ಹಾರ್ಸಿಕಟ್ಟಾ ಸಹಿಪ್ರಾ ಶಾಲೆಯಲ್ಲಿ ದಿ.ವಿ ಟಿ ನಾಯ್ಕ ರಿಗೆ ನುಡಿನಮನ ಸಲ್ಲಿಕೆ


ಸಿದ್ದಾಪುರ: ಇತ್ತೀಚೆಗೆ ನಿಧನ ಹೊಂದಿದ ತಾಲೂಕಿನ ಹಾರ್ಸಿಕಟ್ಟಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ವಿ.ಟಿ.ನಾಯ್ಕ ಅವರಿಗೆ ಶುಕ್ರವಾರ ಶಾಲೆಯಲ್ಲಿ ನುಡಿನಮನ ಸಲ್ಲಿಸಲಾಯಿತು.
ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಮೋಹನ ರಾಮ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಆರ್.ಕೆ.ನಾಯ್ಕ, ಎಸ್‍ಡಿಎಂಸಿ ಮಾಜಿ ಅಧ್ಯಕ್ಷರಾದ ಶಶಿಧರ ಪಾಟೀಲ್, ರಮೇಶ ಹೆಗಡೆ ಹಾರ್ಸಿಮನೆ,ಶಾಲಾ ಮುಖ್ಯಾಧ್ಯಾಪಕಿ ಪ್ರತಿಭಾ ವಿ.ನಿಲೇಕಣಿ, ವಿವಿಧ ಶಾಲೆಯ ಶಿಕ್ಷಕರಾದ ಕೆ..ಎನ್.ಹೆಗಡೆ ವಾಜಗದ್ದೆ, ವಿ.ಜಿ.ನಾಯ್ಕ ಗಾಳೀಜಡ್ಡಿ, ಶ್ರೀರಾಮ ಹೆಗಡೆ ಹುತ್ಗಾರ, ಶಾಂತಿ ಹೆಗಡೆ ಹಾರ್ಸಿಕಟ್ಟಾ, ಆರತಿ ಹೆಗಡೆ ಹಾರ್ಸಿಕಟ್ಟಾ, ಎಚ್.ಎಸ್.ನಾಯ್ಕ ಕೋಡ್ಸರ(ಮುಠ್ಠಳ್ಳಿ) ಹಾಗೂ ವಿದ್ಯಾರ್ಥಿಗಳು ನುಡಿನಮನ ಸಲ್ಲಿಸಿದರು.ಶಿಕ್ಷಕ ಡಿ.ಎಲ್.ಭಾಗವತ್ ದೇವಾಸ, ಗ್ರಾಪಂ ಸದಸ್ಯ ಮೈದಿನ ಸಾಬ ಕಾನಕೊಪ್ಪ ಇತರರಿದ್ದರು.
ಹಾರ್ಸಿಕಟ್ಟಾ ಕ್ಲಸ್ಟರ್ ಮಟ್ಟದ ಎಲ್ಲ ಶಾಲೆಯ ಶಿಕ್ಷಕರು, ಎಸ್‍ಡಿಎಂಸಿ ಸದಸ್ಯರು, ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ಪಾಲಕ-ಪೋಷಕರು ಉಪಸ್ಥಿರಿದ್ದರು. ಇದೇ ವೇಳೆಯಲ್ಲಿ ವಿದ್ಯಾರ್ಥಿಗಳು ಪುಷ್ಪ ನಮನ ಸಲ್ಲಿಸಿದರು. ಶಿಕ್ಷಕ ನಾಗರಾಜ ಮಡಿವಾಳ ನಿರ್ವಹಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.