ಸ್ವಾದಿಷ್ಟವಾದ ಗೆಣಸಿನ ಪಕೋಡಾ


ಅಡುಗೆ ಮನೆ: ಚಹಾ, ಕಾಫಿ ಜೊತೆಗೆ ಸವಿಯಲು ಸ್ವಾದಿಷ್ಟವಾದ ಗೆಣಸಿನ ಪಕೋಡಾ ರುಚಿಯಾಗಿರುತ್ತೆ.

ಬೇಕಾಗುವ ಸಾಮಗ್ರಿ: ಒಂದು ಸಿಹಿಗೆಣಸು, ಒಂದು ಕಪ್ಕಡಲೆ ಹಿಟ್ಟು, 2 ಚಮಚ ಅಕ್ಕಿಹಿಟ್ಟು, ಅರ್ಧ ಚಮಚಅರಿಶಿನ, 1 ಚಮಚ ಅಚ್ಚಖಾರದ ಪುಡಿ, ಚಿಟಿಕೆ ಬೇಕಿಂಗ್ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೀರು.
ಮಾಡುವ ವಿಧಾನ: ಸಿಹಿಗೆಣಸನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದುಕೊಳ್ಳಿ. ನಂತರ ಅದನ್ನು ತೆಳ್ಳಗಿನ ಸ್ಲೈಸ್ ಗಳಾಗಿ ಕತ್ತರಿಸಿ. ಒಂದು ಬೌಲ್ ನಲ್ಲಿ ಕಡಲೆಹಿಟ್ಟು, ಅಕ್ಕಿಹಿಟ್ಟು, ಅರಿಶಿನ, ಅಚ್ಚಖಾರದ ಪುಡಿ, ಚಿಟಿಕೆ ಸೋಡಾ, ಉಪ್ಪು ಮತ್ತು ನೀರನ್ನು ಬೆರೆಸಿ ಹಿಟ್ಟನ್ನು ಕಲೆಸಿಕೊಳ್ಳಿ. ಹಿಟ್ಟು ತುಂಬಾ ತೆಳುವಾಗಿರಬಾರದು, ಜೊತೆಗೆ ಉಂಡೆಯಾಗದಂತೆ ಕಲೆಸಿ. ಸ್ಲೈಸ್ ಮಾಡಿಟ್ಟ ಗೆಣಸನ್ನು ಈ ಹಿಟ್ಟಿನಲ್ಲಿಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ. ರುಚಿಯಾದ ಸಿಹಿಗೆಣಸಿನ ಪಕೋಡಾ ಸವಿಯಲು ಸಿದ್ಧ.

Categories: ಅಡುಗೆ ಮನೆ

Leave A Reply

Your email address will not be published.