ಇಂದು ಭಕ್ತ ಸುಧನ್ವ ಯಕ್ಷಗಾನ

ಶಿರಸಿ: ಸಿದ್ದಾಪುರದ ಯಕ್ಷ ಚಂದನ ಸಂಸ್ಥೆಯಿಂದ ಸಹಕಾರಿ ಸಪ್ತಾಹದ ಅಂಗವಾಗಿ ನಗರದ ಟಿಎಸ್‍ಎಸ್ ನಲ್ಲಿ ನ.15ರ ಸಂಜೆ 6ಕ್ಕೆ ಸತೀಶ ಅಂಬಲಪಾಡಿ ನಿರ್ದೇಶನದಲ್ಲಿ ಭಕ್ತ ಸುಧನ್ವ ಯಕ್ಷಗಾನ ಪ್ರದರ್ಶನ ಏರ್ಪಾಟಾಗಿದೆ.
ಹಿಮ್ಮೇಳದಲ್ಲಿ ಭಾಗವತ ಸತೀಶ ಹೆಗಡೆ ದಂಟಕಲ್, ಮದ್ದಲೆಯಲ್ಲಿ ಶರತ್ ಜಾನಕೈ, ಚಂಡೆಯಲಿ ಸತೀಶ ಉಪಾಧ್ಯ ಪಾಲ್ಗೊಳ್ಳಲಿದ್ದು, ಸುಧನ್ವನಾಗಿ ನಿತಿನ್ ದಂಟಕಲ್, ಅರ್ಜುನನಾಗಿ ಪ್ರವೀಣ ತಟ್ಟಿಸರ, ಕೃಷ್ಣನಾಗಿ ಸಂತೋಷ ಜೋಗಿನಮನೆ, ವೃಷಕೇತುವಾಗಿ ಮೈತ್ರಿ ಸಂಪೇಸರ, ಪ್ರದ್ಯಮ್ನನಾಗಿ ಸಹನಾ ಹೆಗಡೆ ಹುಡೇಹದ್ದ, ಸುಗರ್ಬೆಯಾಗಿ ದಿವ್ಯಶ್ರೀ ಹೆಗಡೆ, ಕುವತಿಯಾಗಿ ಧನುಶ್ರೀ ಹೆಗಡೆ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆಯಲ್ಲಿ ಯಕ್ಷ ಚಂದನದ ಅಧ್ಯಕ್ಷೆ ಸುಜಾತ ಹೆಗಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.