ಕುತುಬ್ ಮಿನಾರ್-ತಾಜ್ ಮಹಲ್ ಹಿಂದೂ ದೇವಾಲಯ; ಸಚಿವ ಅನಂತಕುಮಾರ ಹೆಗಡೆ

ಶಿರಸಿ: ಕುತುಬ್ ಮಿನಾರ್ 27 ನಕ್ಷತ್ರಗಳನ್ನು ಒಳಗೊಂಡ ಹಿಂದೂ ಹಾಗೂ ಜೈನ ದೇವಾಲಯವಾಗಿದೆ. ಇದನ್ನು ಕುತುಬ್ಧಿನ್ ಐ ಬಕ್ ನಿರ್ಮಾಣ ಮಾಡಿಲ್ಲ. ಅದರಂತೇ ತಾಜ್ ಮಹಲ್ ಸಹ ಶಿವನ ದೇವಸ್ಥಾನವಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು. ನಗರದ ವಿಕಾಸ ಆಶ್ರಮ ಮೈದಾನದಲ್ಲಿ ಮಂಗಳವಾರ ನಡೆದ ಪರಿವರ್ತನಾ ಯಾತ್ರೆಯ ಸಭೆಯಲ್ಲಿ ಮಾತನಾಡಿದ ಅವರು, ಕುತುಬ್ ಮೀನಾರ್ ಹಿಂದೂ ಹಾಗು ಜೈನ ದೇವಾಲಯವೆಂದು ಪ್ರಾಚ್ಯವಸ್ತು ಇಲಾಖೆಯವರೆ ಹೇಳಿದ್ದಾರೆ. ತಾಜ್ ಮಹಲ್ ಮಹಾದೇವನ ಆಸ್ಥಾನವಾಗಿತ್ತು ಎಂದು ಹೇಳಿ, ಟಿಪ್ಪುವು ಒಬ್ಬ ಇಲಿ. ಅವನ ಬಾಲವನ್ನು ಹಿಡಿದುಕೊಂಡು ಓಡಾಡುವುದು ಮುಖ್ಯಮಂತ್ರಿ. ಇಂದು ಅವನ ಜಯಂತಿಯನ್ನು ಆಚರಿಸುವ ಸರ್ಕಾರವನ್ನು ಬದಲಿಸದಿದ್ದರೆ ಮುಂದೆ ಒಸಮಾ ಬಿನ್ ಲಾಡೆನ್, ಕಸಬ್ , ಹೈದರಾಲಿಯ ಜಯಂತಿಯನ್ನೂ ಸಹ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದು ಕಾಂಗ್ರೆಸ್ ಪಕ್ಷವನ್ನು ಇತಿಹಾಸಕ್ಕೆ ಸೇರಿಸುವ ಸರಿಯಾದ ಸಂದರ್ಭವಾಗಿದೆ. ಇಲ್ಲಿನ ಕಾಂಗ್ರೆಸ್ ಹೇಗಿದೆಯೆಂದರೆ ಅತ್ಯಾಚಾರಿ ಉಸ್ತುವಾರಿ ಲೂಟಿಕೋರ ಮುಖ್ಯಮಂತ್ರಿ ಎನ್ನುವ ರೀತಿಯಲ್ಲಿದೆ. ಇಲ್ಲಿ ಯಜಮಾನ ಬ್ರಹ್ಮ ರಾಕ್ಷಸ ಉಳಿದವು ದೆವ್ವ ಭೂತಗಳಾಗಿದೆ. ಆದ್ದರಿಂದ ಕರ್ನಾಟಕದಲ್ಲಿ ಸಮರ್ಥ ಆಡಳಿತ ನೀಡಬೇಕು. ಅದಕ್ಕಾಗಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಉತ್ತರ ಕನ್ನಡದಲ್ಲಿ ಈ ಬಾರಿ ಹೊಸ ಇತಿಹಾಸವನ್ನು ರಚನೆ ಆಗುತ್ತದೆ. 6 ಕ್ಕೆ 6 ಕ್ಷೇತ್ರವನ್ನು ಬಿಜೆಪಿ ಗೆಲ್ಲುತ್ತದೆ. ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಕಾಂಗ್ರೆಸ್ ಮುಕ್ತ ಭಾರತ ಆಗಲು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಆಡಳಿತದಿಂದ ತೊಲಗಿಸಬೇಕು. ಇಲ್ಲಿ ಬೂತ್ ಗಳನ್ನು ಬಲಪಡಿಸಿ ಇಲ್ಲಿ ಗೆದ್ದು ಪ್ರಧಾನಿ ನರೇಂದ್ರ ಮೋದಿಯವರ ಕೈಯನ್ನು ಬಲಪಡಿಸೋಣ ಎಂದರು. ಗ್ರಾಮೀಣ ರಸ್ತೆಗಳ ಪರಿಸ್ಥಿತಿ ಹದಗೆಟ್ಟಿದೆ, ಬಡವರ ಮನೆಗಳಿಗೆ ಆರ್.ಟಿ.ಸಿ ಸಿಗುತ್ತಿಲ್ಲ. ಅತಿಕ್ರಮಣದಾರರ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಇದೆಲ್ಲವನ್ನೂ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಸರಿಪಡಿಸುತ್ತೇವೆ. ನಮ್ಮ ಆಡಳಿತ ಅವಧಿಯಲ್ಲಿ ತಂದ ಭಾಗಲಕ್ಷೀ ಯೋಜನೆ, ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಹೀಗೆ ಎಲ್ಲವೂ ಸಹ ಇಂದು ಹಳ್ಳ ಹಿಡಿದಿದೆ. ಇದೆಲ್ಲವೂ ಕಾಂಗ್ರೆಸ್ ನ ಭ್ರಷ್ಟ ಆಡಳಿತದಿಂದಾಗಿದ್ದು ಈ ಬಾರಿ ಚುನಾವಣೆಯಲ್ಲಿ ಪಕ್ಷ ಹಳ್ಳಹಿಡಿಯಲಿದೆ ಎಂದರು. ಈ ಸಂದರ್ಭದಲ್ಲಿ ಶಿರಸಿ ಸಿದ್ದಾಪುರ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯ ಮುಖಂಡರಾದ ಭಾರತಿ ಶೆಟ್ಟಿ, ರವಿಕುಮಾರ , ಕುಮಾರ ಬಂಗಾರಪ್ಪ ವಿ.ಎಸ್.ಪಾಟೀಲ್, ಹರ್ತಾಳ ಹಾಲಪ್ಪ, ಸುಮನಾ ಕಾಮತ್, ಎಲ್.ಟಿ.ಪಾಟೀಲ್ ಮುಂತಾದವರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.