ನಾಳೆ ನಗರದಲ್ಲಿ ಪರಿವರ್ತನಾ ರ್ಯಾಲಿ : ನಡೆದಿದೆ ಭರದ ಸಿದ್ಧತೆ 

 

ಶಿರಸಿ : ರಾಜ್ಯದಾದ್ಯಂತ ನಡೆಯುತ್ತಿರುವ ಬಿಜೆಪಿ ಪರಿವರ್ತಮಾ ರ್ಯಾಲಿ ನ.14 ರಂದು ನಗರಕ್ಕೆ ಆಗಮಿಸಲಿದ್ದು, ಇಲ್ಲಿಯ ವಿಕಾಸ ಆಶ್ರಯ ಮೈದಾನದಲ್ಲಿ ರಾಜ್ಯ ಪ್ರಮುಖ ನಾಯಕರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಬಿಜೆಪಿ ಮಾಧ್ಯಮ ಪ್ರಮುಖ ನಂದನ್ ಸಾಗರ್ ಮಾಹಿತಿ ನೀಡಿದರು.
ಪೂರ್ವ ಸಿದ್ಧತೆ ಕುರಿತು ವಿಕಾಶ ಆಶ್ರಮ ಮೈದಾನದಲ್ಲಿ ಸೋಮವಾರ ಪತ್ರಕರ್ತರಿಗೆ ಹೆಚ್ಚಿನ ಮಾಹಿತಿ ನೀಡಿದ ಅವರು, ಶಿರಸಿ ನಗರದ 57, ಗ್ರಾಮೀಣ ಭಾಗದ 91 ಹಾಗೂ ಸಿದ್ದಾಪುರ ತಾಲೂಕಿನ 117 ಬೂತ್ ಗಳಲ್ಲಿ ಈಗಾಗಲೇ ಶಾಸಕರು ಸೇರಿದಂತೆ ಹಲವಾರು ಮುಖಂಡರು ಸಭೆ ನಡೆಸಿ ರ್ಯಾಲಿ ಬಗ್ಗೆ ಜಾಗೃತಿ ಮೂಡಿಸಲಾಗಿದೆ. 22 ಪಂಚಾಯತಗಳಿಂದ ಯುವಕರು ಬೈಕ್ ಗಳುಗೆ ಭಾಜಪ ಧ್ವಜವನ್ನು ಕಟ್ಟಿಕೊಂಡು ಸಭೆಗೆ ಆಗಮಿಸಲಿದ್ದಾರೆ. ಮನೆ ಮನೆಗೆ ಸಂಪರ್ಕ ನೀಡಿ ಕರ ಪತ್ರಗಳನ್ನು ಹಂಚಲಾಗಿದೆ. ಎಲ್ಲಾ ರೀತಿಯಿಂದಲೂ ಕಾರ್ಯಕ್ರಮದ ಕುರಿತಾಗಿ ಮಾಹಿತಿ ಹಂಚಿಕೆಯಾಗಿದ್ದು, ಯಶಸ್ವಿಯಾಗುತ್ತದೆ ಎಂಬ ನಂಬಿಕೆಯಿದೆ ಎಂದರು.
ವಿಕಾಸ ಆಶ್ರಮದಲ್ಲಿ ಸುಮಾರು 5 ಸಾವಿರ ಖುರ್ಚಿಗಳನ್ನು ಹಾಕಲಾಗಿದ್ದು, ಬರುವವರಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಗೋವಿಂದ್ ರಾವ್ ಹಾಲ್ ಪಕ್ಕದಲ್ಲಿ ಹಾಗೂ ಹಾಸ್ಟೆಲ್ ಗ್ರೌಂಡ್ ನಲ್ಲಿ ಮಾಡಲಾಗಿದೆ. ರ್ಯಾಲಿಯ ಪೂರ್ವ ಸಭೆಗಳಲ್ಲಿ ನಿರೀಕ್ಷೆ ಗೂ ಮೀರಿ ಜನರ ಸ್ಪಂದನೆ ದೊರಕಿದ್ದು, ಅತ್ಯುತ್ತಮವಾಗಿ ಸಂಘಟನೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮ ಯಶಸ್ವಿಯಾಗಲು ಕಳೆದ ಎರಡು ದಿನಗಳಿಂದ ಭರದಿಂದ ಸಿದ್ಧತೆಗಳು ನಡೆಯುತ್ತಿದ್ದು, ಶಿರಸಿ ಸಿದ್ದಾಪುರ ತಾಲೂಕಿನ ಪ್ರತಿ ಬೂತ್ ಮಟ್ಟದಲ್ಲಿಯೂ ಸಭೆ ನಡೆಸಿ ಜನರಿಗೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿದೆ. ನ.14 ರಂದು ಸಾಯಂಕಾಲ 6 ಘಂಟೆಗೆ ರ್ಯಾಲಿ ನಿಲೇಕಣಿ ತಲುಪಲಿದ್ದು, ಅಲ್ಲಿ ಬಿಜೆಪಿ ಪ್ರಮುಖರಿಂದ ರಾಜ್ಯ ನಾಯಕರಿಗೆ ಅದ್ಧೂರಿ ಸ್ವಾಗತ ನಡೆಯಲಿದೆ. ತದ ನಂತರದಲ್ಲಿ ಯುವ ಮೋರ್ಚಾ ಸದಸ್ಯರು ಬೈಕ್ ರ್ಯಾಲಿಯ ಮುಖಾಂತರ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಪ್ರಮುಖ ನಾಯಕರಾದ ಶೋಭಾ ಕರಂದ್ಲಾಜೆ, ಶ್ರೀರಾಮುಲು, ಕುಮಾರ ಬಂಗಾರಪ್ಪ, ಅನಂತಕುಮಾರ ಹೆಗಡೆ, ವಿಶ್ವೇಶ್ವರ ಹೆಗಡೆ ಸೇರಿದಂತೆ ಪ್ರಮುಖ ನಾಯಕರನ್ನು ವಿಕಾಸ ಆಶ್ರಯಕ್ಕೆ ಕರೆ ತರಲಿದ್ದಾರೆ. ಅಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, 10 ರಿಂದ 15 ಸಾವಿರಕ್ಕೂ ಅಧಿಕ ಜನರು ಸೇರುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಆರ್.ವಿ.ಹೆಗಡೆ ಚಿಪಗಿ, ಗಣಪತಿ ನಾಯ್ಕ, ರಿತೇಶ್ ಕೆ., ರಮಾಕಾಂತ್ ಭಟ್ ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.