ಕಾಡಾನೆಗಳ ದಾಳಿಗೆ ಬೆಳೆ ನಾಶ

 

ಯಲ್ಲಾಪುರ: ತಾಲೂಕಿನ ಚಿಪಗೇರಿ ಭಾಗದಲ್ಲಿ ಕಾಡಾನೆಗಳ ಗುಂಪೊಂದು ತೋಟ-ಗದ್ದೆಗಳಿಗೆ ನುಗ್ಗಿ ಬೆಳೆ ನಾಶ ಗೊಳಿಸಿವೆ.
ರೈತ ಗಣಪತಿ ಅಣ್ಣಪ್ಪ ಹೆಗಡೆ ಇವರ ಗದ್ದೆಗೆ ನುಗ್ಗಿ ಭತ್ತದ ಬೆಳೆಯನ್ನು ನಾಶ ಮಾಡಿವೆ. ತೋಟದಲ್ಲಿನ ಅಡಕೆ ಬಾಳೆಗಳನ್ನು ದ್ವಂಸಗೊಳಿಸಿವೆ. ಆನೆಗಳಿಂದಾಗಿ ಸುಮಾರು 30 ಸಾವಿರ ರೂ. ಗಳೆಂದು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಎ.ಸಿ.ಎಫ್.ಪ್ರಶಾಂತ ಹಾಗೂ ವಲಯಾರಣ್ಯಾಧಿಕಾರಿ ಶ್ರೀಧರ ತೆಗ್ಗಿನಮನಿ ಮಾರ್ಗದರ್ಶನದಲ್ಲಿ ಉಪವಲಯಾರಣ್ಯಾಧಿಕಾರಿ ಜಿ.ಆರ್. ಗಾಂವ್ಕರ್ ಹಾಗೂ ಅರಣ್ಯ ರಕ್ಷಕ ಸಂತೋಷ ಕುರುಬರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.