ರಾಜ್ಯದ ಜನತೆ ಸಿದ್ದರಾಮಯ್ಯನವರನ್ನು ಕಿತ್ತೆಸೆದು ಬಿಜೆಪಿ ಕೈಗೆ ಅಧಿಕಾರ ನೀಡಲಿದ್ದಾರೆ: ಬಿ.ಎಸ್.ಯಡಿಯೂರಪ್ಪ

ಭಟ್ಕಳ : ಭಾರತೀಯ ಜನತಾ ಪಾರ್ಟಿಯ ಮಹತ್ವದ ನವಭಾರತ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಯೂ ಆಗಮಿಸಿದ್ದು, ಕಾರ್ಯಕ್ರಮದ ಅಂಗವಾಗಿ ಬೃಹತ್ ಸಾರ್ವಜನಿಕ ಸಭೆಯನ್ನು ತಾಲೂಕಿನ ಶ್ರೀ ಗುರುಸುಧೀಂದ್ರ ಕಾಲೇಜು ಮೈದಾನÀದಲ್ಲಿ ನಿರ್ಮಿಸಿದ ಡಾ.ಯು.ಚಿತ್ತರಂಜನ್ ವೇದಿಕೆಯಲ್ಲಿ ಸೋಮವಾರ ರಾತ್ರಿ ನಡೆಯಿತು.
ಸಮಾವೇಶವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೀಪ ಬೆಳಗಿದುವುದರ ಮೂಲಕ ಉದ್ಘಾಟಿಸಿ ಮಾತನಾಡಿ ರಾಜ್ಯದಲ್ಲಿ ಅತ್ಯಾಚಾರಿ ಮತ್ತು ಭ್ರಷ್ಟಚಾರಿಗಳು ಕೂಡಿರುವ ನೀಚ ಸರ್ಕಾರ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಸಿದ್ದರಾಮಯ್ಯನವರನ್ನು ಕಿತ್ತೆಸೆದು ಬಿಜೆಪಿ ಕೈಗೆ ಅಧಿಕಾರ ನೀಡಲಿದ್ದಾರೆ. ಕಾಂಗ್ರೆಸ್ ಪಕ್ಷ ಸದ್ಯ ಒಡೆದ ಮನೆಯಂತಾಗಿದ್ದು ಪಕ್ಷದ ಮುಖಂಡರು ಪರಸ್ಪರ ಕಚ್ಚಾಡುತ್ತಿದ್ದಾರೆ. ಪಕ್ಷದ ಅಧ್ಯಕ್ಷರನ್ನೇ ಚುನಾವಣೆಯಲ್ಲಿ ಸೋಲಿಸುವ ಷಡ್ಯಂತ್ರ ಮಾಡಿದ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ಸಿಗರೇ ಕ್ಷಮಿಸಲ್ಲ. ಇನ್ನು ನಾವೆಲ್ಲರೂ ಒಗ್ಗಟ್ಟಾಗಿ ಭ್ರಷ್ಟ ಸಿದ್ದರಾಮಯ್ಯನವರ ಸರ್ಕಾರವನ್ನು ಕಿತ್ತೆಸೆಯುವ ಪಣವನ್ನು ತೊಡಬೇಕಾಗಿದೆ. ಭಟ್ಕಳವು ಅಂತರಾಷ್ಟ್ರೀಯ ಭಯೋತ್ಪದಾನಾ ಕೇಂದ್ರವಾಗಿದ್ದು ಮುಂಬೈಯಲ್ಲಿ ಸ್ಪೋಟಗೊಂಡ ಆರ್.ಡಿ.ಎಕ್ಸ್ ಭಟ್ಕಳದಿಂದಲೇ ರವಾನೆಯಾಗಿದೆ. ಭಟ್ಕಳದಲ್ಲಿ ನಿರಂತರವಾಗಿ ಭಯೋತ್ಪದನಾ ಚಟುವಟಿಕೆಗಳು ನಡೆಯುತ್ತಿದ್ದು, ಈ ಬಗ್ಗೆ ಇಲ್ಲಿನ ಜನತೆ ಎಚ್ಚರಿಕೆಯಿಂದಿರಬೇಕು. ಪಿ.