ಸುವಿಚಾರ

ವರಂ ದಾರಿದ್ರ್ಯಮನ್ಯಾಯಪ್ರಭವಾದ್ವಿಭವಾದಿಹ

ಕೃಶತಾಭಿಮತಾ ದೇಹೇ ಪೀನತಾ ನ ತು ಶೋಕತಃ ||

ಈ ಲೋಕದಲ್ಲಿ ಯಾರದ್ದೋ ತಲೆ ಒಡೆದು, ಇನ್ಯಾರಿಗೋ ಮೋಸ ಮಾಡಿ, ಧಗಾ ಹಾಕಿ, ನಾಮ ಬರೆದು ಹಣ ಗಳಿಸಿ ಶ್ರೀಮಂತನಾಗುವುದಕ್ಕಿಂತ ಬಡವನಾಗಿಯೇ ಉಳಿಯುವುದು ಒಳ್ಳೆಯದು. ದುಃಖದಿಂದಾಗಿಯೂ ಮಾನವನಿಗೆ ಸ್ಥೂಲ ಕಾಯ ಒದಗುವುದಂತೆ. ಅಂಥಾ ದುಃಖಜನ್ಯವಾದ ಸ್ಥೂಲಕಾಯಕ್ಕಿಂತ ತೆಳ್ಳಗೆ ಕೃಶಕಾಯನಾಗಿರುವುದೇ ಒಳ್ಳೆಯದು.

– ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.