ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು: ಭೀಮಣ್ಣ ನಾಯ್ಕ್

.
ಶಿರಸಿ: ಕಳೆದ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಏಳನೆ ಸ್ಥಾನ ಪಡೆದ ಆದರ್ಶ ಹೆಗಡೆ ಹೊಸಳ್ಳಿ ಇವರನ್ನು ತಾಲೂಕಿನ ಗೊಣ್ಸರ ಶಾಲಾ ಆವರಣದಲ್ಲಿ ಈಚೆಗೆ ಶಾಲಾ ಆಡಳಿತ ಮಂಡಳಿ ಸೇರಿದಂತೆ ನಾನಾ ಸಂಘಟನೆಗಳ ಸಯುಕ್ತಾಶ್ರಯದಲ್ಲಿ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ಜಿಲ್ಲಾದ್ಯಕ್ಷ ಭೀಮಣ್ಣ ನಾಯ್ಕ್, ತಾಲೂಕಿನಲ್ಲಿ ಹಿಂದುಳಿದ ಸಾಕಷ್ಟು ಗ್ರಾಮಗಳಲ್ಲಿ ಪ್ರತಿಭಾನ್ವಿ ವಿದ್ಯಾರ್ಥಿಗಳು ಮೂಲಭೂತ ಸಮಸ್ಯೆಗಳ ನಡುವೆಯೂ ಸಾಧನೆಗೈಯ್ಯುವ ಮೂಲಕ ತಾಲೂಕಿಗೆ ಹೆಚ್ಚಿನ ಗೌರವ ಸ್ಥಾನಮಾನಗಳು ಲಭ್ಯವಾಗುವಂತೆ ಮಾಡುತ್ತಿದ್ದಾರೆ. ಶಿರಸಿ ಶೈಕ್ಷಣಿಕ ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು. ಇದರಿಂದ ಇತರ ವಿದ್ಯಾರ್ಥಿಗಳ ಮನೋಭಾವನೆಯನ್ನು ಬದಲಾಯಿಸಲು ಸಾಧ್ಯವಾಗುತ್ತದೆ ಎಂದರು.
ವಿಧಾನ ಫರಿಷತ್ ಸದಸ್ಯ ಶ್ರೀಕಾಂತ್ ಘೋಟ್ನೆಕರ್ ಮಾತನಾಡಿ, ತಾಲೂಕಿನ ಹಿಂದುಳಿದ ಹಾಗೂ ಮೂಲಭೂತ ಸೌಕರ್ಯಗಳಿಲ್ಲದ ಗ್ರಾಮಗಳೆಂದು ಕರೆಯಲ್ಪಡುವ, ವಾನಳ್ಳಿ ಸುತ್ತಮುತ್ತಲ ಪ್ರದೇಶಗಳಿಂದ ದೂರದ ಶಾಲೆಗೆ ನಡೆದುಕೊಂಡು ತೆರಳಿ ಶೈಕ್ಷಣಿಕ ರಂಗದಲ್ಲಿ ರಾಜ್ಯದ ಗಮನ ಸೆಳೆದಿರುವ ಆರ್ದಶ ಹೆಗಡೆ ಕಾರ್ಯ ಅಭಿನಂದನಾರ್ಹವಾಗಿದೆ. ಇಂತಹ ವಿದ್ಯಾರ್ಥಿಗಳಿಗೆ ಕೆ.ಡಿ.ಸಿ.ಸಿ ಬ್ಯಾಂಕ್ ವತಿಯಿಂದ ಪ್ರೋತ್ಸಾಹ ಧನದೊಂದಿಗೆ ಹೆಚ್ಚಿನ ಸಹಕಾರಗಳನ್ನು ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ವೇದಿಕೆಯಲ್ಲಿ ಜಿಪಂ ಅಧ್ಯಕ್ಷೆ ಜಯಶ್ರಿ ಮೊಗೇರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ದುಭಾಷಿ, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ಕೆ.ಪಿ.ಟಿ.ಸಿ.ಎಲ್ ನಿರ್ದೇಶಕ ದೀಪಕ ದೊಡ್ಡೂರು, ಜಿಪಂ ಸದಸ್ಯ ಜಿ.ಎನ್ ಹೆಗಡೆ ಮುರೇಗಾರ್, ಎಸ್.ಕೆ ಭಾಗವತ್, ಸ್ಥಳಿಯರಾದ ಮೋಹನ ಭಟ್ಟ ಗಜನಮನೆ ಸೇರಿದಂತೆ ಶಾಲಾ ಆಡಳಿತ ಮಂಡಳಿ ಪ್ರಮುಖರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.