ಶೀಥಿಲಗೊಂಡ ಸೇತುವೆ: ಗ್ರಾಮಸ್ಥರಿಂದ ದುರಸ್ತಿ


ಗೋಕರ್ಣ: ಪುರಾಣ ಪ್ರಸಿದ್ದ ಕ್ಷೇತ್ರಕ್ಕೆ ಹಿಂದಿನ ಕಾಲದಲ್ಲಿ ಬಹುಮುಖ್ಯ ರಸ್ತೆ ಸಂಪರ್ಕವಾಗಿದ್ದ ಇಲ್ಲಿನ ಅಶೋಕೆ ಕೋಟಿತೀರ್ಥದ ಮಾರ್ಗ ಇಂದು ಸಂಪೂರ್ಣ ಹದಗೆಟ್ಟಿದೆ. ಈಗಲೂ ಮಣ್ಣಿನ ಕಚ್ಚಾರಸ್ತೆಯೇ ಇದ್ದು, ಸಂಚರಿಸಲು ಕಷ್ಟವಾಗಿದೆ.ಹಿಂದಿನ ಕಾಲದಲ್ಲಿ ಯಾತ್ರಿಕರು ಕುಮಟಾ ಅಘನಾಶಿನಿ ಮಾರ್ಗವಾಗಿ ತದಡಿಗೆ ಬಂದು ಅಲ್ಲಿಂದ ಅಶೋಕೆ ತಲುಪಿ , ಅಲ್ಲಿಂದ ಅಜ್ಜಿಹಕ್ಕಲ ದಿಂದ ಪಟ್ಟೆ ವಿ ವಿನಾಯಕ ದೇವಸ್ಥಾನದ ಬಂದು ಕೋಟಿತೀರ್ಥಕ್ಕೆ ಬಂದು ತಲುಪುತ್ತಿದ್ದರು ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ. ಸುಮಾರು 3ಕಿ.ಮೀ. ಸಾಗುವ ಹಾದಿ ಒಂ, ಬೀಚ್ ಅಶೋಕೆ ತಡಡಿ, ಬೆಲಖಾನ ಮುಂತಾದ ಗ್ರಾಮ ಗಳಿಗೆ ಸಂಪರ್ಕ ಕಲ್ಪಿಸುತ್ತದೆ.ಹಲವು ಭಾರಿ ಜನಪ್ರತಿನಿಧಿಗಳಿ ತಿಳಿಸಿದರು ಯಾವುದೆ ಪ್ರಯೋಜನವಾಗದೆ ರೋಸಿ ಹೋಗಿರುವ ಇಲ್ಲಿನ ನಿವಾಸಿಗಳು ಸ್ವತಃ ರಸ್ತೆ ದುರಸ್ತಿಕಾರ್ಯದಲ್ಲಿ ತೊಡಗಿದ್ದಾರೆ. ವರ್ಷಕ್ಕೂಮ್ಮೆ ಮಹಾಬಲೆಶ್ವರ ದೇವರ ಉತ್ಸವ ಬರುವ ಸಮಯದಲ್ಲಾರೂ ಸರಿಪಡಿಸುತ್ತಿದ್ದರು ,ಆದರೆ ಈ ವರ್ಷ ಅದು ಸಹ ಮಾಡಿಲ್ಲ ಎಂದು ಸ್ಥಳೀಯರು ಆಪಾದಿಸುತ್ತಾರೆ. ಓಂ. ಬೀಚ್ ತೆರಳುವ ಹತ್ತಿರದ ರಸ್ತೆಯೂ ಇದೆ ಆಗಿದ್ದ, ಆದರೂ ಸಹ ದುರಸ್ತಿ ಮಾಡದಿರುವುದು ದುರಂತವಾಗಿದೆ .ಈ ಬಗ್ಗೆ ಪಂಚಾಯತ ಕಾರ್ಯದರ್ಶಿ ವಿಚಾರಿಸಿದಾಗ ಪ್ರತಿವರ್ಷ ಮಳೆಗಾಲದ ನಂತರ ರಸ್ತೆ ದುರಸ್ತಿಗೆ ಹಣ ನೀಡುತ್ತೇವೆ. ಎನ್ನುತ್ತಾರೆ.ಆದರೆ ಸರ್ವಋತು ರಸ್ತೆಯಾಗಿ ಮಾರ್ಪಡುವುದು ಯಾಗಾಗ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.
