ಬಿಜೆಪಿ ನಗರ ಘಟಕ ವತಿಯಿಂದ ಸ್ವಚ್ಛತಾ ಅಭಿಯಾನ

 

ಕಾರವಾರ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಾಲ್ಕು ವರ್ಷಗಳ ಅವಧಿ ಪೂರೈಸಿದ ಪ್ರಯುಕ್ತ ಬಿಜೆಪಿ ನಗರ ಘಟಕ ವತಿಯಿಂದ ಇಲ್ಲಿನ ನಗರಸಭೆ ಪಕ್ಕದ ಆವರಣದ ಉದ್ಯಾನದಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಶಿವಾಜಿ ಮಹಾರಾಜ ಮತ್ತು ಹೆಂಜಾ ನಾಯ್ಕ ಪುತ್ಥಳಿಗೆ ಮುಖಂಡರಾದ ಅನಮೋಲ ರೇವಣಕರ ಹಾಗೂ ಮಾಲಾ ಹುಲಸ್ವಾರ ಹಾರಹಾಕಿ ಸ್ವಚ್ಛತಾ ಅಭಿಯಾನದ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ನಗರಾಧ್ಯಕ್ಷ ಮನೋಜ ಭಟ್, ನಾಗೇಶ ಕುರ್ಡೇಕರ, ಸಂದೇಶ ಶೆಟ್ಟಿ, ವಿನಾಯಕ ದುದಾಳಕರ, ನಯನಾ ನೀಲಾವರ, ಸುಜಾತಾ ಬಾಂದೇಕರ, ಭಾನು ಕುಡತರಕರ, ಆನಂದು ಮಡಿವಾಳ, ರಾಹುಲ್ ನಾಯ್ಕ, ನಾಗರಾಜ ಶೇಟ್, ಸತೀಶ ತಲೇಕರ, ರಾಜೇಶ ನಾಯ್ಕ ಸಿದ್ಧರ, ಉದಯ ಬಶೆಟ್ಟಿ, ಉಲ್ಲಾಸ ಭಟ್, ರವಿರಾಜ ಅಂಕೋಲೆಕರ, ಸುಹಾಸ ಕಡವಾಡಕರ, ಪ್ರದೀಪ ನಾಯ್ಕ, ಗಜಾನನ ಕುಬಡೆ, ಸುನೀತಾ, ಸಂಜನಾ ನಾಯ್ಕ, ಪ್ರತಿಮಾ ಲೋಟ್ಲೆಕರ, ರೇಷ್ಮಾ ರಾಯ್ಕರ, ನಾಗರತ್ನಾ ಪ್ರಭು, ಪ್ರಿಯಾ ವೆರ್ಣೇಕರ, ಜಯಶ್ರೀ ಪಾಲನಕರ, ತುಳಸಿ ವೈಂಗಣಕರ, ರೇಷ್ಮಾ ವೆರ್ಣೇಕರ, ಕಲ್ಪನಾ ಠಾಕರಕರ, ರುಚಿತಾ ಗಾಂವಕರ, ಅನಿತಾ ವೆರ್ಣೇಕರ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.