೆ ಒಂದು, ಕ್ಯಾರೆಟ್ ಒಂದು ತುರಿದದ್ದು, ಪುದಿನಾ ಚಟ್ನಿ ಒಂದು ದೊಡ್ಡ ಚಮಚ, ಉಪ್ಪು ರುಚಿಗೆ, ಲಿಂಬೆರಸ ಅಗತ್ಯಕ್ಕನುಸಾರ, ಸೇವ್ ಪುರಿ ಅಲಂಕಾರಕ್ಕೆ ಅಗತ್ಯವಿದ್ದಷ್ಟು,ಕೊತ್ತಂಬರಿ ಸೊಪ್ಪು ಒಂದು ಕಟ್ಟು,

ಪುದಿನಾ ಚಟ್ನಿ ತಯಾರಿಸಲು: ಪುದಿನಾ ಎಲೆಗಳು ಒಂದು ಕಟ್ಟು, ಕೊತ್ತಂಬರಿ ಸೊಪ್ಪು ಒಂದು ಕಟ್ಟು, ಹಸಿಮೆಣಸು ಎರಡು, ಉದ್ದಕ್ಕೆ ಸೀಳಿದ್ದು ಸ್ಯಾಂಡ್ವಿಚ್ ಬ್ರೆಡ್ ಹತ್ತು ಹೋಳುಗಳು ಬನ್ ಆದರೂ ಸರಿ.

ಮಾಡುವ ವಿಧಾನ: ಮೊದಲು ಪುದಿನಾ ಚಟ್ನಿಯನ್ನು ತಯಾರಿಸಿಕೊಳ್ಳಿ. ಇದಕ್ಕಾಗಿ ಪುದಿನಾ ಎಲೆ, ಕೊತ್ತಂಬರಿ ಸೊಪ್ಪು ಮತ್ತು ಹಸಿಮೆಣಸನ್ನು ನಯವಾಗಿ ಮಿಕ್ಸಿಯಲ್ಲಿ ಅರೆಯಿರಿ. ಅರೆಯುವಾಗ ಕೊಂಚ ನೀರು ಮತ್ತು ಉಪ್ಪನ್ನು ಸೇರಿಸಿ. ಚಟ್ನಿ ತಯಾರಿಸಿದ ಬಳಿಕ ಬದಿಗೆ ತೆಗೆದಿಡಿ. ಇದು ಬ್ರೆಡ್ ಹೋಳುಗಳಿಗೆ ಸವರಲು ಅಗತ್ಯವಿದೆ. ಒಂದು ಪಾತ್ರೆಯಲ್ಲಿ ಎಲ್ಲಾ ತರಕಾರಿ,ಈರುಳ್ಳಿ,ಆಲುಗಡ್ಡೆ, ಟೊಮೇಟೋ, ಕ್ಯಾರೆಟ್ ಮತ್ತು ಮಂಡಕ್ಕಿ ಸೇರಿಸಿ ಚೆನ್ನಾಗಿ ಕಲಸಿ. ಈ ಪಾತ್ರೆಗೆ ಒಂದು ದೊಡ್ಡ ಚಮಚ ಪುದಿನಾ ಚಟ್ನಿ, ಲಿಂಬೆರಸ, ಉಪ್ಪು ಸೇರಿಸಿ ದೊಡ್ಡ ಚಮಚ ಬಳಸಿ ಕಲಸಿ. ಇದಕ್ಕೆ ಸೇವ್ ಪುರಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಕಲಸಿ. ಈಗ ಸಾಂಡ್ವಿಚ್ ತಯಾರಿಸಲು ಒಂದು ಹೋಳು ಬ್ರೆಡ್‌ನ ಒಂದು ಭಾಗಕ್ಕೆ (ಅಥವಾ ಬನ್‌ನ ಒಳಭಾಗ) ಕೊಂಚ ಚಟ್ನಿ ಸವರಿ. ಸವರಿದ ಹೋಳಿನ ಮೇಲೆ ಭೇಲ್ ಪುರಿಯನ್ನು ದಪ್ಪನಾಗಿ ಹರಡಿ. ಈಗ ಇನ್ನೊಂದು ಹೋಳನ್ನು ಇದರ ಮೇಲಿರಿಸಿ. ರುಚಿಯಾದ ಭೇಲ್ ಪುರಿ ಸ್ಯಾಂಡ್ವಿಚ್ ರೆಡಿ.

Categories: ಅಡುಗೆ ಮನೆ

Leave A Reply

Your email address will not be published.