ಪುರಸಭೆಯ ಕಟ್ಟಡದೊಳಗೆ ಹೋಮ

 

ಭಟ್ಕಳ: ಶನಿವಾರದಂದು ಬೆಳಿಗ್ಗೆ ಭಟ್ಕಳ ಪುರಸಭೆಯ ಕಟ್ಟಡದೊಳಗಿನ ಅಂಗಡಿಕಾರರು, ಪುರಸಭೆಗೆ ಕೆಲಸ ಮಾಡುವ ಗುತ್ತಿಗೆದಾರರ ವ್ಯವಹಾರದಲ್ಲಿ ನಷ್ಟ ಸಂಭವಿಸಿದ್ದ ಕಾರಣ ಪುರಸಭೆ ಕೆಳಂತಸ್ತಿನÀಲ್ಲಿ ಬೆಳಿಗ್ಗೆ ಹೋಮ ಹವನಾದಿಗಳನ್ನು ನಡೆಸುವ ಮೂಲಕ ಮತ್ತೆ ಸುದ್ದಿಗೆ ಬಂದಿದೆ. ಈ ಹೋಮ ಹವನಾದಿ ನಡೆದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಭಿನ್ನ ಅಭಿಪ್ರಾಯಗಳು ಕೇಳಿ ಬರುತ್ತಿವೆ.
ಕಳೆದ ಸಪ್ಟೆಂಬರ್ 14 ರಂದು ಭಟ್ಕಳ ಪುರಸಭೆಯ ತೆರವು ಕಾರ್ಯಚರಣೆ ವೇಳೆ ಓರ್ವ ಪುರಸಭಾ ಅಂಗಡಿಕಾರ ರಾಮಚಂದ್ರ ನಾಯ್ಕ ಅಂಗಡಿ ಕೈತಪ್ಪಿಹೋಗಲಿದೆ ಎಂಬ ಭಯದಲ್ಲಿ ಪುರಸಭೆ ಒಳಗೆ ಆಡಳಿತ ಕಛೇರಿ ಎದುರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ದೊಡ್ಡ ಸುದ್ದಿಯಾಗುವುದರೊಂದಿಗೆ ಇನ್ನು ಮರೆತುಹೋಗುವ ಹಂತದ ಜೊತೆಗೆ ಅಂಗಡಿಕಾರರಿಗೆ ಯಾವುದೇ ಪರಿಹಾರ ಸಿಗುವದರೊಳಗಾಗಿ ಶನಿವಾರದಂದು ಬೆಳ್ಳಂಬೆಳಗ್ಗೆ ಪುರಸಭೆಯ ನೆಲಮಾಳಿಗೆಯಲ್ಲಿ ಹೋಮಹವನ ನಡೆಯುತ್ತಿತ್ತು. ಒಂದು ಕ್ಷಣಕ್ಕೆ ಸಾರ್ವಜನಿಕ ವಲಯದಲಲಿ ಪುರಸಭೆಗೆ ಮೃತ ಪುರಸಭಾ ಅಂಗಡಿಕಾರ ರಾಮಚಂದ್ರನ ಭೂತದ ಕಾಟ ಶುರುವಾಗಿರಬೇಕು. ಅದಕ್ಕಾಗಿ ಹೋಮಹವನದ ಮೊರೆ ಹೊದ ಅಧಿಕಾರಿಗಳು ಎಂಬ ಮಾತುಗಳು ಕೇಳಿ ಬಂದವು. ಇನ್ನು ಪುರಸಭೆ ಅಂಗಡಿಕಾರರಿಗೆ ನ್ಯಾಯ ದೊರಕಿಸಿ ಕೊಟ್ಟಿದ್ದರೆ ಇವೆಲ್ಲಾ ಸಮಸ್ಯೆ ಆಗುತ್ತಿತ್ತಾ ಎಂದು ಪುರಸಭೆಯಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಮೃತನಾದ ರಾಮಚಂದ್ರನ ಸಹೋದರ ಈಶ್ವರ ನಾಯ್ಕ ಪುರಸಭೆ ಅಧಿಕಾರಿಗಳ ವಿರುದ್ದ ಕೆಂಡಮಂಡಲವಾದರು. ವೈಯಕ್ತಿಕ ಹಾಗೂ ಅವರ ಕಾರ್ಯದಲ್ಲಿ ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳು ಹೋಮ ನಡೆಸುತ್ತಿದ್ದಾರೆ. ಆದರೆ ಇದೇ ಆವರಣದಲ್ಲಿ ಸೆಪ್ಟೆಂಬರ್ 14ರಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ನನ್ನ ಸಹೋದರ ಸಾವಿನ ಆಸೆಯನ್ನು ಈಡೇರಿಸುವ ಅಥವಾ ಅದನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಗಮನ ಹರಿಸದ ಪುರಸಭೆಯ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ಶನಿವಾರದಂದು ಪುರಸಭೆಯಲ್ಲಿ ನಡೆಯುತ್ತಿದ್ದ ಹೋಮ ಹವನಾದಿಯ ಬಗ್ಗೆ ತಿಳಿದು ಸ್ಥಳಕ್ಕೆ ಬಂದ ಮೃತ ರಾಮಚಂದ್ರ ನಾಯ್ಕ ಸಹೋದರರು ಹೋಮ ಯಾವ ಹಿನ್ನೆಲೆಯಲ್ಲಿ ನಡೆಯುತ್ತಿದೆಂಬುದರ ಬಗ್ಗೆ ಕೇಳಿದ್ದಾರೆ. ಅದಕ್ಕೆ ಪುರಸಭೆಯ ಕಟ್ಟಡದೊಳಗಿನ ಅಂಗಡಿಕಾರರು ಹಾಗೂ ಗುತ್ತಿಗೆದಾರರು ಹಲವು ವರ್ಷಗಳಿಂದ ಹೋಮ ಮಾಡಿಸಬೇಕೆಂಬ ಆಶಯ ಇಂದು ಮಾಡುತ್ತಿದ್ದೇವೆ ಎಂದ ಅವರು ಮೃತ ರಾಮಚಂದ್ರ ಸಹೋದರರಿಗೆ ಹೋಮ ನಡೆಯುತ್ತಿರುವ ಬಗ್ಗೆ ಮಾಹಿತಿ ತಿಳಿಸಿದರು.
ಈ ಬಗ್ಗೆ ಮಾಧ್ಯಮದವರೊಂದಿಗೆ ಮೃತ ರಾಮಚಂದ್ರ ನಾಯ್ಕ ಸಹೋದರ ಈಶ್ವರ ನಾಯ್ಕ ಮಾತನಾಡಿದ್ದು “ಸಹೋದರ ಮೃತನಾದ ಬಳಿಕ ಜಿಲ್ಲಾಧಿಕಾರಿಗಳು ಮನೆಗೆ ಬಂದು ಘಟನೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಹಾಗೂ ಕುಟುಂಬಕ್ಕೆ ಪರಿಹಾರ ನೀಡುತ್ತೇನೆ ಮತ್ತು ಘಟನೆಗೆ ಸಂಬಂಧಪಟ್ಟಂತೆ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತೇವೆಂದು ಹೇಳಿ ತೆರಳಿದ್ದರು. ಆದರೆ ನನ್ನ ಸಹೋದರ ಸಾವನ್ನಪ್ಪಿ ಇವತ್ತಿಗೆ
