ಅತಿಕ್ರಮಣದಾರರು ನಿರಾಶ್ರಿತರಾಗಿ ಅತಂತ್ರರಾಗುವ ಭಯ ಉದ್ಭವಿಸಿದೆ: ಎ.ರವೀಂದ್ರ ನಾಯ್ಕ

ಕಾರವಾರ:ವಾಸ್ತವ್ಯ ಹಾಗೂ ಜೀವನಕ್ಕಾಗಿ ಅರಣ್ಯಭೂಮಿ ಅವಲಂಬಿತವಾಗಿರುವ ಅತಿಕ್ರಮಣದಾರರಿಗೆ ಮಂಜೂರಿಗೆ ಸಂಬಂಧಿಸಿದ ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿನ ವೈಫಲ್ಯದಿಂದಾಗಿ ಕಾಯಿದೆ ಅಡಿ ಅರ್ಜಿ ಸಲ್ಲಿಸಿರುವ ಜಿಲ್ಲೆಯ 46,718 ಅತಿಕ್ರಮಣದಾರರು ನಿರಾಶ್ರಿತರಾಗಿ ಅತಂತ್ರರಾಗುವ ಭಯ ಉದ್ಭವಿಸಿದೆ ಎಂದು ಜಿಲ್ಲಾ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ಆತಂಕ ವ್ಯಕ್ತ ಪಡಿಸಿದ್ದಾರೆ.

ಸರ್ವೋಚ್ಛ ನ್ಯಾಯಾಲಯದಲ್ಲಿ ವನ್ಯಜೀವಿ ರಕ್ಷಣೆಯ ಟ್ರಸ್ಟ್ ಮತ್ತು ಇನ್ನಿತರ ಸರ್ಕಾರೇತರ ಸಂಸ್ಥೆಗಳು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕøತಗೊಂಡಂತಹ ಪ್ರದೇಶದಿಂದ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಿ ಸದ್ರಿ ಅತಿಕ್ರಮಣ ಶೀಘ್ರದಲ್ಲಿ ಅರಣ್ಯೀಕರಣ ಮಾಡುವಂತೆ ರಿಟ್ ಅರ್ಜಿ ದಾಖಲಿಸಿವೆ. ಈ ಹಿನ್ನೆಲೆಯಲಿ ರಾಜ್ಯ ಸರಕಾರವು ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಅರಣ್ಯ ಹಕ್ಕು ಪಡೆದಂತವರ ವಿವರ, ತಿರಸ್ಕಾರಗೊಂಡಿರುವ ಮಾಹಿತಿ, ಮಂಜೂರಿ ಮತ್ತು ತಿರಸ್ಕøತವಾಗಿರುವ ಒಟ್ಟೂ ಕ್ಷೇತ್ರ ಮೊದಲಾದ ಮಾಹಿತಿಯನ್ನು ಒದಗಿಸಿದೆ. ಹೀಗಾಗಿ ಸರ್ವೋಚ್ಛ ನ್ಯಾಯಾಲಯದ ಮುಂದಿನ ಆದೇಶವು ತಿರಸ್ಕøತಗೊಂಡಿರುವ ಅತಿಕ್ರಮಣದಾರರ ಮುಂದಿನ ಭವಿಷ್ಯ ನಿರ್ಧರಿಸಲಿದೆ ಅವರು ತಿಳಿಸಿದ್ದಾರೆ.

