ಅ.27 ಕ್ಕೆ ಶಿರಸಿ ಲಯನ್ಸ್‌ಗೆ ಡಿಸ್ಟ್ರಿಕ್ಟ್ ಗವರ್ನರ್ ಮೋನಿಕಾ ಸಾವಂತ ಭೇಟಿ

ಶಿರಸಿ: ಅ.27 ರಂದು ಲಯನ್ಸ್ ಡಿಸ್ಟ್ರಿಕ್ಟ್ 317 B ಯ ಗವರ್ನರ್ M.J.F. Lion ಮೋನಿಕಾ ಸಾವಂತ ಶಿರಸಿ ಲಯನ್ಸ್ ಕ್ಲಬ್ ಹಾಗೂ ಲಯನೆಸ್ ಕ್ಲಬ್‍ಗೆ ಅಧಿಕೃತ ಭೇಟಿ ನೀಡಲಿದ್ದಾರೆ.
ಭೇಟಿಯ ಸಂದರ್ಭದಲ್ಲಿ ಲಯನ್ಸ್ ಸಭಾಭವನದಲ್ಲಿ ಬೆಳಿಗ್ಗೆ 10-30 ಘಂಟೆಗೆ ಲಯನ್ಸ್ ಶಾಲಾ ವಿದ್ಯಾರ್ಥಿಗಳಿಗಾಗಿ ಲಿಯೋ ಸುಮೇದಾ ಹಿರೇಮಠ ನಾಯಕತ್ವದ “ಲಿಯೋ ಕ್ಲಬ್” ಉದ್ಘಾಟನೆ, ಸಾಮ್ರಾಟ್ ಹೋಟೇಲ್ ಎದುರಿಗೆ ಸ್ವಚ್ಛತೆಯ ಅರಿವು ನೀಡುವ ಫಲಕ ಉದ್ಘಾಟನೆ, ಲಯನ್ಸ್ ನಯನಾ EYE ಬ್ಯಾಂಕ್ ಭೇಟಿ, ವಿಶೇಷ ಸಮಾಜ ಸೇವಾ ಚಟುವಟಿಕೆಗಳಲ್ಲಿ ಉತ್ತಮ ಕಾರ್ಯ ಮಾಡುತ್ತಿರುವ ಸಂಘ/ಸಂಸ್ಥೆಗಳ ಕಾರ್ಯವೈಖರಿಯನ್ನು ಪರಿಗಣಿಸಿ, ಈ ವರ್ಷ ಕೊಡಲ್ಪಡುವ ಲಯನ್ಸ್ ಪರ್ಯಾಯ ಪಾರಿತೋಷಕ ಫಲಕವನ್ನು ಶ್ರೀ ಮಾರುತಿ ನಾಟ್ಯ ಹವ್ಯಾಸಿ ಸಂಘ ಮತ್ತು ಮಾರುತಿ ಸೇವಾ ಸಂಸ್ಥೆ, ಗಣೇಶ ನಗರ ಇವರಿಗೆ ವಿತರಣೆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಲಯನ್ಸ್ ಡಿಸ್ಟ್ರಿಕ್ಟ್ 317 B ಯ ಗವರ್ನರ್  M.J.F. Lion ಮೋನಿಕಾ ಸಾವಂತ ಹಾಗೂ ಇನ್‍ಸ್ಟಾಲಿಂಗ್ ಆಫೀಸರ್ ಆಗಿ ಆರ್.ಡಿ.ಸಿ. ಲಿಯೋ  M.J.F.ಸುಗ್ಗಾಲಾ ಯಾಲಾಮಾಲಿ ಇವರು ಆಗಮಿಸಲಿದ್ದಾರೆ. ಗೌರವ ಉಪಸ್ಥಿತರಾಗಿ ಜಿ.ಎಮ್.ಟಿ. ಕೋ-ಆರ್ಡಿನೇಟರ P.M.J.F. Lion ಗೋಪಾಲಕೃಷ್ಣ ಬಿಂದಗಿ, ಆರ್. ಸಿ. ರೀಜನ VI M.J.F. Lion ಸಂಜಯ ಅರುಣೇದಕರ,ZC Zone I ಲಯನ್ ರಮಾ ಪಟವರ್ಧನ್, ಲಿಯೋ ಡಿಸ್ಟ್ರಿಕ್ಟ ಅಧ್ಯಕ್ಷರಾದ ಲಿಯೋ ರಾಜೇಶ್ವರಿ ಜೋತವಾರ ಇವರು ಉಪಸ್ಥಿತರಿರುವರು.
ಸಾಯಂಕಾಲ 7 ಘಂಟೆಗೆ ಲಯನ್ಸ್ ಸಭಾಭವನದಲ್ಲಿBoard Meeting ನಡೆಸಿ ಸಾರ್ವಜನಿಕ ಸಭೆಯನ್ನು ನಡೆಯಲಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.