ಹೊಸ ವರ್ಷಕ್ಕೆ ಹೆಚ್ಚಿದ ಪ್ರವಾಸಿಗರ ಸಂಖ್ಯೆ: ಮೂಲ ಸೌಕರ್ಯದ ಕೊರತೆ ಎದುರಿಸುತ್ತಿರುವ ಗೋಕರ್ಣ

 

ಗೋಕರ್ಣ: ಹೊಸವರ್ಷಾಚರಣೆಗೆ ಶನಿವಾರದಿಂದಲೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ವಸತಿಗೃಹಗಳು ಮುಂಚಿತವಾಗಿ ಭರ್ತಿಯಾಗಿದೆ. ಇನ್ನೂ ಕಳೆದ ವಾರದಿಂದ ಶೈಕ್ಷಣಿಕ ಪ್ರವಾಸಕ್ಕೆ ಬರುವ ವಿದ್ಯಾರ್ಥಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಪರೇಶ ಮೇಸ್ತ ಸಾವಿನ ನಂತರದ ಘಟನೆಯಿಂದ ಕ್ಷೀಣಿಸಿದ್ದ ಪ್ರವಾಸಿಗರ ಸಂಖ್ಯೆ ಈಗ ಹೆಚ್ಚುತ್ತಿದೆ. ಪ್ರಮುಖವಾಗಿ ಇಲ್ಲಿನ ಮಹಾಬಲೇಶ್ವರ ದೇವಾಲಯದಲ್ಲಿ ಶಾಲಾ ಮಕ್ಕಳು ಅಧಿಕ ಸಂಖ್ಯೆಯಲ್ಲಿ ದೇವರ ದರ್ಶನ ಪಡೆಯುತ್ತಿದದರೆ. ಅತ್ತ, ಓಂ ಬೀಚ್ , ಕುಟ್ಲೆ ಬೀಚಗಳಲ್ಲಿ ಯುವ ಸಮುದಾಯ , ಐ. ಬಿ.ಟಿ. ಉದ್ಯೋಗಿಗಳು ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಪ್ರವಾಸಿಗರ ಜೊತೆಗೆ ಶಾಲಾಮಕ್ಕಳಿಗೆ ವಸತಿ ಮತ್ತು ಶೌಚ, ಇಲ್ಲಿನ ವಸತಿಗೃಗಹಳು ಬಹುತೇಕ ಭರ್ತಿಯಾದ ಕಾರಣ ಹಲವರು ಬಸ್ ನಿಲ್ದಾಣ ರಸ್ತೆಯಲ್ಲಿ ಮಲಗುತ್ತಿದ್ದಾರೆ. ಇನ್ನು ಶಾಲಾ ಮಕ್ಕಳಿಗೆ ವಸತಿಗೆ ಯಾವುದೆ ಅನುಕೂಲತೆ ಇಲ್ಲವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಇರುವ ಶಾಲಾಮಕ್ಕಳಿಗೆ ವಸತಿ ನೀಡಲು ಇಲ್ಲಿಯವರು ನಿರಾಕರಿಸುತ್ತಾರೆ. ಕಡಿಮೆದರದಲ್ಲಿ ಹೆಚ್ಚಿನ ಜನರಿಗೆ ನೀಡಲು ವಸತಿಗೃಹದ ಮಾಲಿಕರು ನಿರಾಕರಿಸುತ್ತಾರೆ. ಕೆಲವೊಂದು ವಸತಿಗೃಹಗಳಲ್ಲಿ ಹೆಚ್ಚಿನ ದರ ಆಕರಣೆ ಮಾಡುತ್ತಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ಇನ್ನೂ ಬೀಚಗಳಲ್ಲಿ ರೆಸಾರ್ಟಗಳು , ವಸತಿ ಗೃಹಗಳು ಅಂಗಡಿಗಳು ಮನಬಂದಂತೆ ಬಾಡಿಗೆ ವಸೂಲಿ ಮಾಡುತ್ತಿದೆ. ಪ್ರವಾಸಿಗರು ಇಲ್ಲಿನ ಬಸ್ ನಿಲ್ದಾಣದಲ್ಲಿ ವಾಹನ ಪಾರ್ಕಿಂಗ ಮಾಡುವುದರಿಂದ ಬಸ್ ನಿಲ್ದಾಣದಲ್ಲಿರುವ ಸ್ನಾನ, ಶೌಚಾಲಯವನ್ನು ಅವಲಂಬಿಸಿದ್ದು ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಕೇವಲ ಬಸನಿಲ್ದಾಣ ಬಿಟ್ಟರೆ , ಮುಖ್ಯಕಡಲತೀರದಲ್ಲಿ ಶೌಚ, ಸ್ನಾನಗೃಹಗಳಿದ್ದು, ಇದರಿಂದ ಪ್ರವಾಸಿಗರು ಪರದಾಡಬೇಕಿದೆ. ಇನ್ನೂ ಸಂಚಾರ ದಟ್ಟನೆ ಮಾತ್ರ ತೀವ್ರವಾಗಿದ್ದು, ವಯೋವೃದ್ದ, ಪಾದಚಾರಿಗಳು ಓಡಾಡುವುದು ಕಷ್ಟವಾಗಿ ರಥಬೀದಿಯಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದು, ಇದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ತರಾತುರಿಯಲ್ಲಿ ಗಟಾರದ ಮೇಲೆ ಅತಿಕ್ರಮಿಸಿದ ಅಂಗಡಿಕಾರರನ್ನು ತೆರವುಗೊಳಿಸಿದಂತೆ ಪಾರ್ಕಿಂಗ ವ್ಯವಸ್ಥೆ ಇಲ್ಲದ ವಸತಿ ಗೃಹಗಳ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ನಾಗರಿಕರು ಆಗ್ರಹಿಸಿದ್ದಾರೆ.
ಎಲ್ಲೆಂದರಲ್ಲಿ ಬಿಸಾಡುವ ಕಸ ಕಡ್ಡಿಯಿಂದ ಇಲ್ಲಿನ ಬಸ ನಿಲ್ದಾಣ ಸಂಪೂರ್ಣ ಕಸದ ತೊಟ್ಟಿಯಾಗಿದೆ.ಇನ್ನೂ ಬೀದಿಗಳಲಲ್ಲಿ ಬಿಸಾಕುವ ಪ್ಲಾಸ್ಟಗಳು ವಿಲೇವಾರಿಯಾಗಬೇಕಾದೆ.
ಹಿಂದೆ ಹೊಸವರ್ಷಾಚರಣೆಗೆ ವಿದೇಶಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು, ಆದರೆ ಈ ವರ್ಷ ಈ ಸಂಖ್ಯೆ ಗಣನೀಯವಾಗಿ ಇಳಿದೆ. ಹೆಚ್ಚಾಗಿ ವಿದೇಶಿಗರು ಜನರ ಗದ್ದಲ ಇಲ್ಲದೆ ಪ್ರಶಾಂತ ಸ್ಥಳವನ್ನು ಬಯಸಿ ಬೀಚಗಳಲ್ಲಿ ವಸತಿ ಮಾಡುತ್ತಿದ್ದರು, ಆದರೆ ಈಗ ಬೆಂಗಳೂರು ,ಐ.ಟಿ.ಬಿ,ಟಿ. ಉದ್ಯೋಗಿಗಳು , ವಿದ್ಯಾರ್ಥಿಗಳು ಮೋಜು ಮಸ್ತಿ ಮಾಡುವುದು, ಜೊತೆಯಲ್ಲಿ ಗದ್ದಲ ಮಾಡುವುದು.ಇದರಿಂದ ಬೇಸತ್ತು ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ.
ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಕೆ.ಎಸ.ಆರ.ಪಿ.ತುಕಡಿ, ಡಿವೈಎಸಪಿ ಸೇರಿ ಮೂವರು ಪಿ.ಎಸ್.ಐಯವರನ್ನು ನಿಯೋಜಿಸಲಾಗಿದೆ. ಎಂದು ಗೋಕರ್ಣ ಪಿ.ಎಸ.ಐ.ಸಂತೋಷಕುಮಾರ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.