ಅಬ್ಬರದ ಗಾಳಿ: 50ಕ್ಕೂ ಹೆಚ್ಚು ಅಡಿಕೆ ಮರಗಳಿಗೆ ಹಾನಿ

ಸಿದ್ದಾಪುರ :ಕಳೆದೆರಡು ದಿನಗಳಿಂದ ಬೀಸುತ್ತಿರುವ ಅಬ್ಬರದ ಗಾಳಿಯ ವೇಗಕ್ಕೆ ಬ್ರಹತ್ ಗಾತ್ರದ ಮಾವಿನ ಮರವೊಂದು ಅಡಿಕೆ ತೋಟದಲ್ಲಿ ಬಿದ್ದ ಪರಿಣಾಮ ಫಲಕ್ಕೆ ಬಂದಿದ್ದ 50ಕ್ಕೂ ಹೆಚ್ಚು ಅಡಿಕೆ ಮರಗಳು ಮುರಿದು ಬಿದ್ದು ಅಪಾರ ಹಾನಿ ಸಂಭವಿಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ.

ತಾಲೂಕಿನ ಹೆಗ್ಗರಣೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಲಗಾರ ಗ್ರಾಮದ ಡಿ.ಆರ್ ಹೆಗಡೆ ಎಂಬುವವರಿಗೆ ಸಂಬಂಧಿಸಿದ ಅಡಿಕೆ ತೋಟ ಇದಾಗಿದೆ. ತೊಟದಂಚಿನಲ್ಲಿಯೇ ಇದ್ದ ಮಾವಿನಮರ ಅಡಿಕೆ ತೋಟಕ್ಕೆ ಬಿದ್ದ ಪರಿಣಾಮ ಹತ್ತಾರು ವರ್ಷಗಳಿಂದ ಫಲ ನೀಡುತ್ತಿದ್ದ ಅಡಿಕೆ ಮರಗಳು ಮುರಿದು ಬಿದ್ದು ತುಂಬಲಾರದ ನಷ್ಟ ಸಂಭವಿಸಿದೆ. ಸೋಮವಾರ ಹೆಗ್ಗರಣೆ ಗ್ರಾಮ ಲೆಕ್ಕಾಧಿಕಾರಿ ಆರ್.ಎಮ್ ನಾಯ್ಕ್ ಸ್ಥಳ ಭೇಟಿ ನೀಡಿ ಹಾನಿ ಫರಿಶೀಲನೆ ನಡೆಸಿ ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.

 

Categories: ಜಿಲ್ಲಾ ಸುದ್ದಿ

Leave A Reply

Your email address will not be published.