ದೇವಭಾಗ್ ರೆಸಾರ್ಟ್ ಬಳಿ ‘ಹುಳಿ ಮಜ್ಜಿಗೆ’ ಚಿತ್ರೀಕರಣ

ಕಾರವಾರ: ನಿರ್ಮಾಪಕ ರಘುರಾಜನ್ ಅವರ ಎಸ್‌ಎಲ್‌ವಿ  ಆಟ್ರ್ಸ ಪ್ರೊಡಕ್ಷನ್ ಮೂಲಕ ರವೀಂದ್ರ ಕೊಠಾರಿ ನಿರ್ದೇಶನದಲ್ಲಿ ‘ಹುಳಿ ಮಜ್ಜಿಗೆ’ ಚಿತ್ರೀಕರಣ ನಗರದ ದೇವಭಾಗ್ ಬೀಚ್ ರೆಸಾರ್ಟ್ ಪ್ರದೇಶದಲ್ಲಿ ನಡೆಯಿತು. ನಾಯಕ ಪಾತ್ರದಲ್ಲಿ ಕೊಳ್ಳೆಗಾಲ ಸಿನಿಮಾದ ನಾಯಕ ನಟ ದೀಕ್ಷಿತ್ ವೆಂಕಟೇಶ್ ಹಾಗೂ ಕಾಲ್ಗೆಜ್ಜೆ ಮಂಜರಿ ನಾಯಕಿ ರೂಪಿಕಾ ಅಭಿನಯಿಸಿದ್ದಾರೆ. ಚಿತ್ರಕ್ಕೆ ಮಹದೇವ್, ಶ್ಯಾಮ್ ಛಾಯಾಗ್ರಹಣ,ಹಾಗೂ ಮಂಜು,ಕಂಬಿರಾಜ್ ನೃತ್ಯ ಸಂಯೋಜನೆ ಮಾಡಿದ್ದಾರೆ.
ನಟ ದೀಕ್ಷಿತ್ ವೆಂಕಟೇಶ್ ಮಾತನಾಡಿ ಇದು ತನ್ನ 2ನೇ ಚಿತ್ರ. ಈ ಸಿನಿಮಾದಲ್ಲಿ 3 ಹಾಡುಗಳಿದ್ದು ಒಂದು ಟಪಾಂಗುಚಿಯಾಗಿದೆ. ಚಿತ್ರದ ಪ್ರಮೋಷನಲ್ ಹಾಡನ್ನು ರ‍್ಯಾಪರ್ ಚಂದನ್ ಶೆಟ್ಟಿ  ಹಾಡುವರು. ಟಗರು ಸಿನಿಮಾ ಖ್ಯಾತಿಯ ಅಂಥೋನಿ ಮತ್ತೊಂದು ಹಾಡನ್ನು ಹಾಡುವರು. ಈಗಾಗಲೇ ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಈ ದೀಪಾವಳಿಗೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು. ನಿರ್ಮಾಪಕ ರಘುರಾಜನ್ ಮಾತನಾಡಿ ಸಿನಿಮಾದ ಆರಂಭದಿಂದ ಅಂತ್ಯದವರೆಗೂ ಕಥೆ ಆಕರ್ಷಕವಾಗಿದೆ ಎಂದು ತಿಳಿಸಿದರು.

Categories: ಸಿನಿ-ಕ್ರೀಡೆ

Leave A Reply

Your email address will not be published.