ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಒತ್ತಾಯ : ಮನವಿ

 

ಶಿರಸಿ :ವಿವಿಧ ಬೇಡಿಕೆಗಳನ್ನು ಓಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ ಶಿರಸಿ ಶಾಖೆಯ ವತಿಯಿಂದ ಸಹಾಯಕ ಆಯುಕ್ತರ ಮೂಲಕ ಕೇಂದ್ರ ಸರ್ಕಾರ ಮನವಿ ಸಲ್ಲಿಸಲಾಯಿತು.

ಶನಿವಾರದಂದು ಮಾರಿಕಾಂಬಾ ದೇವಸ್ಥಾನದಿಂದ ಸಂಘದ ಸುಮಾರು ೫೦ ಕ್ಕೂ ಅಧಿಕ  ಸದಸ್ಯರು ಬೈಕ್ ರ್ಯಾಲಿಯ ಮೂಲಕ ಉಪವಿಭಾಧಿಕಾರಿಗಳ ಕಚೇರಿಗೆ ಆಗಮಿಸಿ ಅಖಿಲ ಭಾರತ ಔಷಧ ಮತ್ತು ಮಾರಾಟ ಪ್ರತಿನಿಧಿಗಳು ನ.೧೩ ರಂದು ಮುಂಬೈನಲ್ಲಿ ಹಮ್ಮಿಕೊಂಡಿರುವ ಮುಂಬಯಿ ನಡೆಯನ್ನು ಬೆಂಬಲಿಸಿ ಕೇಂದ್ರ ಸರ್ಕಾರಕ್ಕೆ ಮನವಿ ನೀಡಿದರು.

ಸೇಲ್ಸ ಪ್ರಮೋಷನ್ ಎಂಪ್ಲಾಯಿಸ್ ಕಾಯ್ದೆಯ ೧೯೭೬, ಮತ್ತು ಅದರ ನಿಯಮಾವಳಿಗಳಿಗೆ ವಿಧೇಯವಾಗಿರುವುದು, ಕೈಗಾರಿಕಾ ವಿವಾಧ ಕಾಯಿದೆ ೨೦೧೦ ರ ಅನ್ವಯ ಕುಂದು ಕೊರತೆ ನಿವಾರಿಸುವ ವೇದಿಕೆ ಕಲ್ಪಿಸುವುದು, ಮಹಿಳಾ ಮಾರಾಟ ಪ್ರತಿನಿಧಿಗಳ ೨೬ ವಾರಗಳವರೆಗೆ  ಪ್ರಸೂತಿ ರಜೆಯನ್ನು ವಿಸ್ತರಿಸುವುದು, ಅನೈತಿಕ ಮಾರಾಟ ಚಟುವಟಿಕೆಗಳನ್ನು ನಿಲ್ಲಿಸುವುದು ಹಾಗೂ ತಿಂಗಳ ವ್ಯಾಪಾರ ಅಂತ್ಯದಂದು ಪ್ರತಿನಿಧಿಗಳ ಮೇಲೆ ಒತ್ತಡ ಹೇರುತ್ತಿರುವ ಒತ್ತಡವನ್ನು ಕೊನೆಗೊಳಿಸುವುದು ಹಾಗೂ ವ್ಯಾಪಾರದ ಆಧಾರದ ಮೇಲೆ ಮಾರಾಟ ಪ್ರತಿನಿಧಿಗಳನ್ನು ಶಿಕ್ಷಿಸುವುದನ್ನು ತಡೆಗಟ್ಟಬೇಕು ಎಂಬ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ರಾಘವೇಂದ್ರ ಶೆಟ್ಟಿ, ವಿನಯ ಹೆಗಡೆ, ಅಜಯ್ ಶೆಟ್ಟಿ ಮುಂತಾದವರು ಇದ್ದರು.

 

 

Categories: ಜಿಲ್ಲಾ ಸುದ್ದಿ

Leave A Reply

Your email address will not be published.