ಮಾರಿಕಾಂಬೆ ಸನ್ನಿಧಿಯಲ್ಲಿ ರೇಖಾ ದಿನೇಶ್ ಗಾಯನ ಮೋಡಿ

ಶಿರಸಿ: ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಅ.24 ರಂದು ನಡೆದ ರೇಖಾ ದಿನೇಶರವರ ಸುಗಮ ಸಂಗೀತ ಕಾರ್ಯಕ್ರಮ ಪ್ರೇಕ್ಷಕರನ್ನು ಭಕ್ತಿಯಲ್ಲಿ ತೇಲಿಸಿ. ರಂಜಿಸಿತು.

ಶಿಷ್ಯರಾದ ಪೃಥ್ವಿ ಬೊಮ್ಮನಳ್ಳಿ, ಸ್ನೇಹಾ ಅಮ್ಮಿನಳ್ಳಿ, ಅಂಜಲಿ ಹೆಗಡೆ ಮತ್ತು ಭೂಮಿ ದಿನೇಶ ಇವರು ಸಹ ಗಾಯನ ಮತ್ತು ತಂಬೂರ ಸಾಥ್ ನೀಡಿದರು. ಗುರುರಾಜ ಹೆಗಡೆ ತಬಲಾದಲ್ಲಿ, ಹಾರ್ಮೋನಿಯಂನಲ್ಲಿ ಸತೀಶ ಭಟ್ ಹೆಗ್ಗಾರ್ ಸಾಥಿಯಾದರು. ಕಿರಣ್ ಹೆಗಡೆ ಕಾನಗೋಡ ಅವರು ಗ್ರಾಮೀಣ ಸೊಗಡಿನ ಡೋಲಕ್‍ವಾದನ ಮನಸೂರೆಗೊಂಡಿತು. ದೇವಸ್ಥಾನ ಆಡಳಿತ ಮಂಡಳಿಯ ಉಪಾಧ್ಯಕ್ಷ ಮನೋಹರ ಮಲ್ಮನೆ ಕಲಾವಿದರನ್ನು ಸ್ವಾಗತಿಸಿ, ಪರಿಚಯಿಸಿದರು

Categories: ಚಿತ್ರ ಸುದ್ದಿ

Leave A Reply

Your email address will not be published.