ಅತಿಕ್ರಮಣದಾರರ ಮೇಲೆ ಒಕ್ಕಲೆಬ್ಬಿಸುವ ಆದೇಶ ಜಾರಿಯಾದಲ್ಲಿ ಜಿಲ್ಲೆಯ ಸಾಮಾಜಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಜಿಲ್ಲೆಯ ಒಟ್ಟೂ ಜನಸಂಖ್ಯೆಯಲ್ಲಿ 1/3 ಅತಿಕ್ರಮಣದಾರರ ಕುಟುಂಬವೇ ಅರಣ್ಯಭೂಮಿಯ ಮೇಲೆ ಅವಲಂಬಿತವಾಗಿದೆ. ಜಿಲ್ಲೆಯಲ್ಲಿ ಕಳೆದ 27 ವರ್ಷದಿಂದ ಅರಣ್ಯವಾಸಿಗಳ ಪರ ಸಂಘಟನೆ, ಹೋರಾಟ, ಆಂದೋಲನ ನಡೆಸಿದರೂ ಹೋರಾಟದ ವೇದಿಕೆಗೆ ಅರಣ್ಯವಾಸಿಗಳ ಪರ ಕಾನೂನಾತ್ಮಕ ನ್ಯಾಯ ಕೊಡಲು ಸಾಧ್ಯವಾಗದಂತಾಗಿದೆ ಎಂದು ವಿಷಾದ ವ್ಯಕ್ತ ಪಡಿಸಿದ್ದಾರೆ.

ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಬುಡಕಟ್ಟು ಉದ್ದೇಶಕ್ಕೆ 3569, ಪಾರಂಪರಿಕ ಉದ್ದೇಶಕ್ಕೆ 80,513 ಹಾಗೂ ಸಮೂಹ ಉದ್ದೇಶಕ್ಕೆ 2,991 ಅರ್ಜಿಗಳು ಸೇರಿ ಒಟ್ಟೂ ಜಿಲ್ಲೆಯಲ್ಲಿ 87,073 ಅರ್ಜಿಗಳನ್ನು ಸಲ್ಲಿಸಲಾಗಿದೆ. ಇವುಗಳಲ್ಲಿ ಶಿರಸಿ ತಾಲೂಕಿನಲ್ಲಿ ಅತೀ ಹೆಚ್ಚು 15,321 ಅರ್ಜಿಗಳು ಬಂದಿದ್ದರೆ, ಹೊನ್ನಾವರ 12,453, ಸಿದ್ದಾಪುರ 10,860, ಯಲ್ಲಾಪುರ 9,502, ಭಟ್ಕಳ 8,607, ಮುಂಡಗೋಡ 7,104, ಕುಮಟಾ 6,203, ಅಂಕೋಲಾ 5,224, ಹಳಿಯಾಳ 4,295, ಜೋಯಿಡಾ 4,061, ಕಾರವಾರ 3,443 ರಷ್ಟು ಅತಿಕ್ರಮಣದಾರರು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ದಾಖಲಿಸಿದ್ದಾರೆ. ಇವುಗಳಲ್ಲಿ ಶೇ.3.27ರಷ್ಟು ಅಂದರೆ 2,849 ಅರ್ಜಿಗಳಿಗೆ ಮಾತ್ರ ಸಾಗುವಳಿ ಹಕ್ಕು ಪತ್ರ ವಿತರಿಸಲಾಗಿದೆ. ಅಲ್ಲದೆ ಶೇ.53.65 ರಷ್ಟು ಅಂದರೆ 46,718 ಅರ್ಜಿಗಳು ತಿರಸ್ಕರಿಸಲ್ಪಟ್ಟಿವೆ ಎಂದು ರವಿಂದ್ರ ನಾಯ್ಕ ಮಾಹಿತಿ ನೀಡಿದ್ದಾರೆ.

ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕøತಗೊಂಡ ಅರಣ್ಯ ಅತಿಕ್ರಮಣದಾರರ ಪ್ರದೇಶದಿಂದ ಅತಿಕ್ರಮಣ ಮಾಡಿದವರನ್ನು ಒಕ್ಕಲೆಬ್ಬಿಸಿ ಸದ್ರಿ ಕ್ಷೇತ್ರದಲ್ಲಿ ಅರಣ್ಯೀಕೃತಗೊಳಿಸಬೇಕೆಂಬ ರಿಟ್ ಅರ್ಜಿಗೆ ಸಂಬಂಧಿಸಿ ಸವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆ ಅಂತಿಮ ಹಂತದಲ್ಲಿದ್ದು ಅಂತಿಮ ಆದೇಶ ಜುಲೈ ತಿಂಗಳ ಒಳಗೆ ಹೊರ ಬೀಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

 

Categories: ಜಿಲ್ಲಾ ಸುದ್ದಿ

Leave A Reply

Your email address will not be published.