ಟಿ ಎಸ್.ಎಸ್ ನಲ್ಲಿ ಅರ್ಥಪೂರ್ಣವಾಗಿ ಜರುಗಿದ 64 ನೇ ಸಹಕಾರ ಸಪ್ತಾಹ.

ಶಿರಸಿ : 64 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಂದರ್ಭದಲ್ಲಿ ನಗರದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಟಿ.ಎಸ್.ಎಸ್. ” ಸಂಘದ ಹಿರಿಯ ನಿಷ್ಠಾವಂತ ಸದಸ್ಯರಿಗೆ ಸನ್ಮಾನ ” ಹಾಗೂ ” ಸುಪರ್ ಮಾರ್ಕೆಟ್ ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ ವಿತರಣಾ ” ಕಾರ್ಯಕ್ರಮ ಹಮ್ಮಿಕೊಂಡು ಅತ್ಯಂತ ಅರ್ಥಪೂರ್ಣವಾಗಿ ಸಹಕಾರ ಸಪ್ತಾಹವನ್ನು ಆಚರಿಸಿತು.

ಬುಧವಾರದಂದು ಟಿ.ಎಸ್.ಎಸ್. ವ್ಯಾಪಾರಿ ಅಂಗಳದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತು. ಸಂಘದ ಸುಮಾರು ೫೨ ಹಿರಿಯ ಸದಸ್ಯರಿಗೆ ಸಮ್ಮಾನ ಹಾಗೂ ೫ ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ ನೀಡಲಾಯಿತು.

ಸಂಘದ ಸದಸ್ಯರಾದ ಶ್ರೀಪತಿ ಭಟ್, ನಾಗಪ್ಪ ಹೆಗಡೆ, ಗಣಪತಿ ಹೆಗಡೆ, ವಾಸುದೇವ ಶಾಸ್ತ್ರಿ, ಸುಬ್ರಾಯ ಹೆಗಡೆ, ವೆಂಕಟ್ರಮಣ ಹೆಗಡೆ, ಲಕ್ಷ್ಮೀನಾರಾಯಣ ಹೆಗಡೆ, ಸೀತಾರಾಮ ಹೆಗಡೆ, ಅರವಿಂದ ರಾವ್ ದೇವ್, ಸತ್ಯನಾರಾಯಣ ಹೆಗಡೆ, ರಾಮಚಂದ್ರ ಹೆಗಡೆ, ಶಿವರಾಮ‌ ಹೆಗಡೆ, ಪರಶುರಾಮ ಗೌಡ, ಮಹಾಬ್ಲೇಶ್ವರ ಹೆಗಡೆ, ಜಗನ್ನಾಥ್ ಹೆಗಡೆ, ಗಣಪತಿ ಭಟ್, ನಾರಾಯಣ ಹೆಗಡೆ, ಅನಂತ ವೈದ್ಯ, ಪರಮೇಶ್ವರ ಹೆಗಡೆ, ಯಜ್ಞೇಶ್ವರ ಭಟ್, ಮಹಾಬ್ಲೇಶ್ವರ ಹೆಗಡೆ, ಪರಮೇಶ್ವರ ಹೆಗಡೆ, ಮಹಾಬ್ಲೇಶ್ವರ ಹೆಗಡೆ, ದತ್ತಾತ್ರೇಯ ಭಟ್, ದತ್ತಾತ್ರೇಉ ಹೆಗಡೆ, ಗಣಪತಿ ಭಟ್, ಲಕ್ಷ್ಮೀನಾರಾಯಣ ಹೆಗಡೆ, ಸುಬ್ರಾಯ ಭಟ್, ತಿರುಮಲೇಶ್ವರ ಹೆಗಡೆ, ಅಣ್ಣಪ್ಪ ಹೆಗಡೆ, ಎಸ್.ಗಜಾನನ ಶರ್ಮಾ, ಮಹಾದೇವ ಭಟ್, ತಿಮ್ಮಪ್ಪ ಹೆಗಡೆ, ಗಣಪತಿ ಭಟ್, ಗೌರಿ ಭಟ್, ನಾರಾಯಣ ಹೆಗಡೆ, ಸುಬ್ರಾಯ ಹೆಗಡೆ, ನಾರಾಯಣ ಭಟ್, ಸತ್ಯನಾರಾಯಣ ಹೆಗಡೆ, ಶಿವರಾಮ ಹೆಗಡೆ, ತಿಮ್ಮಪ್ಪ ಹೆಗಡೆ ಹಾಲ್ಕಣಿ, ತಿಮ್ಮಪ್ಪ ಹೆಗಡೆ ಬೊಳಸುತ್ತು, ಮಧುಕೇಶ್ವರ ಹೆಗಡೆ, ಗಣಪತಿ ಹೆಗಡೆ, ಮಹಾಬ್ಲೇಶ್ವರ ಹೆಗಡೆ, ಸುಬ್ರಾಯ ಹೆಗಡೆ, ಮಂಜುನಾಥ ಹೆಗಡೆ, ಮಹಾಬ್ಲೇಶ್ವರ ಹೆಗಡೆ, ಬಿ.ಡಿ.
ವಿಶ್ವಾಮಿತ್ರ, ಗಣಪತಿ ಹೆಗಡೆ, ಮಂಜುನಾಥ ಹೆಗಡೆ ಹಾಗೂ ರಾಮಚಂದ್ರ ಹೆಗಡೆ ಅವರುಗಳಿಗೆ ಸಮ್ಮಾನಿಸಿ ಗೌರವಿಸಿದರು.