54 ದಿನಗಳು ಕಳೆದಿದ್ದು, ಭರವಸೆಯ ಪರಿಹಾರ ಇನ್ನು ತನಕ ಕುಟುಂಬಕ್ಕೆ ಬಂದಿಲ್ಲ. ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಏಕಾಏಕಿ ಪುರಸಭೆ ಅಧಿಕಾರಿಗಳಲ್ಲಿ ಭಯವಾಗುತ್ತಿದ್ದು, ಸÀಮಸ್ಯೆಯಿಂದ ತಪ್ಪಿಸಿಕೊಳ್ಳಲು ಹೋಮ ಹವನ ಮಾಡಿಸುತ್ತಿದ್ದಾರೆ. ಹೋಮ ಹವನಕ್ಕೆ ತಮ್ಮ ಅಭ್ಯಂತರವಿಲ.್ಲ ಆದರೆ ಮೃತನ ಆತ್ಮಕ್ಕೆ ಶಾಂತಿ ದೊರೆಯುವ ಆತನ ಕೊನೆ ಆಸೆಯನ್ನು ಈಡೇರಿಸಲಿ. ಬಳಿಕ ಹೋಮ, ಪೂಜೆಗಳನ್ನು ನಡೆಸಲಿ.” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದರೆ ಪುರಸಭೆಯಲ್ಲಿ ಕೆಲವು ವರ್ಷಗಳಿಂದ ಯಾವುದೇ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ. ಪುರಸಭೆಯ ಕಟ್ಟಡದೊಳಗಿನ ಬಾಡಿಗೆಗೆ ಪಡೆದ ಅಂಗಡಿಕಾರರಿಗೆ ಸರಿಯಾದ ವ್ಯವಹಾರ ಆಗುತ್ತಿಲ್ಲ. ಈ ಹಿಂದೆ ನಿರ್ಮಾಣವಾದ ಪುರಸಭೆಯ ಕಟ್ಟಡದ ಸಂಧರ್ಭದಲ್ಲಿ ಸ್ಥಳದಲ್ಲಿ ನಾಗರಹಾವಿನ ನಡೆಗೆ ತೊಂದರೆ ಆಗಿದೆ. ಈ ಕಾರಣಕ್ಕಾಗಿ ಕಟ್ಟಡದಲ್ಲಿರುವ ಬಾಡಿಗೆ ಅಂಗಡಿ ಮಳಿಗೆದಾರರು ಸಂಕಟದಲ್ಲಿ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಈ ಕುರಿತು ಸರ್ಪ ಸಂಸ್ಕಾರ ಮಾಡಿಸಬೇಕೆಂಬ ಹರಕೆಯನ್ನು ಶನಿವಾರದಂದು ನಡೆಸಲಾಗಿದೆ. ಮುಂದಿನ 3 ದಿನಗಳು ಇಲ್ಲಿ ಸರ್ಪ ಸಂಸ್ಕಾರ ನಡೆಯುತ್ತಿದೆ ಬಿಟ್ಟರೆ ಇನ್ಯಾವುದೇ ತರಹದ ಹೋಮಹವನಗಳು ನಡೆಯುತ್ತಿಲ್ಲ. ಇದನ್ನು ಅಂಗಡಿಕಾರರೆ ಒಟ್ಟಾಗಿ ನಿರ್ವಹಿಸುತ್ತಿದ್ದು, ಮೊದಲ ದಿನದ ಪೂಜೆಯ ನಿಮಿತ್ತ ಅಧಿಕಾರಿಗಳಿಗೂ ಆಹ್ವಾನ ನೀಡಿದ್ದೇವು ಎಂದು ಪೂಜೆಯಲ್ಲಿ ಭಾಗವಹಿಸಿದ ಅಂಗಡಿಕಾರರು, ಗುತ್ತಿಗೆದಾರರು ಮಾಧ್ಯಮಕ್ಕೆ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಗುತ್ತಿಗೆದಾರರ ಹಾಗೂ ಕಟ್ಟಡದಲ್ಲಿರುವ ಬಾಡಿಗೆ ಅಂಗಡಿಕಾರರು ಏರ್ಪಡಿಸಿದ ಹೋಮ ಪೂಜೆಯಲ್ಲಿ ಭಾಗವಹಿಸಿದ ಪ್ರಭಾರೆ ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ ನಾವುಡ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು “ಕಳೆದ ಹಲವು ವರ್ಷಗಳಿಂದ ಪುರಸಭೆಯ ಕಟ್ಟಡದೊಳಗಿನ ಅಂಗಡಿಕಾರು ಗುತ್ತಿಗೆದಾರರ ವ್ಯವಹಾರದಲ್ಲಿ ನಷ್ಟವನ್ನು ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ ಹೋಮವನ್ನು ಮಾಡಲಾಗುತ್ತಿದೆ. ಇದು ಸುಮಾರು 4-5 ವರ್ಷಗಳ ಹಿಂದೆ ನಡೆಸಬೇಕಾಗಿದ್ದು, ಕೆಲವೊಂದು ಕಾರಣಾಂತರಗಳಿಂದ ಸಾಧ್ಯವಾಗಿಲ್ಲವಾಗಿತ್ತು. ಆದರೆ ಇತ್ತೀಚಿಗೆ ಪುರಸಭೆಯ ಕಟ್ಟಡದೊಳಗಿನ ಅಂಗಡಿಕಾರರಿಗೆ ನಷ್ಟದ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಅಂಗಡಿಕಾರರೆಲ್ಲ ಸೇರಿ ಸರ್ಪ ಸಂಸ್ಕಾರವನ್ನು ನಡೆಸುತ್ತಿದ್ದಾರೆ. ಕಛೇರಿಯ ಸಮಯದಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗಬಾದರೆಂಬ ಉದ್ದೇಶದಿಂದ ಕಛೇರಿಗೆ ರಜೆಯಿದ್ದ ಸಂಧರ್ಭದಲ್ಲಿ ಹೋಮವನ್ನು ಮಾಡಿಸಿದ್ದಾರೆ. ಇದರಲ್ಲಿ ಯಾವುದೇ ಸರ್ಕಾರಿ ಕೆಲಸದ ವಿಚಾರಕ್ಕೆ ಸಂಬಂಧಪಟ್ಟಿಲ್ಲ.” ಎಂದು ಹೇಳಿದರು.
ಒಟ್ಟಿನಲ್ಲಿ ಅವರವರ ನಂಬಿಕೆಯಡಿಯಲ್ಲಿ ಕಾರ್ಯಗಳು ನಡೆದಿದ್ದು, ಆದರೆ ಸಾರ್ವಜನಿಕ ವಲಯದಲ್ಲಿ ಬೇರೆಯದ್ದೇ ಬಿಂಬಿತವಾಗಿದೆ. ಮೃತ ರಾಮಚಂದ್ರ ನಾಯ್ಕ ಸಾವನ್ನಪ್ಪಿ 54 ದಿನ ಕಳೆದಿದ್ದು, ಏನಾದರು ಭೂತದ ಕಾಟವಿದೆಯಾ ಎಂದು ಜನರಲ್ಲಿ ಮಾತು ಗುನುತ್ತಿದೆ. ಈ ಹೋಮಕ್ಕು ಮೃತ ರಾಮಚಂದ್ರ ನಾಯ್ಕ ಸಾವಿಗೂ ಸಂಬಂಧವಿಲ್ಲದಿಲ್ಲರೂ ಕುಟುಂದ ಜನರಲ್ಲಿ ಬೇರೆಯದ್ದೇ ಭಾವನೆ ಹುಟ್ಟಿದಂತು ಸತ್ಯವಲ್ಲ. ಆದಷ್ಟು ಬೇಗ ಜಿಲ್ಲಾಧಿಕಾರಿಗಳು ಮೃತ ರಾಮಚಂದ್ರ ಕುಟುಂಬಕ್ಕೆ ನೀಡಿದ ಪರಿಹಾರ ಸಿಗಲಿ ಎನ್ನುವುದು ನಮ್ಮ ಆಶಯವಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.