ಹಾಲಿ ಶಾಸಕರ ಮನೆಯಲ್ಲೇ ಕಳ್ಳತನಕ್ಕೆ ಯತ್ನ


ಕುಮಟ: ನಗರದ ಕೊಪ್ಪಳಕರ್ ವಾರ್ಡ ನಲ್ಲಿರುವ  ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ದಿನಕರ್ ಶೆಟ್ಟಿರವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಕಳ್ಳತನದ ಯತ್ನ ನಡೆಸಿದ್ದಾರೆ. ಮನೆಯ ಬೀಗ ಮುರಿದು ಒಳಹೊಕ್ಕಿದ್ದು ಯಾವುದೇ ಹಣ ಒಡವೆ, ಇನ್ನಾವುದೇ ವಸ್ತುಗಳು ಸಿಗದ ಹಿನ್ನೆಲೆಯಲ್ಲಿ ಹಾಗೆಯೇ ತೆರಳಿದ್ದಾರೆ. ಶಾಸಕರ ಮನೆ ಮುಂದೆ ಸಿಸಿ ಕ್ಯಾಮರಾ ಅಳವಡಿಸಿದ್ದರೂ ಕ್ಯಾಮರಾ ಆಫ್ ಆಗಿತ್ತು. ಶಾಸಕರ ಮನೆಯಲ್ಲಿ ಒರ್ವ ಪೋಲೀಸ್ ಪೇದೆ ಕೂಡ ಇದ್ದರೂ ಆ ವೇಳೆ ಮಾತ್ರ ಯಾರೂ ಇಲ್ಲದ್ದು ಅನುಮಾನಕ್ಕೆ ಎಡೆಮಾಡಿದೆ. ಸ್ಥಳಕ್ಕೆ ಕುಮಟಾ ನಗರ ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.