ಎಫ್.ಐ. ಕಾರ್ಯಕರ್ತರು ಭಯೋತ್ಪಾದಕರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಎನ್.ಐ.ಎ ಹೇಳಿದ್ದು, ಇದರಿಂದಾಗಿ ಈ ಭಾಗದಲ್ಲಿ ಅಶಾಂತಿಯ ತಾಣವಾಗಿದೆ. ಸುಮಾರು 27ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿಗೆ ಅಧಿಕಾರ ನೀಡಿದರೆ ರಾಜ್ಯದ ಜನತೆ ಮುಂದಿನ ಐದು ವರ್ಷಗಳ ಕಾಲ ಸುಖವಾಗಿ ಜೀವಿಸಬಹುದು ಎಂದು ಅವರು ಹೇಳಿದರು. ಪಿಎಫ್‍ಐ ಎಸ್.ಡಿ.ಪಿಐ ತಲೆ ಎತ್ತಲು ಮುಖ್ಯ ಕಾರಣ ಸಿದ್ದರಾಮಯ್ಯನವರಾಗಿದೆ. ನಮ್ಮ ಆಡಳಿತ ಎಲ್ಲರಿಗೂ ಸಮಬಾಳು ಸಮಪಾಲು ನೀಡುತ್ತಿದೆ. ಜಾತಿಯ ಹೆಸರು ಹೇಳಿಕೊಂಡು ಜನರಲ್ಲಿ ವಿಷಬೀಜಬಿತ್ತುತ್ತಿರುವ ಸಿದ್ಧರಾಮಯ್ಯನವರನ್ನು ಅಧಿಕಾರ ಸಿಗದ ಹಾಗೆ ಮಾಡಬೇಕು ಎಂದು ಅವರು ಕೇಳಿಕೊಂಡರು. ಜಿಲ್ಲೆಯಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಆ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ನಾವು ಬಗೆಹರಿಸುತ್ತೇವೆ ಎಂದರು. ರಾಜ್ಯದಲ್ಲಿ ಕಾನೂನು ಸುವೆವಸ್ಥೆ ಹದಗೆಟ್ಟ ಹಿನ್ನೆಲೆಯಲ್ಲಿ ನಾವು ರಾಜ್ಯದಲ್ಲಿ ಪರಿವರ್ತನೆಯನ್ನು ಬಯಸಿ ಯಾತ್ರೆಯನ್ನು ಕೈಗೊಂಡಿದ್ದೇನೆ. ಈ ದೇಶವನ್ನು ಕಾಂಗ್ರೇಸ್ ಮುಕ್ತ ದೇಶವನ್ನಾಗಿ ಮಾಡಬೇಕು ಈಗಾಗೇ ಕೇಂದ್ರದಲ್ಲಿ ನಮ್ಮ ಸರ್ಕಾರವಿದೆ. ಇನ್ನೂ ಗುಜರಾತ್, ಹಿಮಚಲ ಪ್ರದೇಶವನ್ನು ನಾವು ಗೆಲ್ಲುತ್ತೇವೆ. ರಾಜ್ಯವನ್ನೂ ಕಾಂಗ್ರೇಸ್ ಮುಕ್ತಗೊಳಿಸಬೇಕಾಗಿದೆ ಎಂದ ಅವರು ರಾಜ್ಯದಲ್ಲಿ ನಮ್ಮ ಆಚಾರ, ವಿಚಾರ, ಪರಂಪರೆಗೆ ಧಕ್ಕೆ ಎರಗಿದೆ ಎಂದರು.
ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮಾತನಾಡಿ “ಸಭ್ಯೆತೆಯ ಗೆರೆಯನ್ನು ಈಗಿನ ರಾಜ್ಯ ಸರಕಾರ ದಾಟಿದ್ದು, ಜನರಿಂದಲೇ ಭಂಡ ಸರಕಾರವೆಂಬ ಶಾಪ ಪಡೆದುಕೊಂಡಿದೆ. ಕಳೆದ ನಾಲ್ಕೂವರೆ ವರ್ಷದಿಂದ ರಾಜ್ಯವನ್ನು ಕಾಂಗ್ರೆಸ್ ಸರಕಾರ ಸಂಪೂರ್ಣ ಲೂಟಿ ಮಾಡಿದೆ ಬಿಟ್ಟರೆ ಯಾವುದೇ ಜನ ಪರ ಕಾರ್ಯಸಾಧನೆ ಮಾಡಿಲ್ಲ. ಎಲ್ಲವೂ ಶೂನ್ಯ ಕಾರ್ಯವನ್ನು ಮಾಡಿ ಜನರ ಮುಂದೆ ಪೋಸ್ ಸಿದ್ದರಾಮಯ್ಯ ಪೋಸ್ ಕೊಡುತ್ತಿದ್ದಾರೆ. ಅದರಲ್ಲೂ ಕೆಲವು ಭಾಗ್ಯಗಳ ಪೈಕಿ ರಾಜ್ಯ ಸರಕಾರ ಲೂಟಿ ಭಾಗ್ಯ, ಕೊಳ್ಳೆ ಭಾಗ್ಯ, ಅಕ್ಕಿ ಭಾಗ್ಯ, ಅಕ್ಕಿಯಲ್ಲಿ ಹುಳಿವಿನ ಭಾಗ್ಯ, ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ, ಹಿಂದೂಗಳಿಗೆ ಸಾವಿನ ಭಾಗ್ಯಗಳನ್ನು ಮಾತ್ರ ರಾಜ್ಯ ಸರಕಾರದ ಸಾಧನೆಯಾಗಿದೆ. ಈ ರೀತೀಯ ರಾವಣ ರಾಜ್ಯದಲ್ಲಿ ಜನರು ಬದುಕುತ್ತಿದ್ದು, ಇದು ಕೊನೆಯಾಗಿ ರಾಮ ರಾಜ್ಯ ಬರಬೇಕು. ಈ ನಿಟ್ಟಿನಲ್ಲಿ ರಾಜ್ಯದ ಮೂಲೆ ಮೂಲೆಗಳಿಗೆ ಪರಿವರ್ತನಾ ಯಾತ್ರೆ ಸಾಗುತ್ತಿದೆ. ಪರಿವರ್ತನೆ ಕೇವಲ ರಾಜಕೀಯಕೋಸ್ಕರವಲ್ಲ ಅದು ಮುಖ್ಯವಾಗಿ ವ್ಯವಸ್ಥೆಯ ಬದಲಾವಣೆಗೋಸ್ಕರ ಬರಬೇಕಾಗಿದೆ. ಹಾಗೂ ರಾಜ್ಯದಲ್ಲಿ ನಡೆಯುತಿರುವ ದುರಾಚಾರದವನ್ನು ಕಿತ್ತೆಸೆಯಲು ಬರಬೇಕಾಗಿದೆ. ಜಾತಿ ವಿಷ ಬೀಜ ಬಿತ್ತಿ ಸಮಾಜವನ್ನು ಒಡೆಯುತ್ತಿರುವ ದುಷ್ಟರನ್ನು ಸಂಹರಿಸಲು ಪರಿವರ್ತನೆಯ ಅಗತ್ಯತೆ ಬೇಕಾಗಿದೆ. ಹೊಸ ವಿಶ್ವಾಸದೊಂದಿಗೆ, ಹೊಸ ನಿರೀಕ್ಷೆಯೊಂದಿಗೆ ಹೊಸ ಉತ್ಸಾಹದೊಂದಿಗೆ ಬಿಜೆಪಿಯನ್ನು ಬೆಂಬಲಿಸಿ ಗೆಲ್ಲಿಸಿ ಸುಭ್ರದ ಸರಕಾರ ನೀಡುವಲ್ಲಿ ಸಹಕಾರಿಯಾಗಬೇಕೆಂದು ಕರೆ ನೀಡಿದರು.

ಸಮಾವೇಶದಲ್ಲಿ ಶಿರಸಿ ಕ್ಷೇತ್ರ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ, ಸಂಸದ ಶ್ರೀರಾಮುಲು ಮಾತನಾಡಿದರು.
ವೇದಿಕೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಸಚಿವ ಹರತಾಳ ಹಾಲಪ್ಪ, ತೇಜಸ್ವೀನಿ ರಮೇಶ, ಕೋಟಾ ಶ್ರೀನಿವಾಸ ಪುಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ, ಜೆ.ಡಿ.ನಾಯ್ಕ, ಸುನೀಲ್ ನಾಯ್ಕ, ಗೋವಿಂದ ನಾಯ್ಕ, ಈಶ್ವರ್ ನಾಯ್ಕ, ಭಾರತಿ ಶೆಟ್ಟಿ, ವಿಕ್ರಮಾರ್ಜುನ ಹೆಗಡೆ, ಮುಂತಾದವರು ಉಪಸ್ಥಿತರಿದ್ದರು. ಸಮಾವೇಶದಲ್ಲಿ 5 ಸಾವಿರಕ್ಕೂ ಅಧಿಕ ಕಾರ್ಯಕರ್ತರು, ಸಾರ್ವಜನಿಕರು ಜಮಾಯಿಸಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.