ಮಾಣಿಪಡಿ ವರದಿ ಬಹಿರಂಗ ಪಡಿಸಿ: ಶ್ರೀನಿವಾಸ ಪೂಜಾರಿ

ಕಾರವಾರ: ಅಲ್ಪಸಂಖ್ಯಾತರ ಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಮೈತ್ರಿ ಸರ್ಕಾರ ಅನ್ವರ ಮಾಣಿಪಡಿ ವರದಿಯನ್ನು ಬಹಿರಂಗ ಪಡಿಸುವದರ ಮೂಲಕ ಅಲ್ಪಸಂಖ್ಯಾತರ ಆಸ್ತಿ ಲಪಟಾಯಿಸಿದವರ ಹೆಸರು ತಿಳಿಸಬೇಕು ಎಂದು ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧಡೆ ಅಲ್ಪ ಸಂಖ್ಯಾತರಿಗೆ ದೊರೆಯಬೇಕಾಗಿದ್ದ 230 ಲಕ್ಷ ಕೋಟಿ ರೂ ಮೌಲ್ಯದ ಆಸ್ತಿಯನ್ನು ಕೆಲ ರಾಜಕಾರಣಿಗಳು ತಮ್ಮದಾಗಿಸಿಕೊಂಡಿದ್ದಾರೆ. 20 ಸಾವಿರ ಎಕರೆ ಭೂಮಿ ರಾಜಕಾರಣಿಗಳ ಪಾಲಾಗಿದೆ. ಈ ಕುರಿತು ಅನ್ವರ್ ಮಾಣಿಪಡಿ ಸರ್ಕಾರಕ್ಕೆ ನೀಡಿದ ವರದಿ ಬಹಿರಂಗವಾಗಬೇಕು ಎಂದು ಆಗ್ರಹಿಸಿದರು.
ಈ ವರದಿ ಮಂಡಿಸುವಂತೆ ಹೈ ಕೋರ್ಟ್ ಆದೇಶಿಸಿದರೂ ಸರ್ಕಾರ ಮಂಡಿಸಲು ಹಿಂಜರಿಯುತ್ತಿದೆ. ಅಧಿಕಾರದಲ್ಲಿರುವ ಸರಕಾರ ಪ್ರಾಮಾಣಿಕವಾಗಿದ್ದರೆ. ಈ ವರದಿ ಮಂಡಿಸಲಿ ಎಂದು ಸವಾಲು ಹಾಕಿದರು.
ಸಾಲಮನ್ನಾ ಕುರಿತು ಸರ್ಕಾರ ಈವರೆಗೂ ಸರಿಯಾದ ಸುತ್ತೋಲೆ ಹೊರಡಿಸಿಲ್ಲ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಸಾಲಮನ್ನಾ ಮಾಡುವದಾಗಿ ಘೋಷಿಸಿದ ಕುಮಾರಸ್ವಾಮಿ ಅಧಿಕಾರಕ್ಕೆ ಬಂದು ಎರಡು ತಿಂಗಳಾದರೂ ರೈತರ ಕುರಿತು ಕಾಳಜಿ ವಹಿಸಿಲ್ಲ. ಇದರಿಂದಾಗಿ ರೈತರು ಹಾಗೂ ಮೀನುಗಾರರು ಕಂಗಾಲಾಗಿದ್ದಾರೆ ಎಂದು ಹೇಳಿದರು. ಪ್ರಣಾಳಿಕೆಯಲ್ಲಿ ತಿಳಿಸಿದಂತೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಆಗಿಲ್ಲ. ಸಮಯ ಕೊಟ್ಟರೂ ಸರ್ಕಾರ ಸುದಾರಿಸಿಕೊಂಡಿಲ್ಲ ಎಂದು ದೂರಿದರು. ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ 27ರೂ ನೀಡುತ್ತಿದೆ. ರಾಜ್ಯ ಸರ್ಕಾರ 3 ರೂ ನೀಡುತ್ತಿದೆ. ಆದರೆ, ಪ್ರಚಾರದಲ್ಲಿ ಮಾತ್ರ ರಾಜ್ಯ ಸರ್ಕಾರ ಮುಂದಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಪರ ಜನಾದೇಶ ಇದ್ದರೂ ಮೈತ್ರಿ ಮಾಡಿಕೊಂಡು ಆಡಳಿತ ನಡೆಸುತ್ತಿರುವ ಸರ್ಕಾರಕ್ಕೆ ಆತಂಕ ಹಾಗೂ ಅನಾಥ ಪ್ರಜ್ಞೆ ಕಾಡುತ್ತಿದೆ. ಸಧನದಲ್ಲಿ ಕೇಳಲಾದ ಶೇ.50 ರಷ್ಟು ಪ್ರಶ್ನೆಗೆ ಉತ್ತರ ಕೊಡಲು ಸಾದ್ಯವಾಗದಿರುವದೇ ಇದಕ್ಕೆ ಸಾಕ್ಷಿ ಎಂದರು. ಪರೇಶ್ ಮೇಸ್ತ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಿ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ನಡೆದ 23 ಹಿಂದೂ ಕಾರ್ಯಕರ್ತರ ಹತ್ಯೆಗೆ ನ್ಯಾಯ ಸಿಗುವವರೆಗೂ ಬಿಜೆಪಿ ಹೋರಾಟ ನಡೆಸಲಿದೆ ಎಂದರು. ಶಾಸಕಿ ರೂಪಾಲಿ ನಾಯ್ಕ, ಮಾಜಿ ಶಾಸಕ ಸುನೀಲ ಹೆಗಡೆ ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.