ಈ ಮೊದಲು ಕಾರ್ಯಕ್ರಮವನ್ನು ಉದ್ಘಾಸಿದ ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಮಹಾಮಂಡಳ ಶಿವಮೊಗ್ಗದ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಮಾತನಾಡಿ ಸಂಸ್ಥೆಯನ್ನು ಕಟ್ಟುಬೆಳೆಸುವಲ್ಲಿ ಕೊಡುಗೆ ನೀಡಿದ ೫೦ ಕ್ಕೂ ಹೆಚ್ಚು ಸದಸ್ಯರನ್ನು ಸಮ್ಮಾನಿಸುತ್ತಿರುವುದು ಮಾದರಿ ಕಾರ್ಯಕ್ರಮವಾಗಿದೆ.

ಸಮ್ಮಾನ ಕಾರ್ಯಕ್ರಮದ ಮೊದಲು ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಟಿ.ಎಸ್.ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ ಸಂಸ್ಥೆಯ ಏಳ್ಗೆಯಲ್ಲಿ ಹಿರಿಯ ಸದಸ್ಯರ ಕೊಡುಗೆ ಮಹತ್ವದ್ದಾಗಿದೆ. ಐದಾರು ದಶಕಗಳಿಂದ ಸಂಸ್ಥೆಯಲ್ಲಿ ವ್ಯವಹಾರ ಮಾಡುತ್ತಾ ಹಲವಾರು ಹಿರಿಯರು ಸಂಘವನ್ನು ಬೆಳೆಸಿದ್ದಾರೆ. ಈ ಹಿಂದೆ ಸಂಸ್ಥೆಯ ವಿರುದ್ಧ ಸುಳ್ಳಿ ಅಪವಾದ ಹೊರೆಸಿ ಅಪಪ್ರಚಾರ ಮಾಡೊದಾಗಲೂ ಸಹ ಸಾವಿರಾರು ಸದಸ್ಯರು ಸಂಸ್ಥೆಯ ಬೆಂಬಲಕ್ಕೆ‌ ನಿಂತಿದ್ದರು. ಅಂತಹ ನಿಷ್ಠಾವಂತ ಹಿರಿಯ ಸದಸ್ಯರಿಗೆ ಇಂದು ಸಮ್ಮಾನಗಳನ್ನು ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸಂಘದ ವ್ಯವಸ್ಥಾಪಕ‌ ನಿರ್ದೇಶಕ ರವೀಶ ಹೆಗಡೆ, ನಿರ್ದೇಶಕರುಗಳಾದ ವಿನಾಯಕ ಹೆಗಡೆ, ರಾಮಕೃಷ್ಣ ಹೆಗಡೆ ಮುಂತಾದವರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.