ಸ್ವಾತಂತ್ರ್ಯ ತಂದು ಕೊಟ್ಟವರನ್ನು ಮರೆಯುತ್ತಿರುವುದು ಖಂಡನೀಯ: ಕೆ.ಜಿ.ನಾಗರಾಜ

 

ಸಿದ್ದಾಪುರ: ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರನ್ನು ಮರೆಯುತ್ತಿರುವುದು ಖಂಡನೀಯ. ಕೆಲವರು ಟಿಪ್ಪು ಸುಲ್ತಾನ ಮತಾಂಧ ಎನ್ನುತ್ತಿದ್ದಾರೆ. ಆಡಳಿತ ನಡೆಸುವವನು ಎಲ್ಲರನ್ನು ಮೆಚ್ಚಿಸಲು ಸಾಧ್ಯವಿಲ್ಲ ಕೆಲವರಿಗೆ ಆಡಳಿತಗಾರರಿಂದ ತೊಂದರೆಯಾದರೆ ಬಹಳಷ್ಟು ಜನರಿಗೆ ಒಳ್ಳೆಯದಾಗಿರುತ್ತದೆ. ದೇಶದ ಸ್ವಾತಂತ್ರ್ಯಕ್ಕೆ ಹಲವಾರು ಜನರು ಹಲವಾರು ರೀತಿಯಲ್ಲಿ ಪ್ರಯತ್ನಪಟ್ಟಿದ್ದು ಅಂತಹವರನ್ನು ಮತಾಂಧರಂತೆ ಚಿತ್ರಿಸುವ ಮೂಲಕ ತಪ್ಪು ಮಾಡುತ್ತಿದ್ದೇವೆ ಎಂದು ಎ.ಪಿ.ಎಂ.ಸಿ. ಅಧ್ಯಕ್ಷ ಕೆ.ಜಿ.ನಾಗರಾಜ ಹೇಳಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ,ತಾಲೂಕು ಆಡಳಿತ ಹಾಗೂ ಮತ್ತಿತರ ಸಂಘಟನೆಗಳ ಆಶ್ರಯದಲ್ಲಿ ಶುಕ್ರವಾರ ಜರುಗಿದ ಹಜರತ್ ಟಿಪ್ಪುಸುಲ್ತಾನ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಹಸೀಲ್ದಾರ ಪಟ್ಟರಾಜ ಗೌಡ ಅಧ್ಯಕ್ಷತೆವಹಿಸಿದ್ದರು. ಸ್ಥಳೀಯ ಜಾಮೀಯಾ ಮಸಿದಿ ಅಧ್ಯಕ್ಷ ಮೆಹಬೂಬ್ ಅಲಿ, ಸಹಾಯಕ ಕೃಷಿ ನಿರ್ದೇಶಕ ಆರ್.ಪಿ.ಹೆಗಡೆ,ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಂದಕುಮಾರ ಪೈ ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.