40 ಕೆ.ಜಿ ಕಡವೆ ಮಾಂಸ ವಶ: ವ್ಯಕ್ತಿಯನ್ನು ಬಂಧಿಸಿದ ಅರಣ್ಯಾಧಿಕಾರಿಗಳು

ಯಲ್ಲಾಪುರ: ಕಡವೆ ಮಾಂಸ ಸಂಗ್ರಹಿಸಿಟ್ಟಿದ್ದ ವ್ಯಕ್ತಿಯೋರ್ವನನ್ನು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಇಡಗುಂದಿ ವಯಲ ಅರಣ್ಯಾಧಿಕಾರಿಗಳು ಅಂದಾಜು 40 ಕೆ.ಜಿ ಮಾಂಸವನ್ನು ವಶಪಡಿಸಿಕೊಂಡ ಘಟನೆ ಕೆಳಾಸೆಯಲ್ಲಿ ನಡೆದಿದೆ.
ತಾಲೂಕಿನ ಕೆಳಾಸೆಯ ನಾರಾಯಣ ನಾಗಪ್ಪ ಸಿದ್ದಿ ಬಂಧಿತ ವ್ಯಕ್ತಿ. ಈತ ಕಡವೆಯನ್ನು ಬೇಟೆಯಾಡಿ ಚರ್ಮ ಸುಲಿದು, ಮಾಂಸವನ್ನು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಎನ್ನಲಾಗಿದೆ. ಆರೋಪಿತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಯತೀಶಕುಮಾರ, ಎಸಿ.ಎಫ್ ಪ್ರಶಾಂತ ಮಾರ್ಗದರ್ಶನದಲ್ಲಿ ಇಡಗುಂದಿ ಆರ್.ಎಫ್.ಓ ಹಿಮವತಿ ಭಟ್ಟ, ಉಪವಲಯಾರಣ್ಯಾಧಿಕಾರಿ ಗಣೇಶಮೂರ್ತಿ ಗುನಗಾ, ಅರಣ್ಯ ರಕ್ಷಕರಾದ ಎಚ್.ಸಿ ಪ್ರಶಾಂತ, ಪ್ರಶಾಂತ ಮೆಹತಾ, ಮುತ್ಯಪ್ಪ ಚಿಪ್ಪಲಕಟ್ಟಿ, ಅರಣ್ಯ ವೀಕ್ಷಕ ಗಣಪತಿ ಮಡಿವಾಳ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.