ಅವ್ಯವಸ್ಥೆಗಳ ಆಗರವಾದ ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರ

 

ಗೋಕರ್ಣ: ಸುಮಾರು 17 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ವ್ಯಾಪ್ತಿಯ ಹೊಂದಿರುವ ಗೋಕರ್ಣದಲ್ಲಿ ಬಡವರ್ಗದವರು ಕೂಲಿಕಾರರು ಹೆಚ್ಚಾಗಿದ್ದು, ಅನಾರೋಗ್ಯ ಪೀಡಿತರಾದಲ್ಲಿ ಮತ್ತು ಯಾವುದೇ ರೀತಿಯ ರೋಗಕ್ಕೆ ಚಿಕಿತ್ಸೆ ಬೇಕಾದರೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೆ ಅವಲಂಬಿಸಿದ್ದಾರೆ. ಆದರೆ ಆರೋಗ್ಯ ಕೇಂದ್ರದಲ್ಲಿ ಸಕಲ ಸೌಲಭ್ಯ ಅಂದರೆ ಸಲಕರಣೆಗಳು ಇಲ್ಲದೆ, ದೂರ ತಾಲೂಕಾ ಕೇಂದ್ರವಾದ ಕುಮಟಾಕ್ಕೆ ತೆರಳ ಬೇಕಿದೆ. ಇನ್ನೂ ಬಹುಮುಖ್ಯವಾಗಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಹೆರಿಗೆ ಮಾಡಿಸಲು ಕನಿಷ್ಠ ಸೌಲಭ್ಯ ಇಲ್ಲಾವಾಗಿದೆ. ತುರ್ತು ಚಿಕಿತ್ಸೆ ಮಾತ್ರ ಸಿಗುತ್ತಿದ್ದು, ನಂತರ ದೂರದ ಆಸ್ಪತ್ರೆಗಳಿಗೆ ತೆರಳುವ ಪರಿಸ್ಥಿತಿ ಬಂದಿದೆ. ಇದು ಊರವರ ಪಾಡಾದರೆ, ದಿನದಿಂದದಿನಕ್ಕೆ ಹೆಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು, ಇಲ್ಲಿ ಇಕ್ಕಟ್ಟಾದ ರಸ್ತೆಗಳಲ್ಲಿ ಒಂದಿಲ್ಲೊಂದು ರಸ್ತೆ ಅಪಘಾತಗಳು ನಡೆಯುತ್ತಿವೆ ತುರ್ತು ಚಿಕಿತ್ಸೆಗೆ ಇಲ್ಲಿಗೆ ಬರಬೇಕಾಗಿದೆ, ಜೊತೆಯಲ್ಲಿ ಕಡಲತೀರದ ಮುಗಿಬಿಳುತ್ತಿರುವ ಪ್ರವಾಸಿಗರು ನೀರಿಗಿಳಿದು ಹಲವರು ಪ್ರಾಣಕಳೆದು ಕೊಂಡರೆ , ಮರಣೋತ್ತರ ಪರೀಕ್ಷೆಗೆ ಸಹ ಪರದಾಡಬೇಕಿದೆ. ಮೂಳೆಮುರಿತ , ಎದೆನೋವು ಬಂದರೆ ಎಕ್ಸರೇ ಇ.ಸಿ.ಜಿ.ಯಂತಹ ಕನಿಷ್ಠ ವ್ವಯವಸ್ಥೆಯೂ ಇಲ್ಲದೆ ರೋಗಿಗಳು ಪರದಾಡುವ ಪರಿಸ್ಥಿತಿ ಬಂದಿದೆ.ಕಣ್ಣು, ಕಿವಿ, ಮೂಳೆಗಳ ತಜ್ಞನ ವೈದ್ಯರರು ಇಲ್ಲಿ ಲಭ್ಯವಿಲ್ಲ .