ಈ ಭಾಗದಿಂದ ಒಟ್ಟು 5 ಗ್ರಾಂ. ಪಂ. ಸದಸ್ಯರನ್ನು ಹೊಂದಿದ್ದು , ಗ್ರಾಂಪಚಾಯತದ ಅನುದಾನದಿಂದ À ಪೂರ್ಣಪ್ರಮಾಣದ ರಸ್ತೆ ನಿರ್ಮಾಣ ಮಾಡಲು ಆಗದಿದ್ದರೆ ಸ್ಥಳೀಯ ಶಾಸಕರ ಗಮನಕ್ಕೆ ತಂದು ಅವರ ಅನುದಾನದ ಅಡಿಯಾದರು ಸರ್ವಋತು ರಸ್ತೆ ಮಾಡಿಸುವ ಪ್ರಯತ್ನ ಗ್ರಾಂ. ಪಂ. ಸದಸ್ಯರು ಮಾಡಬೇಕಿದೆ.
ಇದೆ ರಸ್ತೆಯ ಆರಂಭದ ಪಟ್ಟೆವಿನಾಯಕ ದೇವಸ್ಥಾನದ ಹತ್ತಿರವಿರುವ ಸೇತುವೆ ಸಂಪೂರ್ಣ ಹಾಳಾಗಿದ್ದು, ಮಧ್ಯಭಾಗದಲ್ಲೆ ಹೊಂಡಬಿದ್ದಿದ್ದು, ಯಾವ ಸಮಯದಲ್ಲಿ ಬೀಳುತ್ತದೆ ಎಂಬುದು ತಿಳಿಯದಾಗಿದೆ. ಇದೇ ಮಾರ್ಗದಲ್ಲಿ ದಿನ ನಿತ್ಯ ನೂರಾರುಜನರು, ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಅವಘಡ ಸಂಭವಿಸುವ ಮೂದಲು ದುರಸ್ತಿಕಾರ್ಯ ಆಗಬೇಕಿದೆ. ದಿನನಿತ್ಯ ನೂರಾರು ಜನರು ಒಡಾಡುವ ರಸ್ತೆಯನ್ನು ಶೀಘ್ರವಾಗಿ ದುರಸ್ತಿಕಾರ್ಯ ಕೈಗೊಳ್ಳಬೇಕಿದೆ.
ಗ್ರಾಮ ಪಂಚಾಯತದಿಂದ 60 ಮೀಟರನಷ್ಟು ರಸ್ತೆ ನಿರ್ಮಿಸಿದ್ದೇವೆ. ಮಂದಿನ ರಸ್ತೆಯನ್ನು ಮಾಡುತ್ತೇವೆ. ಸೇತುವೆ ಶೀಥಿಲಗೊಂಡಬಗ್ಗೆ , ಮೂರು ವರ್ಷದ ಹಿಂದೆ ಶಾಸಕಿಯವರ ಗಮನಕ್ಕೆ ತಂದಿದ್ದು, ಹೂಸ ಸೇತುವೆ ನಿರ್ಮಿಸಿಕೊಡುವಂತೆ ಮನವಿ ಮಾಡಲಾಗಿದೆ ಎಂದು ಗ್ರಾಂ ಪಂ. ಸದಸ್ಯ ಮಂಜುನಾಥ ಜನ್ನು ಹೇಳಿದರು ನಮ್ಮ ಗ್ರಾಮಕ್ಕೆ ಚುನಾವಣೆ ಬಂದಾಗ ಮಾತ್ರ ಜನಪ್ರತಿನಿಧಿಗಳು ಭೇಟಿನೀಡುತ್ತಾರೆ. ನಂತರ ನಾಪತ್ತೆಯಾಗುತ್ತಾರೆ. ಇವರ ಡೊಂಗಿ ಉತ್ತರಕ್ಕೆ ತತ್ತರಿಸಿ ನಾವೇ ರಸ್ತೆ ದುರಸ್ತಿಕಾರ್ಯಕೈಗೊಂಡಿದ್ದೆವೆ ಎಂದು ಸ್ಥಳೀಯ ನಿವಾಸಿ ಗಣಪತಿ ಗೌಡ ಹೇಳಿದ್ದಾರೆ

Categories: ಜಿಲ್ಲಾ ಸುದ್ದಿ

Leave A Reply

Your email address will not be published.