ಪತ್ರಕರ್ತನಾದವರು ಪಕ್ಷಪಾತಿಗಳಾಗಿರ ಬೇಕು: ಜಯಂತ ಕಾಯ್ಕಿಣಿ


ಗೋಕರ್ಣ: ಪತ್ರಕರ್ತನಾದ ಮನುಜ ಪಕ್ಷಪಾತಿಗಳಾಗಿರ ಬೇಕು, ಜಿಜ್ಞಾಸೆ, ಸತ್ಯದ ಕಡೆ ಮುಖವಾಗಿರ ಬೇಕು ಎಂದು ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.
ಅವರು ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ ಶಿರಸಿ ಮತ್ತು ತಾಲೂಕಾ ಪತ್ರಕರ್ತ ಸಂಘ ಕುಮಟಾ ಮತ್ತು ಗೋಕರ್ಣ ಪತ್ರಕರ್ತರ ಸಹಯೋಗದಲ್ಲಿ ನಡೆದ ಪತ್ರಿಕಾ ದಿನಾಚರಣೆ ಮತ್ತು ಪ್ರಶಸ್ತಿ , ಪ್ರಧಾನ , ಸನ್ಮಾನ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಮತ್ತು ಸಾಹಿತ್ಯದ ಕುರಿತು ಉಪನ್ಯಾಸ ನೀಡಿದರು. ಸಾಹಿತ್ಯ ಮತ್ತು ಪತ್ರಿಕೋದ್ಯಮ ಎಂದು ವಿಂಗಡನೆಯ ಮಾತೇ ತಪ್ಪು , ಸಾಹಿತ್ಯ ದೊಡ್ಡ ವೃಕ್ಷ , ಚಿತ್ರಿಗೀತೆ ಮತ್ತು ಸಾಹಿತ್ಯ ವೃಕ್ಷದ ರಂಬೆ, ಕೊಂಬೆ ಇದ್ದ ಹಾಗೇ ಪತ್ರಿಕೋದ್ಯಮ ಸಾಹಿತ್ಯದ ಹಂಗಿನಲ್ಲೇ ಇರುವಂತಹುದು , ಸಾಹಿತ್ಯ , ಜನಜೀವನದ ಆತ್ಮ ಸಾಕ್ಷಿಯ ಒಂದು ಸೊಲ್ಲು ಎಂದರು .
ನಮ್ಮ ಸಮಾಜದ ನಾಡಿ ಮಿಡಿತ ಹೇಗೆ ಇದೆ ಎಂಬುದನ್ನು ಲಿಖಿತ ರೂಪದಲ್ಲಿ ತಿಳಿಸುವುದು ಸಾಹಿತ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಪತ್ರಿಕಾ ಧರ್ಮ ಅನ್ನುವುದು ದೊಡ್ಡದು . ತಮ್ಮ ಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ದಿ ಕೆಲೆಸದ ಬಗ್ಗೆ , ರಾಜಕಾರಣಿ ತಪ್ಪು ಮಾಡಿದ್ದಿದ್ದರೆ ಅದನ್ನಾ ಬರೆಯಯವಂತಾಗ ಬೇಕು. ದೃಶ್ಯ ಮಾಧ್ಯಮ ಬಂದ ನಂತರ ಪತ್ರಿಕೆ ಬಿದ್ದು ಹೋಗಿದೆ ಅನಿಸಿತ್ತು, ಆದರೆ ದೃಶ್ಯ ಮಾಧ್ಯಮದಲ್ಲಿ ಒಮ್ಮೆ ಬಂದು ಹೋಗುತ್ತದೆ . ಆದರೆ ಪತ್ರಿಕೆಯಲ್ಲಿ ಬಂದ ವಿಷಯ ತಪ್ಪೂ ಸರಿಯೂ ಎಂಬ ವಿಶ್ಲೇಷಣೆ ಮಾಡುವ ಅವಕಾಶವಿದೆ ಆದ ಕಾರಣಕ್ಕೆ ಪತ್ರಿಕೆ ಯಾವ ಕಾರಣಕ್ಕೂ ನಮ್ಮನ್ನು ಬಿಟ್ಟು ಹೋಗಲಿಕ್ಕೆ ಸಾಧ್ಯವಿಲ್ಲ ಎಂದರು. ಉತ್ತರ ಕನ್ನಡ ಅಭಿವೃದ್ದಿಗೆ ಪತ್ರಕರ್ತರ ಸಹಾಯ ಅವಶ್ಯಕ ಎಂದರು.
ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯಾಧ್ಯಕ್ಷ ಎಸ್ ರಾಜು ಅವರು ಮಾತನಾಡಿ ಪತ್ರಕರ್ತರು , ಸಾಹಿತಿಗಳು ಕಲಾವಿದರ ಪರಿಸ್ಥಿತಿ ಅವಲೋಕನ ಮಾಡಿದಾಗ ಎಲ್ಲೂ ಒಂದು ಕಡೆಗೆ ಸರಕಾರ ಸರಿಯಾದ ಮೂಲಭೂತ ಸೌಕರ್ಯಗಳನ್ನಾ ಒದಗಿಸುತ್ತಿಲ್ಲಾ , ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳ ಬೇಕು. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಡೆದಿದೆ ಎಂದರು.
ಸ್ವಾಮೀಜಿಗಳು ಧರ್ಮದ ವಿಚಾರ ಬಿಟ್ಟು ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾರೆ. ರಾಜಕಾರಣಿಗಳು ಜನರ ಸೇವೆ ಅಭಿವೃದ್ದಿ ಕಾರ್ಯಗಳನ್ನು ಮಾಡಿ ಜನರ ವಿಶ್ವಾಸಕ್ಕೆ ತೆಗೆದು ಕೊಳ್ಳುವುದು ಬಿಟ್ಟು ವ್ಯವಹಾರಿಕವಾಗಿ ಮಾತನಾಡ ತೊಡಗಿದ್ದಾರೆ. ತಮ್ಮ ಸಂಬಳ , ತಮ್ಮ ಆಸ್ತಿ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದರು. ಶಾಸಕರು ಶಾಸಕಾಂಗದ ಜವಾಬ್ದಾರಿ ಮರೆತಿದ್ದಾರೆ. ಸ್ವಾಮೀಜಿಗಳು ಧರ್ಮದ ಜವಾಬ್ದಾರಿ ಮರೆತಿದ್ದಾರೆ. ನಾವು ಪತ್ರಿಕಾ ದಿನಚರಣೆ ದಿನದಲ್ಲಿ ಕೇವಲ ಟಿ.ಆರ್.ಪಿ.ಗೋಸ್ಕರ ನಮ್ಮ ಜವಾಬ್ದಾರಿಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಅನಿಸುತ್ತಿದೆ ಅದು ಆಗಬಾರದು ಎಂದರು.
ಸಮಾರಂಭದಲ್ಲಿ ಶ್ಯಾಮರಾವ್ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಶ್ರೀದರ ಅಡಿಯವರಿಗೆ, ಜಿ.ಎಸ.ಹೆಗಡೆ ಅಜ್ಜೀಬಳ ಪ್ರಶಸ್ತಿಯನ್ನು ಪಾಂಡುರಂಗ ಪಟಗಾರ ಜೋಯಿಡಾ, ಇನಾಯತುಲ್ಲಾ ಗವಾಯಿ ಭಟ್ಕಳ ಇವರಿಗೆ ಪ್ರಧಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಧರ ಅಡಿ ಸಂಯುಕ್ತ ಕರ್ನಾಟಕದಲಿ ಶ್ಯಾಮರಾವ್ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ ಅನುಭವದಿಂದ ಈ ಮಟ್ಟದ ಪ್ರಶಸ್ತಿ ಲಭಿಸಿದೆ. ತನ್ನ 35 ವರ್ಷ ಪತ್ರಿಕಾ ರಂಗದಲ್ಲಿ ಸಹಕರಿಸಿದ ಎಲ್ಲಾ ಹಿರಿಯರಿಗೆ ಮತ್ತು ಓದುಗರನ್ನು ಸ್ಮರಿಸಿ ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಹಿರಿಯ ವಿತರಕರಾದ ಗಜಾನನ ಮಹಾದೇವ ದೀವಟಿಗೆಯವರಿಗೆ ಸನ್ಮಾನಿಸಲಾಯಿತು. ಇದಕ್ಕೂ ಮೊದಲು ರಾಜೀವ ಅಜ್ಜೀಬಳವರ ಕೃತಿ ಉತ್ತರ ಕನ್ನಡ ಪತ್ರಿಕೋದ್ಯಮದ ಶತಮಾನದ ಹೆಜ್ಜೆಗುರುತುಗಳು ಪುಸ್ತಕವನ್ನು ರಾಜ್ಯಾಧ್ಯಕ್ಷ ಎಸ್ ರಾಜು ಬಿಡುಗಡೆಮಾಡಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಸಂಘದ ಜಿಲ್ಲಾ ಅಧ್ಯಕ್ಷ ಸುಬ್ರಾಯ ಭಟ್ ಬಕ್ಕಳ, ಕಾರ್ಯದರ್ಶಿ ಪ್ರದೀಪ ಶೆಟ್ಟಿ, ನಾಗರಾಜ ಹಿತ್ಲಮಕ್ಕಿ, ಪಿ.ಎಸ.ಐ. ಸಂತೋಷಕುಮಾರ, ರಾಧಾಕೃಷ್ಣ ಭಟ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.