ಇನ್ನೂ ಪೋಲಿಸ ಠಾಣೆಯ ದಾಖಲೆ ಪ್ರಕಾರ ಕನಿಷ್ಟ 1ಆದರೂ ಮೂಳೆಮುರಿತದಂಹ ಆಪಘಾತಗಳು ನಡೆಯುತ್ತಿವೆ . ಇಲ್ಲಿಂದ ದೂರದ ತಾಲೂಕಾ ಆಸ್ಪತ್ರೆಗೆ ಕಳಿಸುತ್ತಿದ್ದು ಅಲ್ಲಿ ಸರಿ ಸ್ಪಂದನೆ ಇಲ್ಲದೆ ಖಾಸಗಿ ಆಸ್ಪತ್ರೆಗೆ ತೆರಳುತ್ತಿದ್ದು ಆರೋಗ್ಯ ಇಲಾಖೆ ಖಾಸಗಿಯವರೊಂದಿಗೆ ಒಳ ಒಪ್ಪಂದ ನಡೆದಿದೆಯೇ ಎಂಬ ಸಂದೇಹ ಮೂಡುತ್ತಿದೆ. ಹಲವು ವರ್ಷಗಳಿಂದ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸುತ್ತಲ್ಲೆ ಬಂದಿದ್ದಾರೆ ಆದರೂ ಯಾವುದೆ ಪ್ರಯೋಜನವಾಗಲಿಲ್ಲ . ಆಸ್ಪತ್ರೆ ಕಟ್ಟಡ ರಿಪೇರಿಸಹ ಮಾಡದಿರುವುದು ಸರ್ಕಾರದ ಸಾಧನೆಯಾಗಿದೆ. ಆಡಳಿತಾರೂಢ ಪಕ್ಷದ ಶಾಸಕರೇ ಪ್ರತಿನಿಧಿಸುವ ಕ್ಷೇತ್ರ ಈ ರೀತಿಯಾಗಿರುವುದು ದುರಂತವಾಗಿದೆ. ಹನ್ನೊಂದು ವರ್ಷಗಳ ಹಿಂದೆ 2006ರರಲ್ಲಿ ಇಲ್ಲಿನ ಗ್ರಾಮ ಪಂಚಾಯತ ಆಸ್ಪತ್ರೆ ಮೇಲ್ದದರ್ಜೆಗೆ ಏರಿಸುವಂತೆ ಠಾರವು ಮಾಡಿತ್ತು , ನಂತರ ಮತ್ತೊಮ್ಮೆ ಠಾರವು ಪಾಸಮಾಡಿ ಸಂಬಂದಿಸಿದ ಇಲಾಖೆಗೆ ಕಳಿಸಿತ್ತು, ಆದರೆ ಅದು ಇಂದಿನವರೆಗೂ ಕಡತದಲ್ಲಿ ಉಳಿದಿದೆ. ಇದು ಇಂದಿನ ಜನಪ್ರತಿನಿಧಿಗಳ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದೆ.ವಿಶ್ವ ವಿಖ್ಯಾತ ಪುರಾಣ ಪ್ರಸಿದ್ದ ಕ್ಷೇತ್ರದಲ್ಲಿ ಇನ್ನಾದರೂ ಸುಸಜ್ಜಿತ ಆಸ್ಪತ್ರೆ ನಿರ್ಮಿಸುತ್ತಾರೆಯೇ ಎಂಬುದು ಜನರ ಪ್ರಶ್ನೆಯಾಗಿದೆ.
ಹಳೆಕಾಲದ ಕಟ್ಟಡ:ಸುಮಾರು ಆರು ಎಕರೆ ಪ್ರದೇಶದ ಹೊಂದಿರುವ ಜಾಗದಲ್ಲಿ 5ದಶಕಗಳ ಹಿಂದೆ ಸ್ಥಳೀಯ ದಾನಿಗಳು ನೀಡಿದ ಜಾಗದಲ್ಲಿ ನಿರ್ಮಿಸಿದ ಕಟ್ಟಡ ಇಂದಿಗೂ ಹಾಗೆ ಇದ್ದು,ಈಗ ಕಟ್ಟಡ ಶಿಥಿಲಗೊಂಡಿದೆ. ಕೆಲವರ್ಷಗಳ ಹಿಂದೆ ಇಲ್ಲಿನ ಉದ್ಯಮಿ ವಾಸುದೇವ ಕಾಮತ ಕಟ್ಟಡ ಮಳೆಯಲ್ಲಿ ನೀರು ಸುರಿಯದಂತೆ ರಿಪೇರಿ ಮಾಡಿಸಿಕೊಟ್ಟಿದ್ದರು.ಆದರೆ ಇಂದು ಮತ್ತೆ ಕಟ್ಟಡ ಹಾಳಾಗಿದೆ.
