ವಿದ್ಯುತ್ ಸಮಸ್ಯೆ: 21ರಂದು ಪ್ರತಿಭಟನೆ

ಶಿರಸಿ: ಹೆಸ್ಕಾಂದಿಂದ ವಾನಳ್ಳಿ, ಜಡ್ಡಿಗದ್ದೆ, ಹುಲೇಕಲ್ ಭಾಗದಲ್ಲಿ ಈಗ ಒಂದು ತಿಂಗಳುಗಳಿಂದಾ ವಿದ್ಯುತ್ ಸಂಪರ್ಕ ಸರಿಯಾಗಿ ನೀಡುತ್ತಿಲ್ಲ. ನಾವು ಹುಲೇಕಲ್ ಸೆಕ್ಷನ್‍ದಲ್ಲಿ ಸರಿಯಾಗಿ ಬಿಲ್ ತುಂಬು ಗ್ರಾಹಕರಾಗಿದ್ದು, ನಮಗೆ ಈ ಒಂದು ತಿಂಗಳುಗಳಿಂದ ಸರಿಯಾಗಿ ವಿದ್ಯುತ್ ನೀಡದೇ ಹೆಸ್ಕಾಂ ಸೇವೆಯಲ್ಲಿ ಚ್ಯುತಿ ಮಾಡುತ್ತ ಬಂದಿದೆ. ನಾವು ಎಷ್ಟೇ ವಿನಂತಿಸಿದರು ನಮ್ಮ ತೊಂದರೆಗೆ ಹೆಸ್ಕಾಂ ಅಧಿಕಾರಿಗಳು ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ ಹೀಗಾಗಿ ಹುಲೇಕಲ್ ವಾನಳ್ಳಿ , ಜಡ್ಡಿಗದ್ದೆ, ಭಾಗದ ವಿದ್ಯುತ್ ಗ್ರಾಹಕರು ಜು.21ರಂದು ಶನಿವಾರ 10 ಘಂಟೆಗೆ ಶಾಂತಿಯುತ ಪ್ರತಿಭಟನೆಯನ್ನು ಹೆಸ್ಕಾಂ (ಕೆ. ಇ. ಬಿ) ಕಛೇರಿ ಎದುರು ಹಮ್ಮಿಕೊಳ್ಳಲಾಗಿದೆ. ಎಂದು ಸಂಘಟಕ ಗ್ರಾಮ ಪಂಚಾಯತ್ ಸದಸ್ಯ ರಾಘವ ಹೆಗಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.