ಬಂಗಾರಪ್ಪ ದೇಶ ಕಂಡ ಅಪ್ರತಿಮ ರಾಜಕೀಯ ಮುತ್ಸದ್ಧಿ: ರಮೇಶ ದುಭಾಶಿ


ಶಿರಸಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪನವರ 86ನೇ ಜನ್ಮದಿನದ ಅಂಗವಾಗಿ ಬಂಗಾರಪ್ಪ ಅಭಿಮಾನಿ ಬಳಗ ಹಾಗೂ ಶಿರಸಿ ತಾಲೂಕಾ ಆರ್ಯ, ಈಡಿಗ, ನಾಮಧಾರಿ, ಬಿಲ್ಲವರ ಸಂಘದ ವತಿಯಿಂದ ಶುಕ್ರವಾರ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು/ ಹಂಪಲು ವಿತರಿಸಿ ಹುಟ್ಟುಹಬ್ಬ ಆಚರಿಸಿದರು.
ಈ ವೇಳೆ ಬಂಗಾರಪ್ಪ ಅಭಿಮಾನಿ ರಮೇಶ ದುಭಾಶಿ ಮಾತನಾಡಿ, ದೇಶ ಕಂಡ ಅಪ್ರತಿಮ ರಾಜಕೀಯ ಮುತ್ಸದ್ಧಿ ಬಂಗಾರಪ್ಪ ಬಡವರ ಏಳಿಗೆಗೆ ನೀಡಿದ ಕೊಡುಗೆಯನ್ನು ದೇಶದ ಯಾವ ಮುಖ್ಯಮಂತ್ರಿಯೂ ನೀಡಿಲ್ಲ. ಬಡವರ ಬಂಧುವಾಗಿದ್ದ ಬಂಗಾರಪ್ಪನವರ ಧ್ಯೇಯ/ ಧೋರಣೆಯನ್ನು ನಾವೆಲ್ಲರೂ ಅಳವಡಿಸಿಕೊಂಡ ಬಡವರ ಶ್ರೇಯೋಭಿವೃದ್ಧಿಗೆ ಶ್ರಮಿಸೋಣ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಆರ್.ಜಿ.ನಾಯ್ಕ, ಎಸ್.ಎನ್.ನಾಯ್ಕ, ನಾರಾಯಣ ನಾಯ್ಕ, ಗಣಪತಿ ನಾಯ್ಕ, ಪ್ರದೀಪ ಶೆಟ್ಟಿ, ರಾಜು ಉಗ್ರಾಣಕರ್, ಶ್ರೀನಿವಾಸ ನಾಯ್ಕ, ಸತೀಶ ನಾಯ್ಕ ಮಧುರವಳ್ಳಿ, ಎಂ.ಎನ್.ನಾಯ್ಕ, ಪ್ರಸನ್ನ ಶೆಟ್ಟಿ, ಶೈಲೇಶ ಜೋಗಳೇಕರ್, ಶಂಕರ ಗುಡ್ಡದಮನೆ, ಪ್ರವೀಣ ಪಾಟೀಲ್, ಸುನೀಲ ನಾಯ್ಕ, ನಜೀರ ಅಹಮ್ಮದ್, ಜಗದೀಶ ನಾಯ್ಕ, ರವಿ ಕಡಕೇರಿ, ಐ.ಕೆ.ನಾಯ್ಕ, ಚಂದ್ರು ನಾಯ್ಕ, ಯೋಗೇಶ ನಾಯ್ಕ ಸೇರಿದಂತೆ ಇತರರು ಹಾಜರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.