ವಸತಿ ಗೃಹ : ಆಸ್ಪತ್ರೆ ಆವಾರದಲ್ಲಿ ವೈದ್ಯರಿಗೆ ಮತ್ತು ನೌಕರರಿಗೆ ವಸತಿ ಗೃಹಗಳಿದ್ದು ಸಂಪೂರ್ಣ ಹಾಳಾಗಿದ್ದು ಅದರಲ್ಲೆ ಸಿಬ್ಬಂದಿ ವಾಸುತ್ತಿದ್ದಾರೆ.ಇನ್ನೂ ಕಂಪೌಡಗೋಡೆಗಳಿ ಉರುಳಿ ಬೀಳುತ್ತಿದೆ. ಇಷ್ಟಾದರೂ ಯಾವ ಅಧಿಕಾರಿಯಾಗಲಿ ಜನಪ್ರತಿನಿಧಿಯಾಗಲಿ ತಲೆ ಎತ್ತಿ ನೋಡುತ್ತಿಲ್ಲ.
ಶವ ಪರೀಕ್ಷೆಗೋ ಪರದಾಟ: ಅನೇಕ ಪ್ರವಾಸಿಗರು ಕಡಲತೀರದಲ್ಲಿ ಅಥವಾ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದು, ಇಂತಹ ಸಂದರ್ಭದಲ್ಲಿ ಇಲ್ಲಿ ಆರೋಗ್ಯ ಕೇಂದ್ರಕ್ಕೆ ಬಂದರೆ ಶವ ಪರೀಕ್ಷೆಗೆ ಡಿ ದರ್ಜೆ ನೌಕರರಿಲ್ಲದೆ ಪೌರಕಾರ್ಮಿಕರು ಅಥವಾ ಅಂಕೋಲಾ , ಕುಮಟಾ ಆಸ್ಪತ್ರೆಗಳ ಡಿ ದರ್ಜೆ ನೌಕರರು ಬರುವವರೆಗೆ ಕಾಯಬೇಕಿದೆ.
ಸಿಬ್ಬಂದಿಗಳ ಕೊರತೆ : ರಾಜ್ಯದ ಬಹುತೇಕ ಆಸ್ಪತ್ರೆಗಳಲ್ಲಿನ ಸಮಸ್ಯೆಯಂತೆ ಇಲ್ಲೂ ಸಹ ಸಿಬ್ಬಂದಿ ಕೊರತೆ ಇದ್ದು , ಇದ್ದ ಸಿಬ್ಬಂದಿಯೇ ಹಗಲು ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸಿ ಇದ್ದಿದ್ದರಲ್ಲೇ ರೋಗಿಗಳಿಗೆ ಸ್ಪಂದಿಸುತ್ತಿದ್ದಾರೆ.ಇಲ್ಲಿನ ಕಾರ್ಯನಿರ್ವಹಿಸುತ್ತಿರುವ ವೈದ್ಯರು ದಿನದ ಯಾವುದೆ ಸಮಯದಲ್ಲಾದರು ರೋಗಿಗಳಿಗೆ ಸ್ಪಂದಿಸುತ್ತಿದ್ದು, ಇದು ಇಲ್ಲಿನ ಜನರಿಗೆ ತುಸು ಸಮಾಧಾನ ತಂದಿದೆ.
ಗಣಪತಿ ನಾಯ್ಕ ಗ್ರಾಂ. ಪಂ. ಸದಸ್ಯ ಪ್ರತಿಕ್ರಿಯಿಸಿ ಈ ಹಿಂದೆ ಸೇವೆಯಲ್ಲಿದ್ದ ಒಬ್ಬ ವೈದ್ಯಾಧಿಕಾರಗಳನ್ನು ಇಲಾಖೆ ವರ್ಗಾವಣೆಗೆ ಆದೇಶ ಮಾಡಿತ್ತು ನಮ್ಮ ಸಂಘಟನೆ ಮತ್ತು ಊರವರು ಸೇರಿ ಪ್ರತಿಭಟನೆ ಮಾಡಿ ವೈದ್ಯರನ್ನು ಉಳಿಸಿಕೊಂಡಿದ್ದೇವೆ. ಪುರಾಣ ಪ್ರಸಿದ್ದ ಪ್ರವಾಸಿ ಕ್ಷೇತ್ರದಲ್ಲಿ ಆಸ್ಪತ್ರೆಯ ಈ ಸ್ಥಿತಿ ನೋಡಿದರೆ, ಖಾಸಗಿಯವರೊಂದಿಗೆ ಆರೋಗ್ಯ ಇಲಾಖೆ ಒಳಒಪ್ಪಂದ ಮಾಡಿಕೊಂಡಿದೆಯೇ ಎಂಬ ಸಂದೇಹ ಮೂಡುತ್ತಿದೆ ಎನ್ನುತ್ತಾರೆ.

 

Categories: ಜಿಲ್ಲಾ ಸುದ್ದಿ

Leave A Reply

Your email address will not be published.