ಶಿರಸಿಯಲ್ಲಿ ದಿ ವಿಲನ್ ಅಬ್ಬರ- ಚಿತ್ರ ಮಂದಿರ ಹೌಸ್-ಫುಲ್

 

ಶಿರಸಿ: ಗುರುವಾರ ಅಭಿಮಾನಿಗಳೆಲ್ಲ ಬಹು ನಿರೀಕ್ಷೆಯಿಂದ ಎದುರು ನೋಡುತ್ತಿರುವ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ‘ದಿ ವಿಲನ್’ ಚಿತ್ರವು ಬಿಡುಗಡೆಯಾಗಿದ್ದು, ಪ್ರೇಕ್ಷಕರು ಬೆಳಿಗ್ಗಿನಿಂದಲೂ ಟಿಕೇಟ್ ಪಡೆದುಕೊಳ್ಳಲು ಮುಗಿಬೀಳುತ್ತಿದ್ದರು. ನಗರದ ನಟರಾಜ್ ಚಿತ್ರ ಮಂದಿರವು ಬೆಳಿಗ್ಗೆಯ ಶೋಗಳಿಂದಲೂ ತುಂಬಿ ತುಳುಕುತ್ತಿದ್ದು, ಇಬ್ಬರು ಹೀರೋಗಳನ್ನು ಒಂದೇ ಚಿತ್ರದಲ್ಲಿ ನೋಡಿ, ಅವರ ಅಭಿನಯಕ್ಕೆ ಖುಷಿ ಪಟ್ಟು, ಸಿಳ್ಳೆ ಹಾಕಿ ಸಂತೋಷ ಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಟರಾಜ್ ರಸ್ತೆಯಲ್ಲಿ ಕೆಲಕಾಲ ಸಂಚಾರ ದಟ್ಟಣೆಯಾಗುತ್ತು. ಹಾಗೆಯೇ ಕೆಲವೊಂದಿಷ್ಟು ಅಭಿಮಾನಿಗಳು ಟಿಕೇಟ್ ಸಿಗದೆ ನಿರಾಸೆಯಿಂದ ತೆರಳುತ್ತಿರುವ ದೃಶ್ಯವೂ ಕಂಡು ಬಂದಿದೆ.

Categories: ಸಿನಿ-ಕ್ರೀಡೆ

Leave A Reply

Your email address will not be published.