ಕಣ್ಣಿಗೆ ಗೋಚರಿಸದ ನೆಟ್ವರ್ಕ್ ಟವರ್ ಕಿರಣಗಳು ಮಾರಕವೇ ? ಇದರ ಬಗ್ಗೆ ನಮಗೆಷ್ಟು ಗೊತ್ತು!

 

ಅರಿವು – ಅಚ್ಚರಿ: ಪದೆ ಪದೇ ಜನರಿಗೆ ಭಯ ಹುಟ್ಟಿಸುವ ಒಂದು ಸಾಮಾನ್ಯ ವಿಷಯವೆಂದರೆ ಮೊಬೈಲ್ ಟವರ್ ಸಿಗ್ನಲ್‍ನಿಂದ ಪರಿಸರಕ್ಕೆ ಮತ್ತು ಪರಿಸರದ ಮುಖ್ಯ ಭಾಗವಾದ ನಮಗೆ ತೊಂದರೆಯೆ..? ಟವರ್‍ಗಳ ಕಾರಣದಿಂದಾಗಿಯೇ ಗುಬ್ಬಿಗಳ ಸಂಖ್ಯೆ ಕಡಿಮೆಯಾಗಿದೆಯೆ? ಗರ್ಭಿಣಿಯರಿಗೆ ಇದು ಹಾನಿಕಾರಕವೆ ? ಮುಂತಾದವು…
ಇಲ್ಲಿ ನಾವು ನೆಟ್ವರ್ಕ್ ಟವರ್ ಹೊರಸೂಸುವ ವಿಕರಣದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ವಿದ್ಯುತ್ ಕಾಂತೀಯ ಕಿರಣ ಎಂದರೆ ಪೋಟಾನ್ ಎನ್ನುವುದು ಕಣಾಲೆ (ಕಣ+ಅಲೆ)ಗಳ ಪ್ರವಾಹ. ಈ ಪ್ರವಾಹದ ಶಕ್ತಿಯು ಇದರ ಕಣಗಳ ಆವೃತ್ತಿ (ಫ್ರಿಕ್ವೆನ್ಸಿ)ಯನ್ನು ಆಧರಿಸಿರುತ್ತದೆ. ಈ ಆವೃತ್ತಿಯನ್ನು ಏರಿಕೆ ಕ್ರಮದಲ್ಲಿ ಬರೆದಾಗ ಅತೀ ಕಡಿಮೆ ಶಕ್ತಿಯುಳ್ಳ ರೇಡಿಯೋ ಅಲೆಗಳು ಎಂತಲೂ, ಅತೀ ಹೆಚ್ಚು ಶಕ್ತಿಯಿರುವು ಕಿರಣಗಳನ್ನು ಗಾಮಾ ಕಿರಣಗಳೆಂತಲೂ ಕರೆಯುತ್ತೇವೆ. ಸೂರ್ಯನ ಕಿರಣದಲ್ಲಿ ನಾವು ನೋಡುವ ವಿದ್ಯುತ್ ಕಾಂತೀಯ ಕಿರಣಗಳು ಇದೇ ಏರಿಕೆ ಕ್ರಮದಲ್ಲಿ ಏಳರಲ್ಲಿ ನಾಲ್ಕನೆಯದಾಗಿ ಕಂಡುಬರುತ್ತದೆ.
ಟವರ್‍ಗಳು ಹೊರಸೂಸುವ ಕಿರಣಗಳನ್ನು ನಾವು ಮೈಕ್ರೋವೇವ್ ಎನ್ನುತ್ತೇವೆ. ಇದು ಶಕ್ತಿಯ ಏರಿಕೆ ಕ್ರಮದಲ್ಲಿ ಕೇವಲ ಎರಡನೇಯದು. ಅಂದರೆ ಸಾಮಾನ್ಯ ಬೆಳಕಿಗಿಂತ ಹಲವು ನೂರು ಪಟ್ಟು ಕಡಿಮೆ ಶಕ್ತಿಯುಳ್ಳದ್ದು. ಹಾಗಾಗಿ, ಈ ಕಿರಣದ ಪ್ರಭಾವವು ಮೇಲೆ ಕಾಣಿಸಿದವುಗಳ ಮೇಲೆ ನಗಣ್ಯವೆನ್ನುವಷ್ಟು ಪರಿಣಾಮ ಬೀರಬಲ್ಲದು.

Categories: ಅರಿವು-ಅಚ್ಚರಿ

Leave A Reply

Your email address will not be published.