ಜೀವ ರಕ್ಷಕ ಸಿಬ್ಬಂದಿಗಳಿಂದ ಇಬ್ಬರು ವಿದ್ಯಾರ್ಥಿಗಳ ರಕ್ಷಣೆ

 

ಗೋಕರ್ಣ: ಸಮುದ್ರ ಅಲೆಗೆ ಸಿಲುಕಿ ಕೊಚ್ಚಿಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಜೀವರಕ್ಷಕ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಇಲ್ಲಿನ ಮುಖ್ಯ ಕಡಲತೀರದಲ್ಲಿ ನಡೆದಿದೆ. ಬೆಂಗಳೂರಿನಿಂದ ಪ್ರವಾಸಕ್ಕೆ ಬಂದ ಏಳು ಜನರ ವಿದ್ಯಾಥಿಗಳು ನೀರಿನಲ್ಲಿ ಇಳಿದದ್ದರು, ಈ ಸಂದರ್ಭದಲ್ಲಿ ಅಲೆಯ ಸೆಳತಕ್ಕೆ ಇಬ್ಬರ ಕೊಚ್ಚಿ ಹೋಗಿದ್ದರು, ತಕ್ಷಣ, ಜೀವರಕ್ಷಕ ಸಿಬ್ಬಂದಿ sಸ್ಪೀಡ ಬೋಟ್ ಬಳಸಿ, ಎರಡು ಜನರನ್ನು ರಕ್ಷಿಸಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಉತ್ತರ ಪ್ರದೇಶ ಮೂಲದ ರಮೇಶ ಯಾದವ ಮತ್ತು ಮಧ್ಯಪ್ರದೇಶ ಮೂಲದ ಕಮಲೇಶ ತಿಳಿದು ಬಂದಿದೆ. ಜೀವರಕ್ಷಕ ಸಿಬ್ಬಂದಿಗಳಾದ , ಮೋಹನ ಅಂಬಿ , ಚಂದ್ರಕಾಂತ ಅಂಬಿ , ಹಾಗೂ ಪುರುಷೋತ್ತಮ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು ಇವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಇಲ್ಲಿನ ಕಡಲತೀರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಹಿಂದೆ ಹಲವರು ನೀರಿಗಿಳಿದು ಪ್ರಾಣ ಕಳೆದಕೊಂಡಿದ್ದರು ಕಳೆದು 4 ತಿಂಗಳಿಂದ ಜಿಲ್ಲಾಡಳಿತ ಜೀವರಕ್ಷ ಸಿಬ್ಬಂದಿ ನೇಮಿಸಿದ್ದು, ಇದರಿಂದ ಅನೇಕರ ಪ್ರಾಣ ಉಳಿದಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.