ಸಿಎ ಪರೀಕ್ಷೆಯಲ್ಲಿ ಶ್ರೀಗಣೇಶ ಉಳ್ಳಾನೆ ಉತ್ತೀರ್ಣ

 

ಸಿದ್ದಾಪುರ: ಚಾರ್ಟರ್ಡ್ ಅಕೌಂಟನ್ಸಿ ಕೋರ್ಸ್ ನ ನವೆಂಬರ್ ನಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಇತ್ತೀಚೆಗೆ ಪ್ರಕಟವಾಗಿದ್ದು, ತಾಲೂಕಿನ ಬಿದ್ರಕಾನಿನ ಶ್ರೀಗಣೇಶ ಹೆಗಡೆ ಉಳ್ಳಾನೆ ಉತ್ತೀರ್ಣನಾಗಿದ್ದಾರೆ. ಶಿರಸಿಯ ಸಿಎ ಸತೀಶ್ ಹೆಗಡೆ & ಕಂಪನಿ ಇವರಲ್ಲಿ ಆರ್ಟಿಕಲ್ ಶಿಪ್ ಮಾಡಿದ್ದು, ಸತತ ಅಧ್ಯಯನ, ಸ್ವಂತ ಪರಿಶ್ರಮದಿಂದ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಾಧನೆಗೈದಿದ್ದಾರೆ. ಇವರು ಧಾರವಾಡ ಹಾಲು ಉತ್ಪಾದಕ ಕೇಂದ್ರದ ನಿರ್ದೇಶಕರಾದ ಲಕ್ಷ್ಮೀನಾರಾಯಣ ಕೆ ಹೆಗಡೆ ದಂಪತಿಯ ಪುತ್ರರಾಗಿದ್ದು, ಶಿಕ್ಷಣದ ಜೊತೆ ಜೊತೆಯಲ್ಲೇ ಹಿಂದೂಸ್ತಾನಿ ಗಾಯಕರೂ ಆಗಿರುವ ಇವರು ವಿನಾಯಕ ಭಟ್ಟ ಹಿರೇಹದ್ದ ಇವರಲ್ಲಿ ತಮ್ಮ ಸಂಗೀತಾಭ್ಯಾಸವನ್ನು ಕಳೆದ 13 ವರುಷಗಳಿಂದ ನಡೆಸುತ್ತಿದ್ದಾರೆ. ಇವರ ಸಹೋದರ ಶ್ರೀಕೃಷ್ಣ ಹೆಗಡೆ ಸಹ ಕನೆಕ್ಟ್ ಪಾರ್ಮರ್ ಎಂಬ ಸಂಸ್ಥೆಯಂದೊನ್ನು ಸ್ಥಾಪಿಸಿ, ರೈತರ ಮಾರಾಟದ ವಸ್ತುಗಳಿಗೆ ನೇರ ಅಂತರ್ಜಾಲ ಮಾರುಕಟ್ಟೆಯನ್ನು ಒದಗಿಸುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಂಡಿರುವುದು ಇಲ್ಲಿ ಉಲ್ಲೇಖನೀಯ. ಇವರುಗಳ ಈ ಎಲ್ಲ ಸಾಧನೆಗೆ ಕುಟುಂಬಸ್ಥರು, ಹಿತೈಷಿಗಳು ಶುಭ ಕೋರಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.