ಬೀಳುವ ಸ್ಥಿತಿಯಲ್ಲಿ ತೆಂಗು-ಮಾವಿನ ಮರ: ತೆರವುಗೊಳಿಸಲು ಸ್ಥಳಿಯರ ಆಗ್ರಹ

ಗೋಕರ್ಣ : ಇಲ್ಲಿನ ಕೆ.ಎಸ್.ಆರ.ಟಿ.ಸಿ. ಬಸ್ ನಿಲ್ದಾಣ ಸಂಪೂರ್ಣ ಕಸದ ತೊಟ್ಟಿಯಾಗಿ ಮಾರ್ಪಟಿದ್ದು ,ಈ ಬಗ್ಗೆ ಹಲವು ಭಾರಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು, ಆದರೂ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ದಿವ್ಯ ನಿರ್ಲಕ್ಷವಹಿಸಿದ್ದು ಇವತ್ತಿಗೂ ಸಹ ಹಾಗೆ ಇದೆ.ಕನಿಷ್ಠ ನಾಮಫಲಕ ಹಾಕುವ ಕೆಲಸ ಸಹಿತ ಮಾಡಿದಿರುವುದು ಇವರ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದೆ. ಇದೆ ಬಸ್ ನಿಲ್ದಾಣದಲ್ಲಿ ಮತ್ತೊಂದು ಆವಾಂತರಕ್ಕೆ ಮುನ್ನುಡಿ ಬರೆಯವ ಲಕ್ಷಣ ಕಾಣುತ್ತಿದೆ. ನಿಲ್ದಾಣ ಆವರಣದಲ್ಲಿ ಹಲವು ದಿನಗಳಿಂದ ತೆಂಗಿನಮರ ಮತ್ತು ಮಾವಿನ ಮರ ಬಿಳುವ ಸ್ಥಿತಿಯಲ್ಲಿದ್ದು ದಿನ ಸಾವಿರಾರು ಜನರು ಓಡಾಡುವ ಜಾಗದಲ್ಲಿ ಅನಾಹುತ ಆಗುವ ಮೂದಲು ಮರ ತೆರವು ಮಾಡಬೇಕಾಗಿದೆ. ಈಗಲಾದರು ಅಧಿüಕಾರಿಗಳು ನಿದ್ದೆಯಿಂದ ಎದ್ದು ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಅಲ್ಲದೆ ಏನದರೂ ಅವಘಡ ಸಂಭಂವಿಸಿದರೆ ಸಂಬಂಧಿಸಿದ ಇಲಾಖೆಯೆ ಜವಾಬ್ದಾರರು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.