ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಲಿದಾನಗೈದ ಕೆಚ್ಚೆದೆಯ ಈ ಕ್ರಾಂತಿಕಾರಿಯ ಜನ್ಮದಿನವಿಂದು


ವ್ಯಕ್ತಿ ವಿಶೇಷ: ಅ.22 1900 ರಂದು ಉತ್ತರ ಪ್ರದೇಶದ ಶಹಜಹಾನಪುರದಲ್ಲಿ ಜನಿಸಿದ ನಿರ್ಭಯ ಕ್ರಾಂತಿಕಾರಿ ಅಮರ ಶಹೀದ ಅಶ್ಪಾಕ ಉಲ್ಲಾ ಖಾನರ ಜನ್ಮದಿನ ಇಂದು. ಇವರು ಭಾರತದ ಸ್ವತಂತ್ರ ಸಂಗ್ರಾಮ ದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣ ಹೊಂದಿದ್ದರು. ಬಾಲ್ಯದಲ್ಲಿಯೇ ದೇಶಪ್ರೇಮದ ಬಗ್ಗೆ ಉತ್ಸಾಹವನ್ನು ಹೊಂದಿದ್ದು, ಸ್ವತಂತ್ರ ಹೋರಾಟಗಾರ ಹಾಗು ಕ್ರಾಂತಿಕಾರಿ ಪಂಡಿತ ರಾಮಪ್ರಸಾದ್ ಬಿಸ್ಮಿಲ್‍ರವರ ಜೊತೆಯಾಗಿ ಅಶ್ಪಾಕ ಉಲ್ಲಾರವರು ‘ಹಿಂದುಸ್ತಾನ್ ರಿಪಬ್ಲಿಕನ ಅಸೋಸಿಯೇಷನ್’ ಇದರ ಸಕ್ರಿಯ ಸದಸ್ಯರಾಗಿ ಬ್ರಿಟಿಷ್ ಸರಕಾರದ ವಿರುದ್ಧ ಹೋರಾಟ ಪ್ರಾರಂಭಿಸಿದ್ದರು.
ಕ್ರಾಂತಿಸಿಂಹ ರಾಮ್ ಪ್ರಸಾದ್ ಬಿಸ್ಮಿಲ್ ರ ಗರಡಿಯಲ್ಲಿ ಬೆಳೆದು ಕಾಕೋರಿ ದರೋಡೆಯಲ್ಲಿ ಪ್ರಮುಖ ಪಾತ್ರ ವಹಿಸಿ ಬಂದಷ್ಟೇ ವೇಗವಾಗಿ ತಾಯಿ ಭಾರತೀಯ ಚರಣಗಳಿಗೆ ತನ್ನ ಪ್ರಾಣವನ್ನು ಅರ್ಪಿಸಿದ ಧೀರ ಹುತಾತ್ಮ ಅಶ್ಪಾಕ್ ಅಶ್ಪಾಕ್ ಉಲ್ಲಾ ಖಾನ್ ಗೆ ಶತಕೋಟಿ ನಮನಗಳು.

Categories: ವ್ಯಕ್ತಿ-ವಿಶೇಷ

Leave A Reply

Your email address will not be published.