ಚುನಾವಣೆ ಸಂದರ್ಭದಲ್ಲಿ ವಶಪಡಿಸಿಕೊಂಡಿದ್ದ ಅಕ್ರಮ ಮದ್ಯ ನಾಶ

ಕಾರವಾರ:ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ವಶಪಡಿಸಿಕೊಂಡಿದ್ದ ಒಟ್ಟು 6.5 ಲಕ್ಷ ಮೌಲ್ಯದ ಅಕ್ರಮ ಮದ್ಯವನ್ನು ಕಾರವಾರ ಅಬಕಾರಿ ಇಲಾಖೆ ಅಧಿಕಾರಿಗಳು ಮಾಜಾಳಿ ಚೆಕ್ ಪೋಸ್ಟ್ ಬಳಿಯ ಅರಣ್ಯ ಪ್ರದೇಶದಲ್ಲಿ ನಾಸಪಡಿಸಿದರು.

ಅಬಕಾರಿ ಉಪ ವಲಯ, ಪೊಲೀಸ್ ಹಾಗೂ ರೈಲ್ವೆ ಇಲಾಖೆಯಿಂದ ಒಟ್ಟು 53 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 2650 ಲೀಟರ್ ಮದ್ಯವನ್ನು ಲಾರಿಯೊಂದರ ಮೂಲಕ ಅರಣ್ಯ ಪ್ರದೇಶಕ್ಕೆ ಸಾಗಿಸಿದ್ದ ಅಬಕಾರಿ ಇಲಾಖೆ ಅಧಿಕಾರಿಗಳು ಅಲ್ಲಿ ಪ್ರತಿ ಬಾಟಲ್ ಗಳನ್ನು ಒಡೆದು ಮದ್ಯವನ್ನು ನೆಲಕ್ಕೆ ಸುರಿಯುವುದರ ಮೂಲಕ ನಾಶಪಡಿಸಿದರು. ಅದರಲ್ಲಿ ಬಹುತೇಕ ಗೋವಾದ ಮದ್ಯವೇ ಹೆಚ್ಚಿತು. ವಿಸ್ಕಿ, ರಮ್, ಪೆನ್ನಿ, ಬಿಯರ್ ಹಾಗೂ ಕ್ಯಾನ್ ಗಳಲ್ಲಿದ್ದ ಮದ್ಯ ಸಾರವನ್ನು ನಾಶಪಡಿಸಿದರು.

ಸ್ಥಳದಲ್ಲಿ ಉಪಸ್ಥಿತರಿದ್ದ ಅಬಕಾರಿ ಇಲಾಖೆ ಜಿಲ್ಲಾಧಿಕಾರಿ ಎಲ್ ಮಂಜುನಾಥ ಮಾತನಾಡಿ, ವಿಧಾನಸಭಾ ಚುನಾವನೆ ವೇಳೆ ಕಾರವಾರ ವಲಯ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದ ಹೊರ ರಾಜ್ಯದ ಮದ್ಯವನ್ನು ನಾಶಪಡಿಸಲಾಗಿದೆ. ಇದನ್ನು ಮನುಷ್ಯರಿಗೆ ಅಥವಾ ಯಾವುದೇ ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗದಂತೆ ಅರಣ್ಯ ಪ್ರದೇಶದಲ್ಲಿ ನಾಶಪಡಿಸಿ ಅದನ್ನು ಮಣ್ಣಿನಲ್ಲಿ ಮುಚ್ಚಲಾಗುತ್ತದೆ. 53 ಪ್ರಕರಣಗಳಲ್ಲಿ 17 ಪೊಲೀಸ್ ಇಲಾಖೆ ಹಾಗೂ ಉಳಿದ 36 ಪ್ರಕರಣಗಳನ್ನು ಅಬಕಾರಿ ಇಲಾಖೆ ವಶಪಡಿಸಿಕೊಂಡಿದೆ. ಪ್ರಕರಣದಡಿ 20ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೆ ಪ್ರತಿ ಪ್ರಕರಣದ ಮದ್ಯದ ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಗಿದ್ದು, ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.