ಕರಾವಳಿ ಉತ್ಸವಕ್ಕೆ ಸಿದ್ದತೆ ಆರಂಭ

 

ಕಾರವಾರ:ಡಿಸೆಂಬರ್ 8 ರಿಂದ 10ರವರೆಗೆ ಕಾರವಾರದಲ್ಲಿ ನಡೆಯುವ ಕರಾವಳಿ ಉತ್ಸವನ್ನು ವ್ಯವಸ್ಥಿತವಾಗಿ ಆಯೋಜಿಸಲು ಈಗಾಗಲೇ ರಚಿಸಿರುವ ಸಮಿತಿಗಳು ತಮಗೆ ವಹಿಸಿರುವ ಕಾರ್ಯಗಳನ್ನು ಸಮಪರ್ಕವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರಾವಳಿ ಉತ್ಸವ ಪೂರ್ವಸಿದ್ದತಾ ಸಭೆಯನ್ನು ನಡೆಸಿ ಮಾತನಾಡಿದರು. ಈ ಬಾರಿ ಕರಾವಳಿ ಉತ್ಸವದಲ್ಲಿ ವೈವಿದ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನಲ್ಲದೇ ಇನ್ನಿತರ ಅರ್ಥಪೂರ್ಣ ಚಟುವಟಿಕೆಗಳನ್ನು ಆಯೋಜಿಸಬೇಕು.
ಕಳೆದ ಬಾರಿಯಂತೆ ಈ ವರ್ಷ ಕೂಡಾ ಮ್ಯಾರಾಥಾನ ಆದಿತ್ಯಾ ಬಿರ್ಲಾ ಕಂಪನಿ ಸಹಂಯೋಗದೊಂದಿಗೆ ವೃತ್ತಿಪರ ರೀತಿಯಲ್ಲಿ ವ್ಯವಸ್ಥಿತವಾಗಿ ಆಯೋಜಿಸಲಾಗುವದು. ಬೀಚ್ ವಾಲಿಬಾಲ್, ಹಗ್ಗ ಜಗ್ಗಾಟ ಕುಸ್ತಿ, ದೇಹದಾಢ್ರ್ಯ ಸ್ಪರ್ಧೇ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಬೇಕು. ಉತ್ಸವದಲ್ಲಿ ನಗರದ ಪ್ರಮುಖ ಬೀದಿಗಳಿಗೆ ಜಿಲ್ಲೆಗೆ ಸಂ¨ಂಧ ಪಟ್ಟಂತಹ ಕಲಾಕೃತಿಗಳ ದೀಪಾಲಂಕಾರ ವ್ಯವಸ್ಥೆ ಮಾಡಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.
ಫಲಪುಷ್ಪ ಪ್ರದರ್ಶನದಲ್ಲಿ ಕೇವಲ ಹೂವುಗಳನ್ನು ತಂದು ಪ್ರದರ್ಶಿಸದೇ ವಿವಿಧ ರೀತಿಯ ಆಕರ್ಷಕ ಹೂವುಗಳನ್ನು ಬೆಳೆಸಲು ಈಗಿನಿಂದಲೇ ಸಿದ್ದತೆ ನಡೆಸಬೇಕು. ಫಲ ಪುಷ್ಪ ಪ್ರದರ್ಶನಕ್ಕೆ ಸೂಕ್ತ ಸ್ಥಳವನ್ನು ನೀಡಲಾಗುವದು. ಜಿಲ್ಲೆಯ ಖಾಸಗಿ ಖಾಸಗಿ ನರ್ಸರಿಗಳ ಸಹಯೊಗದೊಂದಿಗೆ ಪ್ರದರ್ಶನ ಮತ್ತು ಮಾರಾಟ ಆಯೋಜಿಸಬೇಕು. ವಿಶೇಷ ಮತ್ತು ಅಪರೂಪದ ಹಣ್ಣುಗಳನ್ನು ಮತ್ತು ಬೊನ್ಸಾಯ್‍ಗಳನ್ನು ಪ್ರದರ್ಶನಕ್ಕೆ ಇಡುವದರೊಂದಿಗೆ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಹೇಳಿದರು.
ಕರಾವಳಿ ಉತ್ಸವ ಸಂದರ್ಭದಲ್ಲಿ ಚಿತ್ರಕಲೆ, ಶಿಲ್ಪಕಲೆ ಕಾರ್ಯಗಾರ ಆಯೋಜಿಸಲಾಗುವದು. ಕಳೆದ ಬಾರಿಯಂತೆ ಮರಳು ಶಿಲ್ಪ ಪ್ರದರ್ಶನವನ್ನು ಆಯೋಜಿಸಲಾಗುವದು. ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ರಾಷ್ಟ್ರ, ರಾಜ್ಯ ಮಟ್ಟದ ಹಾಗೂ ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸಲಾಗುವುದು. ಅಡುಗೆ ಸ್ಪರ್ಧೇ, ರಂಗೋಲಿ ಸ್ಪರ್ಧೇ ಇತರ ಸ್ಪರ್ಧೆಗಳನ್ನು ತಾಲೂಕು ಮಟ್ಟದಲ್ಲಿ ನಡೆಸಿ ನಂತರ ಜಿಲ್ಲಾ ಮಟ್ಟದ ಸ್ಪರ್ಧೇಯನ್ನು ಉತ್ಸವ ಸಂದರ್ಭದಲ್ಲಿ ನಡೆಸಬೇಕು. ಮಾಲಾದೇವಿ ಕ್ರೀಡಾಂಗಣದಲ್ಲಿ ಶ್ವಾನ ಪ್ರದರ್ಶನವನ್ನು ಏರ್ಪಡಿಸಿ ಮತ್ತು ಪೊಲೀಸ್ ಶ್ವಾನ ಬಿಟ್ಟು ಬೇರೆ ಸಾಕು ನಾಯಿಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಏರ್ಪಡಿಸಬೇಕು ಎಂದು ಹೇಳಿದರು.
ಉತ್ಸವಕ್ಕಾಗಿ ಆಗಮಿಸುವ ಕಲಾವಿದರಿಗೆ ವಸತಿ ಮತ್ತು ಆಹಾರ ವ್ಯವಸ್ಥೆಯನ್ನು ಸರಿಯಾಗಿ ಮಾಡಬೇಕು. ವಸತಿಗಾಗಿ ರೂಮ್ಸ್ ಈಗಿನಿಂದಲೇ ಬುಕ್ ಮಾಡಿಕೊಳ್ಳಿ ಮತ್ತು ಆಹಾರ ಸಮಿತಿಯವರು ಕಡ್ಡಾಯವಾಗಿ ಖುದ್ದು ಇದ್ದು ಯಾವುದೇ ಸಮಸ್ಯೆಗಳು ಉದ್ಬವಿಸದಂತೆ ನೋಡಿಕೊಳ್ಳತಕ್ಕದ್ದು, ಮೂರು ದಿನಗಳವರೆಗೆ ನಡೆಯುವ ಉತ್ಸವದಲ್ಲಿ ನೈರ್ಮಲ್ಯ ಮತ್ತು ನೀರಿನ ವ್ಯವಸ್ಥೆ ಸರಿಯಾಗಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲ್.ಚಂದ್ರಶೇಖರ ನಾಯಕ, ಅಪರ ಜಿಲ್ಲಾಧಿಕಾರಿ ಹೆಚ್. ಪ್ರಸನ್ನ, ಕಾರವಾರ ಉಪವಿಭಾಗಾಧಿಕಾರಿ ಶಿವಾನಂದ ಕರಾಳೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.